ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ’ಕಿಸಾನ್ ಮತ್ತು ಕೃಷಿ ಕಾರ್ಮಿಕರ ಸಮಾವೇಶ’ಕ್ಕೂ ಕಾಂಗ್ರೆಸಿಗೂ ಸಂಬಂಧವಿಲ್ಲ - ಈಶ್ವರ್ ಆಳ್ವ

ಸಕಲೇಶಪುರ: ’ಕಿಸಾನ್ ಮತ್ತು ಕೃಷಿ ಕಾರ್ಮಿಕರ ಸಮಾವೇಶ’ಕ್ಕೂ ಕಾಂಗ್ರೆಸಿಗೂ ಸಂಬಂಧವಿಲ್ಲ - ಈಶ್ವರ್ ಆಳ್ವ

Wed, 30 Dec 2009 17:50:00  Office Staff   S.O. News Service
ಸಕಲೇಶಪುರ, ಡಿಸೆಂಬರ್ 29:  ತಾಲೂಕಿನ ಬಾಗೆ ಗ್ರಾಮದಲ್ಲಿ ಗುರುವಾರ ನಡೆಯಲಿರುವ ‘ಕಿಸಾನ್ ಮತ್ತು ಕೃಷಿ ಕಾರ್ಮಿಕರ ಸಂಘಟನೆ ಸಮಾವೇಶ’ಕ್ಕೂ ತಾಲ್ಲೂಕು ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಈಶ್ವರ್ ಆಳ್ವ ಸ್ಪಷ್ಟಪಡಿಸಿದ್ದಾರೆ.
 
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಮುಖಂಡನೆಂದು ಹೇಳಿಕೊಳ್ಳುತ್ತಿರುವ ಮುನಿಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಹೆಸರು ಬಳಸಿ ಕಿಸಾನ್ ಮತ್ತು ಕೃಷಿ ಕಾರ್ಮಿಕರ ಸಂಘಟನೆ ಸಮಾವೇಶ ನಡೆಸುತ್ತಿರುವುದು ಆಶ್ಚರ್ಯ ಉಂಟುಮಾಡಿದೆ. ಪಕ್ಷದ ತಾಲೂಕು ಸಮಿತಿಗೂ ಈ ಸಮಾವೇಶಕ್ಕೂ ಯಾವುದೇ ಸಂಬಂಧವಿಲ್ಲ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ವ್ಯಕ್ತಿ ಜೆಡಿ‌ಎಸ್ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದರು, ಇಂತಹವರು ಯಾವಾಗ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು ಎಂಬುದು ತಿಳಿದಿಲ್ಲ. ಪಕ್ಷದಲ್ಲಿ ಕಿಸಾನ್ ಹಾಗೂ ಕೃಷಿ ಕಾರ್ಮಿಕ ಘಟಕ ಎಂಬುದು ಇಲ್ಲ, ಇದ್ದರೂ ಈ ಘಟಕಕ್ಕೆ ಮುನಿಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಸಾಧ್ಯವಿಲ್ಲ. ಸ್ವಪ್ರೇರಣೆಯಿಂದ ಇಂಥಹ ಘಟಕ ಹುಟ್ಟುಹಾಕಿರುವ ಈ ವ್ಯಕ್ತಿ, ತಾಲ್ಲೂಕಿನಲ್ಲಿ ಒಟ್ಟಾಗಿರುವ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಸಂಚು ರೂಪಿಸುತ್ತಿರುವುದು ಕಂಡು ಬರುತ್ತಿದೆ. ಇವರ ಹಿಂದೆ ಜಿಲ್ಲಾ ಕಾಂಗ್ರೆಸ್‌ನ ಕೆಲವು ಮುಖಂಡರು ಹಾಗೂ ತಾಲ್ಲೂಕು ಕಾಂಗ್ರೆಸ್‌ನಲ್ಲಿ ಗುರುತಿಸಿ ಕೊಂಡಿರುವ ವೈ.ಪಿ ರಾಜೇಗೌಡ ಎಂಬ  ವ್ಯಕ್ತಿ ಈ ಸಮಾವೇಶ ನಡೆಸಲು ಕುಮ್ಮಕ್ಕುನೀಡುತ್ತಿರುವುದು ತಿಳಿದು ಬಂದಿದೆ. ಆದ್ದರಿಂದ ಕಾಂಗ್ರೆಸ್ ಹೆಸರಿನಲ್ಲಿ ಸಮಾವೇಶ ಹಮ್ಮಿಕೊಂಡಿರುವ ಮುನಿಸ್ವಾಮಿಯ ವಿರುದ್ದ ಕ್ರಮ ಕೈಗೂಳ್ಳಬೇಕು ಎಂದು ಕೆಪಿಸಿಸಿಗೆ ದೂರುನೀಡಲಾಗುವುದು ಎಂದರು.
 
ಸುದ್ದಿಗೋಷ್ಟಿಯಲ್ಲಿ ಪಕ್ಷದ ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ರಾಜಶೇಖರ್. ಯುವ ಅಧ್ಯಕ್ಷ ಸಂಜಯ್, ಎಸ್ಸಿ ಮತ್ತು ಎಸ್ಟಿ ಘಟಕದ ತಾಲ್ಲೂಕು ಅಧ್ಯಕ್ಷ ದೂಡ್ಡ ಈರಯ್ಯ. ತುಳಸಿ ಪ್ರಸಾದ್. ಮನ್ಸೂರ್, ಮುಂತಾದವರಿದ್ದರು. 



Share: