ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸಕಲೇಶಪುರ: ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ರಾಜೇಗೌಡರನ್ನು ಉಚ್ಛಾಟಿಸಲು ಆಗ್ರಹ

ಸಕಲೇಶಪುರ: ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ರಾಜೇಗೌಡರನ್ನು ಉಚ್ಛಾಟಿಸಲು ಆಗ್ರಹ

Wed, 30 Dec 2009 17:53:00  Office Staff   S.O. News Service
ಸಕಲೇಶಪುರ, ಡಿಸೆಂಬರ್ 29:  ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ವೈ.ಪಿ ರಾಜೇಗೌಡ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಬೇಕೆಂದು ಪಕ್ಷದ ತಾಲೂಕು ಮುಖಂಡರು ಒತ್ತಾಯಿಸಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಈಶ್ವರ್ ಆಳ್ವ  ಬುಧವಾರ ಸುದ್ದಿಕಾಗೋಷ್ಠಿಯಲ್ಲಿ ಮಾತನಾಡಿದ ಹಾಗೂ ಮುಂತಾದವರು, ಈ ಹಿಂದಿನ ಪ್ರಮುಖ ಚುನಾವಣೆಯಲ್ಲಿ ಬಿಜೆಪಿಗೆ ಕೆಲಸಮಾಡಿದ್ದಾರೆ, ಪಕ್ಷದ ದೊರಣೆಯ ವಿರುದ್ದವಾಗಿ ಕೋಮುವಾದಿ ಪಕ್ಷಕ್ಕೆ ಕೆಲಸಮಾಡಿರು ಇವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಟಿಸ ಬೆಕೆಂದು ಒತ್ತಾಯಿಸಿದರು.
 
ವಿಧಾನ ಸಭೆ ಚುನಾವಣೆಯಲ್ಲಿ ಸಣ್ಣಸ್ವಾಮಿಯ ವಿರುದ್ದ,ಚಿ.ಪಂ.ನಲ್ಲಿ ದಿ.ಕೃಣ್ಣಪ್ರಸಾದ್ ಹಾಗೂ ಅವರ ಪತ್ನಿ ವಿರುದ್ದ,ಪರಸಬೆಯಲ್ಲಿ ಮಂಜುರನ್ನು ಸೊಲಿಸಲು ಕಾಳಿಂಗಪ್ಪರನ್ನು ಬೆಂಬಲಿಸದ್ದರು ಹೀಗೆ ಅನೇಕ ಆಪಾದನೆಗಳಿವೆ ಎಂದು ವಿವರಿಸಿದರು.
 
ವೈ.ಪಿ ರಾಜೇಗೌಡರನ್ನು ಈ ಹಿಂದೆಯು ಪಕ್ಷದಿಂದ ಉಚ್ಚಟಿಸಲಾಗಿತ್ತು ಪಕ್ಷಕ್ಕಾಗಿ ಪ್ರಮಾಣಿಕವಾಗಿ ಕೆಲಸಮಾಡುವುದಾಗಿ ಪ್ರಮಾಣಮಾಡಿದ್ದರಿಂದ ಅವಕಾಶ ನೀಡಲಾಗಿತ್ತು ಎಂದು ಹೇಳಿದರು.
ಇಲ್ಲಸಲ್ಲದ ತಂತ್ರ ಕುತಂತ್ರ ಗಳನ್ನು ನಡೆಸುತ್ತ, ಪಕ್ಷದ ಪ್ರಮಾಣಿಕ ಕಾರ್ಯಕರ್ತರನ್ನು ದಾರಿತಪ್ಪಿಸುತ್ತಿದ್ದಾರೆ. ಗುಂಪುಗಾರಿಕೆಗೆ ಪ್ರಚೋದನೆ ನೀಡುತ್ತಿದ್ದಾರೆ,ಇದನ್ನು ಸಹಿಸಲು ಸಾದ್ಯವಿಲ್ಲಾ ಎಂದು ಹೇಳಿದರು.


Share: