ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ನ್ಯಾಯಾಲಯದಲ್ಲಿ ಹಾಜರಾದ ಆರೋಪಿ ಹಿಂಜಾವೇ ಕಾರ್ಯಕರ್ತರು - ಹದಿನೈದು ದಿನಗಳ ನ್ಯಾಯಾಂಗ ಬಂಧನ

ಭಟ್ಕಳ:ನ್ಯಾಯಾಲಯದಲ್ಲಿ ಹಾಜರಾದ ಆರೋಪಿ ಹಿಂಜಾವೇ ಕಾರ್ಯಕರ್ತರು - ಹದಿನೈದು ದಿನಗಳ ನ್ಯಾಯಾಂಗ ಬಂಧನ

Tue, 08 Dec 2009 17:34:00  Office Staff   S.O. News Service
ಭಟ್ಕಳ, ಡಿಸೆಂಬರ್ ೮: ಇಂದು ಮಧ್ಯಾಹ್ನ ಭಟ್ಕಳ ನಗರಠಾಣೆಯ ಪೋಲಿಸರು ಹಿಂದು ಜಾಗರಣ ವೇದಿಕೆಯ  ಇಬ್ಬರು ಕಾರ್ಯಕರ್ತರನ್ನು ಕೈಕೊಳ ಹಾಕಿ ಕಾಲ್ನಡಿಗೆಯಲ್ಲಿಯೆ  ತಂದು ನ್ಯಾಯಲಯಕ್ಕೆ ಹಾಜರುಪಡಿಸಿದ್ದು ನ್ಯಾಯಲಯವು ಆರೋಪಿಗಳನ್ನು 15 ದಿನಗಳವರೆಗೆ ನ್ಯಾಯಂಗ ಬಂಧನ ವಿಧಿಸಿದೆ. 
 
ಇಂದಿನ ಘಟನೆಯನ್ನು ಬಲವಾಗಿ ವಿರೋಧಿಸಿದ ನೂರಾರು ಹಿಂಜಾವೆ ಕಾರ್ಯಕರ್ತರು ಭಟ್ಕಳ ಜೆ.ಎಮ್.ಎಫ್.ಸಿ. ನ್ಯಾಯಲಯದ ಎದುರು ಪ್ರತಿಭಟನೆ ನಡೆಸಿ ಪೋಲಿಸರ ವಿರುದ್ಧ ಘೋಷಣೆಯನ್ನು ಕೂಗಿ ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೆ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಹಿಂಜಾವೇಯ ಉತ್ತರಪ್ರಾಂತ ಸಂಚಾಲಕ ಗೋವಿಂದ ನಾಯ್ಕ ಸೇರಿದಂತೆ ಇತರ ನಾಲ್ಕು ಜನರ ಮೇಲೆ ಬಿಜೆಪಿಯ ಪ್ರಮೂಖ ಮೋಹನ್ ನಾಯ್ಕ ಎಂಬುವವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿ ಈ ಐದು ಜನರ ವಿರುದ್ದ ನಗರ ಠಾಣೆಯಲ್ಲಿ ದೂರನ್ನು  ನೀಡಿದ್ದರು ದೂರು ದಾಖಲಿಸಿಕೊಂಡ ಪೋಲಿಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಹಿಂಜಾವೆ ಕಾರ್ಯಕರ್ತರಾದ ಮಾದೇವ ನಾಯ್ಕ ಹಾಗೂ ಈಶ್ವರ್ ನಾಯ್ಕ ಎಂಬುವವರನ್ನು ಸೋಮುವಾರ ಬಂಧಿಸಿದ್ದರು. ಇಂದು ಮದ್ಯಾಹ್ನ ಅವರನ್ನು ನ್ಯಾಯಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಕೈಕೊಳವನ್ನು ತೊಡಿಸಿ ಕಲ್ನಡಿಗೆಯಲ್ಲೆ ಕರೆದುಕೊಂಡು ಬಂದಿದ್ದರು. ಇದನ್ನು ವಿರೋಧಿಸಿದ ಹಿಂಜಾವೆ ಕಾರ್ಯಕರ್ತರು ಇದು ಕಾನೂನು ಉಲ್ಲಂಘನೆಯಾಗಿದ್ದು ಕೂಡಲೆ ಇದಕ್ಕೆ ಕಾರಣಿಕರ್ತರಾದ ಪೋಲಿಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಪೋಲಿಸರ ವಿರುದ್ಧ ಘೋಷಣೆಯನ್ನು ಕೂಗಲಾರಂಭಿಸಿದರು. ನಂತರ ಡಿ.ವೈ‌ಎಸ್.ಪಿ ವೇದಮೂರ್ತಿ, ಸಿ.ಪಿ.ಐ. ಗುರುಮತ್ತೂರು ಎಸೈ ಮಂಜುನಾಥ್ ಗೌಡರ ಮದ್ಯಪ್ರವೇಶದಿಂದಾಗಿ ವಾತವರಣ ತಿಳಿಗೊಂಡಿತು ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ತಮ್ಮಲ್ಲಿ ವಾಹನದ ಕೊರತೆಯ ಕಾರಣದಿಂದ ಆರೋಪಿಗಳನ್ನು ಕಲ್ನಡಿಗೆಯಲ್ಲಿಯೆ ಕರೆದುಕೊಂಡು ಹೋಗಿದ್ದು ಅಲ್ಲದೆ ಬಂಧಿತ ಆರೋಪಿಗಳ ಮೇಲೆ ಕ್ರೂರ (೩೯೫) ಪ್ರಕರಣ ದಾಖಲಾಗಿರುವುದರಿಂದ ಅವರಿಗೆ ಕೈಕೊಳ ತೊಡಿಸಲು ಕಾನೂನುಲ್ಲಿ ಅವಕಾಶವಿದ್ದು ಇದು ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ, ಅಲ್ಲದೆ ಆರೋಪಿಗಳು ತಪ್ಪಿಸಿಕೊಳ್ಳುವ ಭಯವಿದ್ದುದರಿಂದಾಗಿ ಕೈಕೊಳ ಹಾಕಿ ನ್ಯಾಯಲಯಕ್ಕೆ ತರಬೇಕಾಯಿತೆಂದು ಉನ್ನತ ಪೋಲಿಸ್ ಅಧಿಕಾರಿಗಳು ಸ್ಪಷ್ಟಪಡಿದ್ದಾರೆ ಎನ್ನಲಾಗಿದೆ. 

ಸಂಸದರ ಭೇಟಿ: ಇಂದು ಹಿಂಜಾವೇ ಕಾರ್ಯಕರ್ತರನ್ನು ಕೈಕೊಳತೊಡಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ ಘಟನೆಯ ಕುರಿತು ಮಾಹಿತಿಯನ್ನು ಪಡೆಯಲು ಉತ್ತರಕನ್ನಡ ಲೋಕಸಭೆ ಕ್ಷೇತ್ರದ ಸಂಸದ ಅನಂತ ಕುಮಾರ್ ಹಗಡೆ ಅವರು ಇಂದು ಸಂಜೆ ಭಟ್ಕಳಕ್ಕೆ ಭೇಟಿನೀಡಿದ್ದು ಈ ಕುರಿತು ಸಂಘಪರಿವಾರದ ಎರಡೂ ಗುಂಪಿನವರೊಂದಿಗೆ ಮಾತುಕತೆಯಾಡಿದ್ದಾಗಿ ತಿಳಿದು ಬಂದಿದೆ. ನಂತರ ಅವರು ಪತ್ರಿಕಾಗೊಷ್ಟಿಯಲ್ಲಿ ಹಿಂದು ಹೋರಾಟವನ್ನು ಬಿಡುವಂತಹ ಪ್ರಶ್ನೆಯೆ ಇಲ್ಲ ಎಂದ ಅವರು ಇದನ್ನು ದಮನಿಸಲು ಮಾಡುತ್ತಿರುವವರ ಪ್ರಯತ್ನಗಳನ್ನು ತಾವು ವಿಫಲಗೊಳಿಸುವುದಾಗಿ ತಿಳಿಸಿದರು.  ಇಂದಿನ ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದ ಅವರು ಹಿಂದು ಪರ ಚಟುವಟಿಕೆಗಳು ಯಾರ ಒತ್ತಡಕ್ಕೆ ಮಣಿಯದೆ ನಿರಂತರವಾಗಿ ನಡೆಯಲಿವೆ ಎಂದರು. 
 
ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ ವಿನೋದ್ ಪ್ರಭು ಅವರ ಗೆಲುವು ನಿಶ್ಚಿತ ಎಂದರು. 

ನಂತರ ಬಂಧಿತ ಅರೋಪಿಗಳನ್ನು ಭೇಟಿಯಾದ ಸಂಸದರು ಈ ಕುರಿತು ಪೋಲಿಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದಾಗಿ ತಿಳಿದುಬಂದಿದೆ. 

Share: