ಗ್ರಾಮೀಣ ಪ್ರದೇಶದೆಡೆಗೆ...ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರು...
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ಸಮುದಾಯದ ಆರೋಗ್ಯದ ರಕ್ಷಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಳವಡಿಸಿಕೊಳ್ಳಲಾಗಿದೆ. ೧,೩೮,೧೪೬ ಉಪ ಆರೋಗ್ಯ ಕೇಂದ್ರಗಳಲ್ಲಿ ೧,೦೨,೭೫೨ ಉಪಕೇಂದ್ರದ ಕಿರಿಯ ಆರೋಗ್ಯ ಮಹಿಳಾ ಸಹಾಯಕರು ಮುಕ್ತ ನಿಧಿಯನ್ನು ವ್ಯವಹರಿಸಲು ಸರಪಂಚರ ಜೊತೆಯಲ್ಲಿ ಜಂಟಿಯಾಗಿ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದಿದ್ದಾರೆ. ಮುಕ್ತ ನಿಧಿಯನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸಲು ವ್ಯಯ ಮಾಡಬಹುದು. ಉದಾ-ಬಿ.ಪಿ.ತಪಾಸಣೆ ಉಪಕರಣದಿಂದ ತೂಕ ಮಾಡುವ ಯಂತ್ರ ಸ್ಟೆತಾಸ್ಕೋಪ್, ಬಕೆಟ್ಟುಗಳು, ಶುಚೀಕರಣಕ್ಕಾಗಿ ಮಾಡುವ ವೆಚ್ಚಗಳು ಸೇರಿವೆ. ರಾಜ್ಯಗಳಿಗೆ ರಾಜ್ಯ ಗ್ರಾಮೀಣ ಆರೋಗ್ಯ ಅಭಿಯಾನ ಔಷಧಗಳನ್ನು ಸಹ ಒದಗಿಸಲಾಗಿದೆ. ಇವೆಲ್ಲವೂ ಉಪ ಆರೋಗ್ಯ ಕೇಂದ್ರವನ್ನು ಚಟುವಟಿಕೆಯ ಕೇಂದ್ರವನ್ನಾಗಿ ಮಾಡಿದೆ.
ಶಂಶೀರ್, ಬುಡೋಳಿ




ಶಂಶೀರ್, ಬುಡೋಳಿ