ಹಾಸನ, ಡಿಸೆಂಬರ್ 11: ಡಿಸೆಂಬರ್ 13ರ ಭಾನುವಾರದಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಹಾಸನ, ಶಾಲಾಕ್ಯ ತಂತ್ರ ವಿಭಾಗ ಮತ್ತು ಶ್ರೀಧರರಿಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ, ಕೇರಳ ಇವರ ಸಹಯೋಗದೊಂದಿಗೆ ಕಣ್ಣಿಗೆ ಸಂಬಂಧಪಟ್ಟ ಖಾಯಿಲೆಗಳಾದ ದೂರ ಹಾಘೂ ಸಮೀಪದೃಷ್ಟಿದೋಷ, ಮಂದ ದೃಷ್ಟಿ, ಕಣ್ಣಿನ ಅಲರ್ಜಿ, ಮೆಳ್ಳಗಣ್ಣು ಹಾಗೂ ಸ್ವಸ್ಥ ಕಣ್ಣುಗಳ ಸಂರಕ್ಷಣೆ ಮತ್ತು ದೃಷ್ಟಿ ವರ್ಧನೆಯಲ್ಲಿ ಆಸಕ್ತಿ ಉಳ್ಳವರಿಗೆ ಈ ವಿಶೇಷ ತಪಾಸಣಾ ಮತ್ತು ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ.
ಜಿಲ್ಲೆಯ ಹಾಗು ಸುತ್ತಮುತ್ತಲಿನ ನಾಗರೀಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳ್ಳಲಾಗಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ ೦೮೧೭೨-೨೫೬೪೬೦,೬೧,ನ್ನು ಸಂಪರ್ಕಿಸಿ.
ಸಾಧಕರಿಗಾಗಿ ರಾಷ್ಟ್ರೀಯ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ಅಭಿವೃದ್ಧಿ ನಿಗಮ ನೊಂದಾಯಿತ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ತನ್ನ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಆರ್ಥಿಕ ಅಭಿವೃದ್ಧಿ, ವೈದ್ಯಕೀಯ ಅಭಿವೃದ್ಧಿ ಶೈಕ್ಷಣಿಕ ಅಭಿವೃದ್ಧಿ, ವೈಜ್ಞಾನಿಕ ಅಭಿವೃದ್ಧಿ, ಸಂಶೋಧನೆ, ವಾಸ್ತು, ಧಾರ್ಮಿಕ, ಕಲೆ, ಶಿಲ್ಪಕಲೆ, ಸಂಗೀತ, ನೃತ್ಯ, ನಾಟಕ, ಪ್ರಕಾಶನ, ಕ್ರೀಡೆ, ಚಲನಚಿತ್ರ, ಕಿರುತರೆ, ಕೈಗಾರಿಕಾ ಕ್ಷೇತ್ರ ಸಮಾಜಸೇವೆ ಕರಕುಶಲತೆ ಮತ್ತು ಆಡಳಿತ ಸೇವೆ ಮುಂತಾದ ಸಾಧನೆಮಾಡಿದ ಕ್ರಿಯಾಶೀಲ ವ್ಯಕ್ತಿ, ಮಹಿಳೆ ಮತ್ತು ಸಂಸ್ಥೆಗಳಿಂದ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮದರ್ ತೆರೇಸಾ ರಾಷ್ಟ್ರೀಯ ಸ್ತ್ರೀ ರತ್ನ, ಪ್ರಶಸ್ತಿ, ರಾಷ್ಟ್ರೀಯ ವಿಶಿಷ್ಟ ವೃತ್ತಿ ಸೇವಾ ಪ್ರಶಸ್ತಿ, ರಾಷ್ಟ್ರೀಯ ಸಮಾಜ ರತ್ನ, ಸೇವಾರತ್ನ ಪ್ರಶಸ್ತಿ, ರಾಹುಲ್ ಗಾಂಧಿ ರಾಷ್ಟ್ರೀಯ ಯುವ ಸಾಧಕ ಪ್ರಶಸ್ತಿ.
ಪ್ರಶಸ್ತಿ ಪ್ರಧಾನ ಸಮಾರಂಭವು ಜನವರಿ ತಿಂಗಳಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷ್ಷೇತ್ರದಲ್ಲಿ ನಡೆಯಲಿದ್ದು, ಆಸಕ್ತರು ಅಗತ್ಯವಾದ ಮಾಹಿತಿಯೊಂದಿಗೆ ಅನ್ವಯಿಸುವ ಪ್ರಶಸ್ತಿಯನ್ನು ನಮೂದಿಸಿ ಈ ಕೆಳಕಂಡ ವಿಳಾಸಕ್ಕೆ ಈ ತಿಂಗಳ ೨೦ರ ಒಳಗೆ ಕಳುಹಿಸಲು ವಿನಂತಿಸಲಾಗಿದೆ.
ಅಧ್ಯಕ್ಷರು/ಕಾರ್ಯದರ್ಶಿ, ಭಾರತೀಯ ಅಭಿವೃದ್ಧಿ ನಿಗಮ, ನಂ.೧೭, ೨ನೇ ಮಹಡಿ, ೩ನೇ ಅಡ್ಡರಸ್ತೆ ಮುನೇಶ್ವರ ಗುಡಿ ಮಾರ್ಗ, ನಾಗಶೆಟ್ಟಿಹಳ್ಳಿ, ಸಂಜಯನಗರ, ಬೆಂಗಳೂರು-೫೮೦೦೯೪, ಮೊಬೈಲ್ ೯೪೪೯೦೪೨೩೯೯,೯೮೪೫೮೧೭೫೩೮.