ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಇಂದು ಮಾನವಹಕ್ಕು ಆಯೋಗದ ಅಧ್ಯಕ್ಷ ಎಸ್.ಆರ್. ನಾಯ್ಕ ಭಟ್ಕಳದಲ್ಲಿ

ಭಟ್ಕಳ: ಇಂದು ಮಾನವಹಕ್ಕು ಆಯೋಗದ ಅಧ್ಯಕ್ಷ ಎಸ್.ಆರ್. ನಾಯ್ಕ ಭಟ್ಕಳದಲ್ಲಿ

Thu, 28 Jan 2010 15:26:00  Office Staff   S.O. News Service
ಭಟ್ಕಳ: ಇಂದು  ಮಾನವಹಕ್ಕು ಆಯೋಗದ ಅಧ್ಯಕ್ಷ ಎಸ್.ಆರ್. ನಾಯ್ಕ ಭಟ್ಕಳದಲ್ಲಿ

ಸಾರ್ವಜನಿಕರಿಂದ ಅಹವಾಲು ಸ್ವೀಕಾರ - ಹಲವರ ದೂರು ವೈಯಕ್ತಿಕ 

ಭಟ್ಕಳ, ಜನವರಿ ೨೮: ಉತ್ತರಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಮಾನವಹಕ್ಕು ಆಯೋಗದ ಅಧ್ಯಕ್ಷ ಎಸ್.ಆರ್. ನಾಯ್ಕ ಇಂದು ಭಟ್ಕಳಕ್ಕೆ ಭೇಟಿನೀಡಿ  ಸಾರ್ವಜನಿಕರ ಆಹವಾಲುಗಳನ್ನು ಸ್ವಿಕರಿಸಿದರು ನಗರದ ಹಲವಾರು ಸಮಸ್ಯೆಗಳ ಕುರಿತು ಸಾರ್ವಜನಿಕರು ದೂರಗಳನ್ನು ನೀಡಿದ್ದು  ಕೆಲವರು ತಮ್ಮ ವೈಯಕ್ತಿವಾದ ದೂರುಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಹೆಚ್ಚಾಗಿ ಪೋಲಿಸ್ ಇಲಾಖೆಯ ವಿರುದ್ದ ಹಲವರು ತಮ್ಮ ದೂರಗಳನ್ನು ನೀಡಿದ್ದು ಇದರಲ್ಲಿ ಪಾಸ್ ಪೋರ್ಟ ಸಂಬಂಧಿತ ದೂರುಗಳು ಇವೆ ಎನ್ನಲಾಗಿದೆ. ಅಲ್ಲದೆ ಕೆಲವರು ಪೋಲಿಸರು ಪೋಲಿಸ್ ಅಧಿಕಾರಿಗಳ ದೌರ್ಜನ್ಯ, ಹಾಗೂ ಪೋಲಿಸರ  ಸರ್ವಾಧಿಕಾರಿ ನೀತಿಯನ್ನು ಖಂಡಿಸಿ ಮಾನವ ಹಕ್ಕು ಆಯೋಗಕ್ಕೆ ದೂರನ್ನು ನೀಡಿದ್ದಾರೆ ಎನ್ನಲಾಗಿದೆ.
 
28-bkl3.jpg
28-bkl4.jpg
 
 
ನಂತರ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು ಇತ್ತಿಚೆಗೆ ಭಟ್ಕಳದಲ್ಲಿ ಕೃಸ್ತರ ಆರಾಧನ ಕೇಂದ್ರಗಳ ಮೇಲೆ ನಡೆದ ದಾಳಿಯಲ್ಲಿ  ಪೊಲೀಸ್ ಇಲಾಖೆ ವಿಫಲತೆ ಎದ್ದು ಕಾಣುತ್ತಿದೆ ಅಲ್ಪಸಂಖ್ಯಾತ ರಕ್ಷಣೆಗೆ ನಿಲ್ಲಬೇಕಾದ ಪೋಲಿಸರು ಸರಿಯಾದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿಲ್ಲ, ಚರ್ಚುಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಲಿಖಿತ ಹೇಳಿಕೆ ನೀಡಿದ ಮೇಲೋ ಪೋಲಿಸರು ಅವರನ್ನು ಬಂಧಿಸದೆ ಇರುವುದು ನಾಚಕಗೇಡು ವಿಷಯ ಎಂದರು. ತಮ್ಮ ಭಾಷಣದ ತುಂಬ ಪೋಲಿಸ್ ಇಲಾಖೆಯ ಬೇಜವಾಬ್ದಾರಿಯನ್ನು ಎತ್ತಿತೋರಿಸಿದರು. ಆಸ್ಟ್ರೇಲಿಯಾದ ಮೇಲೆ ಭಾರತೀಯರ ಮೇಲಾದ ದಾಳಿಗೂ ಇಲ್ಲಿನ  ಚರ್ಚುಗಳಿಗೂ ಸಂಬಂಧವನ್ನು ಕಲ್ಪಿಸಿ ಕೃಸ್ತ ಸಮುದಾಯದ ಚರ್ಚುಗಳ ಮೇಲೆ ದಾಳಿ  ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಇಲ್ಲಿನ ಕೃಸ್ತರು ಮುಸ್ಲಿಮರು ಭಾರತೀಯರಲ್ಲವೆ? ಎಂದು ಪ್ರಶ್ನಿಸಿದರು. ಸಂವಿಧಾನ ವಿರೋಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಈ ನಿಟ್ಟಿನಲ್ಲಿ ಪೋಲಿಸರು ಅವರ ಮೇಲೆ ನಿದ್ಯಾಕ್ಷಿಣ್ಯವಾಗಿ ಕ್ರಮವನ್ನು ಜರುಗಿಸಬೆಕು ಎಂದರು. 
28-bkl1.jpg
ಪುರಸಭೇಯ ವ್ಯಾಪ್ತಿಯಲ್ಲಿನ ಸ್ವಚ್ಚತೆಯ ಕುರಿತಂತೆ ಹಲವಾರು ದೂರಗಳು ಬಂದಿದ್ದು ಈ ಕುರಿತು ಪುರಸಭೇಯು ನಗರದ ನೈರ್ಮಲ್ಯವನ್ನು ಕಾಪಾಡಿಕೊಂಡು ಬರಬೇಕು ಎಂದು ಅವರು ಕಿವಿ ಮಾತು ಹೇಳಿದರು. ಪಾಸ್ ಪೋರ್ಟ್‌ಗೆ ಸಂಬಂಧಿಸಿದಂತೆ ಪೋಲಿಸರು ವಿನಾಕಾರಣ ತೊಂದರೆಯನ್ನು ಕೊಡುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿವೆ ಎಲ್ಲರನ್ನು ಸಂಶಯದ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದ ಅವರು ಇಲ್ಲಿ ಅಪರಾಧಿಗಳು ಇರಬಹುದು ಆದರೆ ಭಯೋತ್ಪಾದಕರು ಇರಲು ಸಾಧ್ಯವಿಲ್ಲ ಎಂದರು. ಅದ್ದರಿಂದ ಪಾಸ್ಪೋರ್ಟ್ ವಿಷಯದಲ್ಲಿ ಕೇವಲ ಸಂಶಯದ ಆಧಾರದ ಮೇಲೆ ಜನರಿಗೆ ತೊಂದರೆಯನ್ನು ಕೊಡಬೇಡಿ ಜನರಿಗೆ ಸಹಾಯ ಮಾಡಬೇಕಾದುದು ಪೋಲಿಸರ ಕರ್ತವ್ಯವಾಗಬೇಕು. ಆದ್ದರಿಂದ ಯಾವತ್ತೂ ಸಾರ್ವಜನಿಕರಿಗೆ ತೊಂದರೆಯನ್ನು ನೀಡುವ ಕೆಲಸವನ್ನು ಮಾಡಬೇಡಿ ಎಂದು ಅವರು ಪೊಲಿಸ್ ಅಧಿಕಾರಿಗಳಿಗೆ ಕಿವಿಮಾತನ್ನು ಹೇಳಿದರು.ಪಡಿತರ ಚೀಟಿ, ಹಾಗೂ ಆರಣ್ಯ ಅತಿಕ್ರಮದಾರರ ಸಮಸ್ಯೆಗಳು ಸಹ ಅಧ್ಯಕ್ಷರ ಗಮನವನ್ನು ಸೆಳೆದವು.

ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರು ಹಾಜರಿದ್ದರು.

Share: