ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಕಾಫಿ ಬೆಳೆಗೆ ಕಾರ್ಮಿಕರ ಕೊರತೆ: ಬೆಳೆಗಾರರು ಕಂಗಾಲು

ಬೆಂಗಳೂರು:ಕಾಫಿ ಬೆಳೆಗೆ ಕಾರ್ಮಿಕರ ಕೊರತೆ: ಬೆಳೆಗಾರರು ಕಂಗಾಲು

Wed, 09 Dec 2009 02:31:00  Office Staff   S.O. News Service
ಬೆಂಗಳೂರು, ಡಿಸೆಂಬರ್ 8 : ಕಾಫಿ ಬೆಳೆಗೆ ಈಗ ಕಾರ್ಮಿಕರ ಕೊರತೆಯೇ ಸವಾಲಾಗಿ ಪರಿಣಮಿಸಿದೆ.ವಿಶ್ವದಲ್ಲೇ ಅತಿ ಹೆಚ್ಚು ಕಾಫಿ ಉತ್ಪಾದಿಸುವ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಪ್ರತಿ ವರ್ಷ ಸುಮಾರು 3 ಲಕ್ಷ ಟನ್ ಕಾಫಿ ಉತ್ಪಾದನೆಯಾಗುತ್ತದೆ. ಆದರೆ, ಈಗ ಕಾಫಿಗೆ ಕಾರ್ಮಿಕರ ಕೊರತೆಯಿದೆ.ಈಗಿನ ಜನಾಂಗ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದು, ಕಾಫಿ ಬೆಳೆಯಲು, ಕಟಾವು ಮಾಡಲು ಕಾರ್ಮಿಕರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
 
ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ 103 ರು. ದಿನಗೂಲಿ ನೀಡ ಲು ಸರ್ಕಾರ ತಿಳಿಸಿದೆ. ಆದರೆ, 150 ರು. ಕೊಟ್ಟರೂ ಕಾರ್ಮಿಕರು ಸಿಗುತ್ತಿಲ್ಲ ಎನ್ನುತ್ತಾರೆ ಕರ್ನಾಟಕ ತೋಟಗಾರಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಜಯ್ ತಿಪ್ಪಯ್ಯ.

ಸೌಜನ್ಯ: ಕನ್ನಡಪ್ರಭ

Share: