ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅಡ್ಡಬಂದ ನಾಯಿ ಮೇಲಿನಿಂದ ಉರುಳಿದ ಬೈಕ್ - ಲಡ್ಕಾ ಇಬ್ರಾಹಿಂ ರಿಗೆ ತೀವ್ರತರದ ಗಾಯ

ಭಟ್ಕಳ: ಅಡ್ಡಬಂದ ನಾಯಿ ಮೇಲಿನಿಂದ ಉರುಳಿದ ಬೈಕ್ - ಲಡ್ಕಾ ಇಬ್ರಾಹಿಂ ರಿಗೆ ತೀವ್ರತರದ ಗಾಯ

Sun, 07 Feb 2010 03:20:00  Office Staff   S.O. News Service

ಭಟ್ಕಳ, ಫೆಬ್ರವರಿ ೭: ನಿನ್ನೆ ರಾತ್ರಿ ಸುಮಾರು ಒಂಭತ್ತೂವರೆಯ ಹೊತ್ತಿನಲ್ಲಿ ಅಡ್ಡ ಬಂದ ನಾಯಿಯ ಮೇಲೆ ಹಾದು ಹೋದ ಬೈಕ್ ಉರುಳಿದ ಪರಿಣಾಮವಾಗಿ ಸವಾರರಾದ ರುಕ್ನುದ್ದೀನ್ ಮೊಹಮ್ಮದ್ ಇಬ್ರಾಹಿಂ (ಲಡ್ಕಾ ಇಬ್ರಾಹಿಂ) ರವರು ತೀವ್ರವಾಗಿ ಗಾಯಗೊಂಡಿದ್ದಾರೆ.

 

 

 

ಭಟ್ಕಳ ಗ್ರಾಮಾಂತರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೆಳನಿಯಲ್ಲಿ ಈ ಘಟನೆ ನಡೆದಿದ್ದು ಇಬ್ರಾಹಿಂ ರವರ ಕಾಲಿನ ಮೂಳೆ ಮುರಿದಿದೆ ಹಾಗೂ ತಲೆಗೂ ಪೆಟ್ಟಾಗಿದೆ.

 

ಅವರನ್ನು ಕೂಡಲೇ ಭಟ್ಕಲ ವೆಲ್ಫೇರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆಯ ಬಳಿಕ ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿಗೆ ಕೊಂಡೊಯ್ಯಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

 


Share: