ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ - ಆರ್ಥಿಕ ನೆರವು ನೀಡಿದ ಡೆಕ್ಕನ್ ವೆಲ್ಫೇರ್ ಅಸೋಸಿಯೇಶನ್

ಭಟ್ಕಳ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ - ಆರ್ಥಿಕ ನೆರವು ನೀಡಿದ ಡೆಕ್ಕನ್ ವೆಲ್ಫೇರ್ ಅಸೋಸಿಯೇಶನ್

Thu, 11 Mar 2010 17:34:00  Office Staff   S.O. News Service

ಭಟ್ಕಳ, ಮಾರ್ಚ್ 11: ಭಟ್ಕಳ,ಶಿರಾಲಿ, ಮುರ್ಡೇಶ್ವರದಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ನಾಲ್ಕು ದಿನಗಳ ವಿಶೇಷ ತರಗತಿಗೆ ಇಲ್ಲಿನ ಡೆಕ್ಕನ್ ವೆಲ್ಪೇರ್ ಅಸೋಶಿಯೇಶನ್ ಆರ್ಥಿಕ ನೆರವು ನೀಡಿದೆ.

 

ನಗರದ ನ್ಯೂ ಇಂಗ್ಲೀಷ್ ಸ್ಕೂಲನಲ್ಲಿ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕರಿಗೆ ಸಂಸ್ಥೆಯ ಅಧ್ಯಕ್ಷ ಎ ಎಂ ಖಾನ ಚೆಕ್‌ನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಪಾರೂಕ ಮಾಸ್ತರ್, ಕೆ ಜಿ ಹೆಗಡೆ,ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜ, ಮುಖ್ಯಾಧ್ಯಾಪಕ ವಿ ಜಿ ನಾಯ್ಕ ಸೇರಿದಂತೆ ಡೆಕ್ಕನ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


Share: