ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು:ಕನ್ನಡ ಭಾಷಾ ಅಭಿವೃದ್ಧಿ ಯೋಜನೆಯಲ್ಲಿ ಸಂಶೋಧನ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು:ಕನ್ನಡ ಭಾಷಾ ಅಭಿವೃದ್ಧಿ ಯೋಜನೆಯಲ್ಲಿ ಸಂಶೋಧನ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

Thu, 31 Dec 2009 03:20:00  Office Staff   S.O. News Service
ಮಂಗಳಗಂಗೋತ್ರಿ: ಡಿಸೆಂಬರ್ 17೭: ಕರ್ನಾಟಕ ಸರಕಾರದ ಕನ್ನಡ ಭಾಷಾ ಅಭಿವೃದ್ಧಿ ಯೋಜನೆಯ ಕೆಲಸಗಳು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಈಗಾಗಲೇ ಆರಂಭಗೊಂಡಿದ್ದು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಜನಬಳಕೆಯ ಆಡುನುಡಿ, ಜನಾಂಗಗಳು, ಆರಾಧನಾ ಪ್ರಕಾರಗಳು, ಚಳುವಳಿಗಳು ಮೊದಲಾದವುಗಳ ಕುರಿತು ಈ ಯೋಜನೆಯಲ್ಲಿ ಅಧ್ಯಯನ ನಡೆಸುವ ಗುರಿಯನ್ನು ಹೊಂದಲಾಗಿದೆ. ಇದರ ಅಂಗವಾಗಿ ಪರಿಸರ ಭಾಷೆಗಳು ಎಂಬ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಳಕೆಯಾಗುತ್ತಿರುವ ವಿಭಿನ್ನ ಆಡುನುಡಿಗಳ ಕುರಿತು ವಿವರಣಾತ್ಮ ಅಧ್ಯಯನ ಕೈಗೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ.
 
ಮುಖ್ಯವಾಗಿ ಈ ಮೇಲೆ ಗುರುತಿಸಿದ ಮೂರು ಜಿಲ್ಲೆಗಳಲ್ಲಿ ಬಳಕೆಯಾಗುತ್ತಿರುವ ತುಳು, ಕೊಡವ, ಕುಂದಾಪುರ ಕನ್ನಡ, ಹವ್ಯಕ, ಕೊರಗ ಭಾಷೆ, ಗೌಡ ಕನ್ನಡ  ಮೊದಲಾದ ಪ್ರಾದೇಶಿಕ ಮತ್ತು ಜನಾಂಗಿಕ ಭಾಷಾ ಪ್ರಭೇದಗಳ ಕುರಿತ ಅಧ್ಯಯನವನ್ನು ನಡೆಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಎಲ್ಲಾ ಆಡುನುಡಿಗಳ ಧ್ವನಿಮಾ ವ್ಯವಸ್ಥೆಯ ಹಿನ್ನೆಲೆಯಲ್ಲಿ ಈ ಆಡುನುಡಿಗಳ ನಡುವಿನ ಒಳಸಂಬಂಧವನ್ನು ಗುರುತಿಸುವುದು, ತೌಲನಿಕ ಅಧ್ಯಯನದ ಹಿನ್ನೆಲೆಯಲ್ಲಿ ಅವುಗಳ ಪ್ರಾಗ್ರೂಪಗಳನ್ನು ಗುರುತಿಸುವ ಮೂಲಕ ಅವುಗಳ ಮೂಲರೂಪಗಳನ್ನು ಪುನಾರಚಿಸುವುದು, ಆಯಾ ಭಾಷೆಗಳನ್ನಾಡುವ ಸಮುದಾಯಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ನಡುವೆ ಇರುವ ಅಂತರ್ ಸಂಬಂಧಗಳನ್ನು ಭಾಷಿಕ ನೆಲೆಗಳಲ್ಲಿ ಗುರುತಿಸುವುದು ಈ ಯೋಜನೆಯ ಮುಖ್ಯ ಕಾಳಜಿಯಾಗಿದೆ. ಈ ಯೋಜನೆಯು ಕ್ಷೇತ್ರಕಾರ್ಯ ಅವಲ೦ಬಿತವಾಗಿದ್ದು, ಕಾರ್ಯನಿರ್ವಹಿಸುವ ಸಂಶೋಧನ ಸಹಾಯಕರಿಗೆ ಮಾಸಿಕ ರೂ. ೮೦೦೦ ಸಂಭಾವನೆ ಹಾಗೂ ಪ್ರಯಾಣ ಮತ್ತು ಇತರ ಭತ್ತೆಗಳನ್ನು ನೀಡಲಾಗುವುದು.
 
ಈ ಯೋಜನೆಯಲ್ಲಿ ಕೆಲಸ ಮಾಡುವವರಿಗೆ ಭಾಷಾ ವಿಜಾನದಲ್ಲಿ ಪರಿಣತಿ  ಮತ್ತು ಆಸಕ್ತಿ ಇದ್ದಲ್ಲಿ ಹೆಚ್ಚು ಅನುಕೂಲ. ಕನ್ನಡವೂ ಸೇರಿದಂತೆ ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಈ ಯೋಜನೆಯ ಬಗ್ಗೆ ಆಸಕ್ತಿ ಇದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ತಮ್ಮ ಸ್ವವಿವರ ಮತ್ತು ಸ್ನಾತಕೋತ್ತರ ಪದವಿಯ ಅಂಕಪಟ್ಟಿಯ ನೆರಳು ಪ್ರತಿಯೊಂದಿಗೆ ಅರ್ಜಿಯನ್ನು ದಿನಾಂಕ; ೨೯-೧೨-೨೦೦೯ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಲು ಕೋರಲಾಗಿದೆ.
 
ಡಾ ಬಿ. ಶಿವರಾಮ ಶೆಟ್ಟಿ. ಸಂಯೋಜಕರು; ಪರಿಸರ ಭಾಷೆಗಳು, ಕನ್ನಡ ಭಾಷಾ ಅಭಿವೃದ್ದಿ ಯೋಜನೆ, ಕನ್ನಡ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ. ಮಂಗಳಗಂಗೋತ್ರಿ ೫೭೪೧೯೯


Share: