ನವದೆಹಲಿ,ಡಿಸೆಂಬರ್ ೮: ಗುಟ್ಕಾ ತಯಾರಕರು ಪ್ರತಿ ವರ್ಷ ಸುಮಾರು12 ಸಾವಿರ ಕೋಟಿ ರು.ಗಳಷ್ಟು ಅಬ್ಕಾರಿ ಸುಂಕ ಪಾವತಿಸದೆ ವಂಚಿಸುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಈ ಮೊತ್ತ ಕಳೆದ ವರ್ಷ ಸಂಗ್ರಹಿಸಲಾದ ಒಟ್ಟು ತೆರಿಗೆಯ ಶೇ.೯ಕ್ಕೆ ಸಮ ಎಂದು ಮೂಲಗಳು ತಿಳಿಸಿವೆ. ಕಸ್ಟಮ್ಸ್ ಮತ್ತು ಅಬ್ಕಾರಿ ನಿರ್ದೇಶನಾಲಯದ ಗುಪ್ತಚರ ವಿಭಾಗ ನಡೆಸಿದ ತನಿಖೆಯಿಂದ ಈ ಮಾಹಿತಿ ಲಭ್ಯವಾಗಿದೆ.
ಇದುವರೆಗೆ ನಡೆಸಿದ ತನಿಖೆಯಿಂದ ವಾರ್ಷಿಕವಾಗಿ 400 ಕೋಟಿ ಸುಂಕ ಪಾವತಿಯಾಗುತ್ತಿಲ್ಲ ಎಂದು ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾನ್ಪುರದಲ್ಲಿ ಗುಟ್ಕಾ ತಯಾರಕರ ಕಚೇರಿಗಳಿಗೆ ದಾಳಿ ನಡೆಸಿದ ಬಳಿಕ ಈ ಅಂಕಿ-ಅಂಶ ಲಭ್ಯವಾಗಿದೆ.
ಸೌಜನ್ಯ: ಕನ್ನಡಪ್ರಭ