ಕಾರವಾರ, ಜನವರಿ 4: ಹಣಕೋಣ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟಗಾರರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಯಾವುದೇ ಕಾರಣಕ್ಕೂ ಹಣಕೋಣದಲ್ಲಿ ಪರಿಸರಕ್ಕೆ ಮಾರಕವಾದ ಯೋಜನೆಯನ್ನು ಸ್ಥಾಪಿಸುವುದಿಲ್ಲ ಹೇಳುವ ಮೂಲಕ ಇಂಡ್ ಭಾರತ್ ಕಂಪನಿ ಹಿಂದಕ್ಕೆ ಸರಿದಿದೆ. ಇದು ಹಣಕೋಣ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟಗಾರರಿಗೆ ಸಂದ ಜಯವಾಗಿದೆ ಎಂದು ಹಣಕೋಣ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟಗಾರರು ಹೇಳಿದ್ದಾರೆ.
ಕಾರವಾರದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿ ಇಂಡ್ ಭಾರತ್ ಪವರ್ ಕಂಪನಿ ಅಧಿಕಾರಿ ಎ. ಎನ್. ವಾಸುರಾವ್ ಮಾತನಾಡಿ ಯಾವುದೇ ಕಾರಣಕ್ಕೂ ಪರಿಸರಕ್ಕೆ ಮಾರಕವಾದ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿಯನ್ನು ಸ್ಥಾಪಿಸುವುದಿಲ್ಲ. ಇದನ್ನು ತಮಿಳುನಾಡಿಗೆ ವರ್ಗಾಯಿಸಿದ್ದೇವೆ. ಇದನ್ನು ಹಿಂದಕ್ಕೆ ಪಡೆದಿದ್ದೇವೆ ಎಂದು ಘೋಷಿಸಿದ ಅವರು ಈ ಪ್ರದೇಶದಲ್ಲಿ ಪರಿಸರಕ್ಕೆ ಪೂರಕವಾದ ಉತ್ಪಾದನೆ ತರಲು ಚಿಂತನೆ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಹಣಕೋಣ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟಗಾರರ ಕಾನೂನು ಸಲಹೆಗಾರ ಕೆ. ಆರ್. ದೇಸಾಯಿ ಮಾತನಾಡಿ ಇದು ಹಣಕೋಣ ಉಷ್ಣ ವಿದ್ಯುತ್ ವಿರೋಧಿ ಹೋರಾಟಕ್ಕೆ ಸಂದ ಜಯವಾಗಿದೆ. ಈ ಯೋಜನೆಯನ್ನು ಕಂಪನಿ ಹಿಂದಕ್ಕೆ ಪಡೆದಿದೆ. ಈ ಬಗ್ಗೆ ಜಂಟಿ ಒಪ್ಪಂದಕ್ಕೆ ಕೂಡ ಸಹಿ ಮಾಡಿದ್ದೇವೆ. ಇದನ್ನು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯಕ್ಕೆ ತಿಳಿಸುವುದಾಗಿ ತಿಳಿಸಿದ ಅವರು ಪೋಲೀಸರು ವಿರೋಧಿ ಹೋರಾಟಗಾರರ ಮೇಲೆ ನಡೆಸಿದ ದೌರ್ಜನ್ಯದ ವಿರುದ್ಧ ಹೋರಾಟ ಮುಂದುವರಿಯಲಿದೆ. ಕಂಪನಿಯವರು ಈಗಾಗಲೇ ಪರಿಸರಕ್ಕೆ ಪೂರಕವಾದ ಯೋಜನೆ ತರುತ್ತೇವೆಂದು ತಿಳಿಸಿದ್ದಾರೆ. ಒಂದಾನುವೇಳೆ ಮೆಡಿಕಲ್ ಕಾಲೇಜ್ ಇಲ್ಲವೇ ಹೋಟೇಲ್ ನಿರ್ಮಾಣಕ್ಕೆ ಸಮ್ಮತಿಸಿದ್ದಲ್ಲಿ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ಹಣಕೋಣ ವಿರೋಧಿ ಹೋರಾಟಗಾರರು ಮತ್ತು ಇಂಡ್ ಭಾರತ್ ಪವರ್ ಕಾರವಾರ ಕಂಪನಿಯ ಅಧಿಕಾರಿಗಳು ಹಣಕೋಣ ಉಷ್ಣ ಸ್ಥಾವರ ನಿರ್ಮಾಣ ಪ್ರದೇಶದಲ್ಲಿ ಸುಸಜ್ಜಿತ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದ ಜಂಟಿ ಒಪ್ಪಂದಕ್ಕೆ ಸಹಿ ಹಾಕಿ ಅದನ್ನು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯಕ್ಕೆ ಕಳುಹಿಸಿದ್ದಾರೆ.
ಚಿತ್ರ, ವರದಿ: ಕಡತೋಕಾ ಮಂಜು,ಕಾರವಾರ.