ಮಂಗಳೂರು, ಸೆ.30: ಗೋವಾದಿಂದ ನಕಲಿ ಮದ್ಯವನ್ನು ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಅಬಕಾರಿ ಜಂಟಿ ಆಯುಕ್ತರ ನೇತೃತ್ವದ ವಿಶೇಷ ತನಿಖಾ ದಳ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಆತನಿಂದ 420 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.
ಗೋವಾದಲ್ಲಿ ನಿರ್ಮಿಸಲಾದ ನಕಲಿ ಮದ್ಯವನ್ನು ರೈಲಿನ ಮೂಲಕ ಸುರತ್ಕಲ್ಗೆ ತಂದು ಅಲ್ಲಿಂದ ಕೇರಳಕ್ಕೆ ಸಾಗಿಸಲು ಪ್ರಯತ್ನಿಸುತ್ತಿದ್ದ ಸುಳಿವು ದೊರೆತ ಅಬಕಾರಿ ವಿಶೇಷ ದಳ ಇಂದು ಕಾರ್ಯಾಚರಣೆ ನಡೆಸಿ ಒರಿಸ್ಸಾ ಮೂಲದ ಕೃಷ್ಣ ನಾಯಕ್ ಎಂಬಾತನನ್ನು ಬಂಧಿಸಿ ಆತನಿಂದ ಪ್ಲಾಸ್ಟಿಕ್ ಕ್ಯಾನ್ ಹಾಗೂ ಬಾಟಲಿ ಗಳಲ್ಲಿ ತುಂಬಿದ್ದ ಮದ್ಯವನ್ನು ವಶ ಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಅಬಕಾರಿ ಜಂಟಿ ಆಯುಕ್ತ ಭೀಮಪ್ಪ, ಇನ್ಸ್ಪೆಕ್ಟರ್ ವಿನೋದ್ಕುಮಾರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.