ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ದಸಂಸದ ಒಗ್ಗಟ್ಟಿನ ದಮನಕ್ಕೆ ಷಡ್ಯಂತ್ರ ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ದಸಂಸ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ

ದಸಂಸದ ಒಗ್ಗಟ್ಟಿನ ದಮನಕ್ಕೆ ಷಡ್ಯಂತ್ರ ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ದಸಂಸ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ

Sat, 01 May 2010 10:20:00  Office Staff   S.O. News Service

ದಸಂಸದ ಒಗ್ಗಟ್ಟಿನ ದಮನಕ್ಕೆ ಷಡ್ಯಂತ್ರ

ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ದಸಂಸ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ

 

ಚಿಂತಾಮಣಿ: ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಪ್ರಜಾಪ್ರಭುತ್ವದಡಿಯಲ್ಲಿ ದಲಿತರಲ್ಲಿ ಸ್ವಾಭಿಮಾನ, ಸ್ವಾವಲಂಬನೆ ಸೇರಿದಂತೆ ದಲಿತರ ಐಕ್ಯತೆಗೆ ಹೋರಾಟ ನಡೆಸುತ್ತಿರುವ ದಲಿತ ಸಂಘಟನೆಗಳ ಒಗ್ಗಟ್ಟನ್ನು ದಮನ ಮಾಡಲು ರಾಜ್ಯದ ಮನುವಾದಿ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಷಡ್ಯಂತ್ರ ರೂಪಿಸಿ, ದಲಿತ ಸಂಘಟನೆಗಳ ನಾಯಕರನ್ನು ಆಸೆ ಬುಡುಕರನ್ನಾಗಿ ಮಾಡಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ ಗಂಭೀರ ಆರೋಪ ಮಾಡಿದ್ದಾರೆ.
 
 ನಗರದ ಆಝಾದ್ ಚೌಕದಲ್ಲಿಂದು ಸ್ಥಳೀಯ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 119ನೆ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಒಂದು ಕಡೆ ನಾವು ಶೋಷಿತರ ಧ್ವನಿಯಾಗಿದ್ದ ಅಂಬೇಡ್ಕರ್ ಅವರ ಜನ್ಮ ಜಯಂತಿ ಆಚರಣೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಆಳುವ ಸರಕಾರಗಳು ದಲಿತರಿಗೆ ವಂಚನೆ ಮಾಡುವ ಕೆಲಸದಲ್ಲಿ ನಿರತವಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
   
ಜನಸಂಖ್ಯಾ ಅಧಾರದ ಮೇಲೆ ಜನಾಂಗಕ್ಕೆ ಹಣ ನೀಡಬೇಕು ಎಂದು ಕೇಂದ್ರ ಯೋಜನಾ ಆಯೋಗದ ನಿರ್ದೇ ಶನ ಇದೆ. ಆದರೆ ಯಡಿಯೂರಪ್ಪನವರು ಸಮಾಜದಲ್ಲಿ ಶೇ. 70ರಷ್ಟಿರುವ ದಲಿತರಿಗೆ ಕೇವಲ 2600 ಕೋಟಿ ರೂ. ಮಾತ್ರ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಯಡಿಯೂರಪ್ಪನವರು ಸಂವಿಧಾನ ಬದ್ಧವಾಗಿ ದಲಿತರಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡದೆ ಸಂವಿಧಾನ ವಿರೋದಿ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕದಸಂಸ ತಾಲೂಕು ಸಂಚಾಲಕ ವಿಜಯನರಸಿಂಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿಚಾರ ವಾದಿಗಳಾದ ಪ್ರಾಂಶುಪಾಲ ಮುಹಮ್ಮದ್ ಖಾಸಿಂ, ಎನ್.ಕೃಷ್ಣ ಅಂಬೇಡ್ಕರ್‌ರ ವಿಚಾರ ಧಾರೆಗಳ ಬಗ್ಗೆ ಮಾತನಾಡಿದರು.

ದಸಂಸ ರಾಜ್ಯ ಮುಖಂಡ ಎಂ.ಜಯಣ್ಣ, ರಾಜ್ಯ ಸಂಘಟನಾ ಸಂಚಾಲಕ ಭದ್ರಾವತಿ ಸತ್ಯಾ, ಹೆಣ್ಣೂರು ಶ್ರೀನಿವಾಸ್, ಜಿಲ್ಲಾ ಸಂಚಾಲಕ ಬಿ.ಎನ್. ಗಂಗಾಧರ್, ಸಂಘಟನಾ ಸಂಚಾಲಕ ಸನಂದಕುಮಾರ್, ಮೇಲೂರು ಮಂಜುನಾಥ, ಕವಾಲಿ ವೆಂಕಟರವಣಪ್ಪ, ಕೆ.ಲಕ್ಷ್ಮೀ ನಾರಾಯಣ, ಎಂ.ಕೇಶವ, ಎನ್.ಶ್ರೀನಿವಾಸ್, ಆಂಜಿನಪ್ಪ, ಕಡ್ಡೀಲು ವೆಂಕಟರವಣಪ್ಪ, ಸಂಘದ ತಾಲೂಕು ಮುಖಂಡರಾದ ಕೆ.ಚಂದ್ರಪ್ಪ, ಶ್ರೀರಾಮಪ್ಪ, ಕೆ.ನಾರಾಯಣಸ್ವಾಮಿ, ಚಲಪತಿ, ಅಮರ್, ರಘು, ಜೈಕೃಷ್ಣ, ನವೀದ್, ಸುಮಂತ್, ಮುನೇಂದ್ರಪ್ಪ, ಮುನಿಹನುಮಯ್ಯ, ಈಶ್ವರ್, ಭಾಗ್ಯಮ್ಮ, ದೇವಮ್ಮ, ಆಂಜಮ್ಮ, ರಾಮಕ್ಕ, ಮಂಜುಳ, ಮುನಿಯಮ್ಮ, ಚಿನ್ನಪ್ಪ ಹಾಗೂ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮೊದಲು ನಗರದ ಮುಖ್ಯ ರಸ್ತೆಗಳಲ್ಲಿ ಅಂಬೇಡ್ಕರ್ ಭಾವಚಿತ್ರ ದೊಂದಿಗೆ, ಸಾಂಸ್ಕೃತಿಕ ಕಲಾ ಮೇಳ ಗಳೊಂದಿಗೆ ಮೆರವಣಿಗೆ ನಡೆಸಲಾಯಿತು.


Share: