ಮಂಗಳೂರು, ಡಿ.14: ಬಂದರು ಸಂಪರ್ಕ ಯೋಜನೆಯಡಿಯಲ್ಲಿ ಬಂಟ್ವಾಳ ಜೋಡುಮಾರ್ಗದಿಂದ ಸುರತ್ಕಲ್‌ವರೆಗಿನ ೩೭ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪೮, ೧೩ ಮತ್ತು ೧೭ನ್ನು ಚತುಷ್ಪಥಗೊಳಿಸುವ ಕಾಮಗಾರಿಯು ಆರಂಭಗೊಂಡು ನಾಲ್ಕು ವರ್ಷ ಕಳೆದರೂ ಇನ್ನೂ ಹಲವು ಕಡೆ ಅವ್ಯವಸ್ಥಿತವಾಗಿ ಅಪೂರ್ಣವಾಗಿರುವ ಕಾಮಗಾರಿಗಳಿಂದ ಜನರು ಸಮಸ್ಯೆ ಎದುರಿಸವಂತಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿಪಿ. ಸಂಜೀವ ಆರೋಪಿಸಿದರು.
ವಿಳಂಬಗೊಂಡ ಕಾಮಗಾರಿಗಳಿಗೆ ಹೊಣೆಯಾದವರ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಜನರಿಗಾಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಕೊಟ್ಟಾರ ಚೌಕಿಯಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಂಜೀವ ಕರೆ ನೀಡಿದರು.
ಕೊಟ್ಟಾರ ಚೌಕಿಯಿಂದ ಕೂಳೂರು ಸರ್ಕಲ್‌ವರೆಗೆ ನಡೆದ ರಸ್ತೆ ತಡೆ ಪ್ರತಿಭಟನೆಯಲ್ಲಿ ಸಿಪಿಐ ರಾಜ್ಯ ಸಮಿತಿ ಸದಸ್ಯ ಬಿ.ಕೆ. ಕೃಷ್ಣಪ್ಪ, ಸಿಪಿಐ ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಚಂದಪ್ಪ ಅಂಚನ್, ಬಿ. ಶೇಖರ, ಸಿಪಿಐ ಮಂಗಳೂರು ತಾಲೂಕು ಸಮಿತಿ ಕಾರ್ಯದರ್ಶಿ ವಿ.ಎಸ್. ಬೇರಿಂಜ, ಸದಸ್ಯ ಎಂ. ಕರುಣಾಕರ ಉಪಸ್ಥಿತರಿದ್ದರು.