ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ‘ಇಸ್ಲಾಮಿಕ್ ಬುಟಿಕ್’ ಕಂಕನಾಡಿ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಮುಸ್ಲಿ ಯಾರ್ ದುವಾ ಆಶೀರ್ವಚನದೊಂದಿಗೆ ಶುಭಾರಂಭ

ಮಂಗಳೂರು: ‘ಇಸ್ಲಾಮಿಕ್ ಬುಟಿಕ್’ ಕಂಕನಾಡಿ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಮುಸ್ಲಿ ಯಾರ್ ದುವಾ ಆಶೀರ್ವಚನದೊಂದಿಗೆ ಶುಭಾರಂಭ

Thu, 04 Feb 2010 03:12:00  Office Staff   S.O. News Service
ಮಂಗಳೂರು, ಫೆ.೩: ಮುಸ್ಲಿಂ ಸಮುದಾಯದ ಮಹಿಳೆಯರ ಅತ್ಯಾಧುನಿಕ, ವಿನೂತನ ಶೈಲಿಯ ಉಡುಪುಗಳ ಮಳಿಗೆಯಾದ ‘ಇಸ್ಲಾಮಿಕ್ ಬುಟಿಕ್’ ಇಂದು ಕಂಕನಾಡಿಯ ಮಂಗಳೂರು ಗೇಟ್ ಕಟ್ಟಡದಲ್ಲಿ ಶುಭಾರಂಭಗೊಂಡಿತು. 

ಮಳಿಗೆಯನ್ನು ಇಂದು ಕಂಕನಾಡಿ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಮುಸ್ಲಿ ಯಾರ್ ದುವಾ ಆಶೀರ್ವಚನದೊಂದಿಗೆ ಉದ್ಘಾಟಿಸಿದರು. ಈ ಸಂದರ್ಭ ಸಂಸ್ಥೆಯ ಆಡಳಿತ ನಿರ್ದೇಶಕ ಜುನೈದ್ ಹಾಗೂ ಆಡಳಿತ ವ್ಯವಸ್ಥಾಪಕ ದಾವೂದ್ ಉಪಸ್ಥಿತರಿದ್ದರು. 

ಮಳಿಗೆಯಲ್ಲಿ ಮಹಿಳೆಯರ ನಾನಾ ತೆರನಾದ ಬುರ್ಖಾ, ಪರ್ದಾ, ಹಿಜಾಬ್, ಖಿಮಾರ್, ನಿಕಾಬ್, ಪ್ರಾರ್ಥನಾ ಉಡುಪುಗಳು, ಹಿಜಾಬ್ ಪಿನ್ಸ್ ಮೊದಲಾದವುಗಳು ವಿಭಿನ್ನ ಮಾದರಿಯಲ್ಲಿ ಆಕರ್ಷಕ ಬೆಲೆಯಲ್ಲಿ ಲಭ್ಯವಿರುತ್ತದೆ. ಉದ್ಘಾಟನಾ ಸಮಾರಂಭದ ಅಂಗವಾಗಿ ಗ್ರಾಹಕರಿಗೆ ಶೇ.೨೫ರ ವಿಶೇಷ ರಿಯಾಯಿತಿ ಲಭ್ಯವಿರುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Share: