ಭಟ್ಕಳ, ಫೆಬ್ರವರಿ 23: ಭಟ್ಕಳವು ಯಾವುದೇ ಭಯೋತ್ಪಾದಕತೆಯ ತಾಣವಲ್ಲ. ಯಾವುದೇ ವ್ಯಕ್ತಿಯ ಕುರಿತು ಸಮರ್ಪಕ ತನಿಖೆಯನ್ನು ಮಾಡದೆ ಸುಳ್ಳಾರೋಪವನ್ನು ಹೊರಿಸುವ ಕ್ರಮ ಸರಿಯಲ್ಲ ಎಂದು ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಡಿ.ನಾಯ್ಕ ಹೇಳಿದರು. ಅವರು ಇಂದು ಮದ್ಯಾಹ್ನ ಮಜ್ಲಿಸೆ ಇಸ್ಲಾಹ್ ತಂಝೀಮ್ ನ ಕಾರ್ಯಲಯದಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಭಟ್ಕಳದ ಕುರಿತು ಸಂಯಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯು ಕಪೋಲಕಲ್ಪಿತವಾಗಿದ್ದು ಇಲ್ಲಿನ ಸುಲ್ತಾನ್ ಮಸೀದಿ ಹಾಗೂ ಚಿನ್ನದ ಪಳ್ಳಿಯನ್ನು ಭಯೋತ್ಪಾದನೆ ಯ ತಾಣವೆಂದು ಚಿತ್ರಿಕರಿಸಿದ್ದು ಇದರಿಂದ ಭಟ್ಕಳದ ಶಾಂತಿ ಸೌಹಾರ್ಧತೆಗೆ ಧಕ್ಕೆಯುಂಟಾಗುತ್ತದೆ. ಇಂತಹ ಕೃತ್ಯವೆಸಗಿದ ಯಾರೇ ಆಗಲಿ ಅವರಿಗೆ ಕಾನೂನು ರಿತ್ಯ ಕ್ರಮವನ್ನು ಜರುಗಿಸಬೇಕು ಎಂದು ಅವರು ಹೇಳಿದರು. ಮಾಧ್ಯಮಗಳು ಬಿಂಬಿಸುವಂತೆ ಇಲ್ಲಿ ಯಾವುದೆ ಭಯೋತ್ಪಾದನ ಕೃತ್ಯಗಳು ನಡೆದಿಲ್ಲ. ಅಂತಹದ್ದೇನಾದರೂ ಆದರೆ ನಾವೆಲ್ಲರೂ ಮುಂದೆ ನಿಂತು ಅಂತಹ ವ್ಯಕ್ತಿಗಳನ್ನು ಹಿಡಿದು ಕಾನೂನಿಗೆ ಒಪ್ಪಿಸುತ್ತೇವೆ ಎಂದ ಅವರು ರಿಯಾಝ್ ಭಟ್ಕಳ್ ನ ಕುರಿತು ಪತ್ರಿಕೆಯೊಂದರಲ್ಲಿ ಅವರ ತಾಯಿ ಹೇಳಿದಂತೆ ಯಾವುದೆ ತನಿಖೆಯನ್ನು ಕೈಗೊಳ್ಳದೆ ಭಯೋತ್ಪಾದಕ ಎಂಬ ಅರೋಪವನ್ನು ಹೊರಿಸುವುದು ಸರಿಯಲ್ಲ ಎಂದು ಯಾವುದೆ ಆರೋಪವನ್ನು ಹೊರಿಸುವ ಮೊದಲು ಅದರ ಕುರಿತು ಸಮರ್ಪಕ ತನಿಖೆಯಾಗಬೇಕು ಎಂದ ಅವರು ಇದು ಭಟ್ಕಳದಲ್ಲಿ ಹಿಂದು ಮುಸ್ಲಿಮರ ಸೌಹರ್ಧತೆಯಲ್ಲಿ ಬಿರುಕನ್ನುಂಟು ಮಾಡಲು ಕೆಲವು ದುಷ್ಕರ್ಮಿಗಳು ಮಾಡಿರುವ ತಂತ್ರವಾಗಿದೆ ಎಂದರು.
ಸುಲ್ತಾನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಪುರಸಭೆಯ ಅಧ್ಯಕ್ಷರೂ ಆಗಿರುವ ಪರ್ವೇಝ್ ಕಾಶಿಮಜಿ ಮಾತನಾಡಿ ಭಟ್ಕಳದ ನವಾಯತ್ ಸಮುದಾಯದವನ್ನು ಇರಾನಿಯರು ಎಂದು ಸಂಯಕ್ತ ಕರ್ನಾಟದ ವರದಿಯಲ್ಲಿ ಚಿತ್ರಿಸಿ ನಮ್ಮ ಸಮುದಾಯಕ್ಕೆ ನೂವುನ್ನುಂಟು ಮಾಡಿದೆ. ನಾವು ಭಾರತೀಯರು ಇರಾನ್ ಮೂಲದವರಲ್ಲ ಎಂದ ಅವರು ಭಟ್ಕಳದ ಹೃದಯ ಭಾಗದಲ್ಲಿರುವ ಎರಡು ಮಸೀದಿಗಳನ್ನು ಭಯೋತ್ಪಾದಕರ ತಾಣ ಅಲ್ಲಿ ಯಾರನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ಸುಳ್ಳು ವರದಿಯನ್ನು ಪ್ರಕಟಿಸಿ ಪತ್ರಿಕಾ ಧರ್ಮಕ್ಕೆ ದ್ರೋಹವನ್ನು ಬಗೆದಿದೆ. ಯಾವುದೆ ಸಾಕ್ಷ್ಯಧಾರಗಳಿಲ್ಲದೆ ಇಂತಹ ವರದಿಯನ್ನು ಪ್ರಕಟಿಸಿದ ಪತ್ರಿಕೆಯು ತನ್ನ ಪತ್ರಿಕಾ ಧರ್ಮಕ್ಕೆ ದ್ರೋವಹವನ್ನುಂಟು ಮಾಡಿದೆ ಎಂದ ಅವರು ಭಟ್ಕಳದ ಈ ಎರಡು ಮಸೀದಿಗಳಲ್ಲಿ ಯಾವುದೇ ವ್ಯಕ್ತಿಯು ದಿನದ ೨೪ ಗಂಟೆ ಪವ್ರೇಶಿಸಬಹುದಾಗಿದ್ದು ಮಸೀದಿಗೆ ಭೇಟಿ ನೀಡುವಂತೆ ಮಾದ್ಯಮದವರನ್ನು ಮುಕ್ತವಾಗಿ ಆಹ್ವಾನಿಸಿದರು. ಭಟ್ಕಳದಲ್ಲಿ ಮಜ್ಲಿಸೆ ಇಸ್ಲಾಹ್ ವ-ತಂಝೀಮ್ ಇಲ್ಲಿ ಹಲವಾರು ವರ್ಷಗಳಿಂದ ಶಾಂತಿ ಸೌಹರ್ಧತೆ ಕೋಮು ಸಾಮರಸ್ಯವನ್ನು ಉಂಟುಮಾಡುವಲ್ಲಿ ಪ್ರಯತ್ನವನ್ನು ಮಾಡುತ್ತಿದ್ದು ತಂಝೀಮ್ ಕುರಿತು ಅವಹೇಳನಕಾರಿಯಾಗಿ ವರದಿಯನ್ನು ಮಾಡಿದ್ದು ಸರಿಯಲ್ಲ ಎಂದು ಅವರು ಕಿಡಿಕಾರಿದರು. ಭಟ್ಕಳ ಶಾಂತವಾಗಿದೆ ಇಲ್ಲಿ ಯಾವುದೆ ಭಯೋತ್ಪಾದನ ಚಟುವಟಿಕೆಗಳು ನಡೆಯುತ್ತಿಲ್ಲ ಅಂತಹದ್ದೇನಾದರೂ ಆದರೇ ನಾವೆ ನಿಮ್ಮೆಲ್ಲರಿಗೂ ಮಾಹಿತಿಯನ್ನು ನೀಡುತ್ತೇವೆ ಎಂದರು ಕೆಲವು ದುಷ್ಟರು ಇಂತಹ ನೀಚ ಕೃತ್ಯವನ್ನು ಮಾಡುತ್ತಿರುವುದಕ್ಕೆ ಆವರು ಅಸಮಧಾನವನ್ನು ವ್ಯಕ್ತಪಡಿದರು.
ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಅಧ್ಯಕ್ಷ ಡಾ. ಬದ್ರುಲ್ ಹಸನ್ ಮುಅಲ್ಲಿಮ್, ಉಪಾಧ್ಯಕ್ಷ ಡಾ.ಸಲೀಮ್, ಪ್ರಧಾನ ಕಾರ್ಯದರ್ಶಿ ಎಸ್.ಜೆ. ಖಾಲಿದ್, ಜಮಾತುಲ್ ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮೌಲಾನ ಅಬ್ದುಲ್ ಅಲೀಮ್ ಖಾಸ್ಮಿ, ತಂಝೀಮ್ ಕಾರ್ಯದರ್ಶಿ ಇನಾಯತುಲ್ಲಾ ಶಾಬಂದ್ರಿ ಮುಂತಾದವರು ಉಪಸ್ಥಿತರಿದ್ದರು.