ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಎಸ್.ಎಫ್.ಸಿ. ಯೋಜನೆಯಡಿ ನಡೆದ ಅಭಿವೃದ್ಧಿ ಕಾಮಗಾರಿಯಲ್ಲಿ ಭಾರೀ ಬ್ರಷ್ಟಾಚಾರ - ಅಕ್ರಂ ದೂರು

ಸಕಲೇಶಪುರ: ಎಸ್.ಎಫ್.ಸಿ. ಯೋಜನೆಯಡಿ ನಡೆದ ಅಭಿವೃದ್ಧಿ ಕಾಮಗಾರಿಯಲ್ಲಿ ಭಾರೀ ಬ್ರಷ್ಟಾಚಾರ - ಅಕ್ರಂ ದೂರು

Sat, 02 Jan 2010 02:48:00  Office Staff   S.O. News Service
ಸಕಲೇಶಪುರ, ಜನವರಿ 1:ಪುರಸಭೆ ವ್ಯಾಪ್ತಿಯಲ್ಲಿ ಎಸ್.ಎಫ್. ಸಿ ಯೋಜನೆಯಡಿ ನಡೆದ ಅಭಿವೃದ್ದಿ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಪುರಸಭ ಸದಸ್ಯ ಹಾಗೂ ವಕೀಲ ಆಕ್ರಂ ಪಾಷ ಲೋಕಯುಕ್ತಕ್ಕೆ ದೊರು ನೀಡಿದ್ದಾರೆ.
 
೨೦೦೯-೧೦ ನೇ ಸಾಲಿನಲ್ಲಿ ಸುಮಾರು ೪ ಕೋಟಿ ವೆಚ್ಚದಲ್ಲಿ ನಡೆದ ರಸ್ತೆ ಅಭಿವೃದ್ದಿ, ಚರಂಡಿ ಕಾಮಗಾರಿಗಳು ಸಂಫೂರ್ಣ ಕಳಪೆಯಾಗಿದ್ದು ಈ ಕಳಪೆ ಕಾಮಗಾರಿ ನಡೆಯಲು ಅಧಿಕಾರಿಗಳು ಕಾರಣರಾಗಿದ್ದರೆಂದು ಆರೋಪಿಸಿ ಲೋಕಯಕ್ತಕ್ಕೆ ದೂರು ನೀಡಿರುವ ಹಿನ್ನಲ್ಲೆಯಲ್ಲಿ ಲೋಕಯಕ್ತ ಅಧಿಕಾರಿಗಳು ಪುರಸಭ ಇಂಜಿನಿಯರ್,ಮುಖ್ಯಧಿಕಾರಿ ವಿರುದ್ದ ದೂರು ದಾಖಲಿಸಿ ಕೊಂಡು ನೋಟಿಸ್ ಜಾರಿ ಮಾಡಿದ್ದಾರೆ.
 
ಕಾಮಗಾರಿ ನಡೆದು ಒಂದು ತಿಂಗಳಿನಲ್ಲಿ ಅಭಿವೃದ್ದಿ ಕಂಡ ರಸ್ತೆ ಹಾಗೂ ಚರಂಡಿಗಳು ಯಥಾಸ್ಥತಿಗೆ ಮರಳಿದ್ದು ೧೪ ಹಾಗೂ ೧೫ ನೇ ವಾರ್ಡಿನಲ್ಲಿ ನಡೆದಿರುವ ಹಲವು ಅಭಿವೃದ್ದಿ ಕಾಮಗಾರಿಗಳ ಕಡತಗಳು ಮತ್ತು ಅಭಿವೃದ್ದಿ ಕಾಮಗಾರಿಯ ಪೋಟೂಗಳನ್ನು ಲೋಕಯಕ್ತಕ್ಕೆ ನೀಡಿರುವ ಪುರಸಭ ಸದಸ್ಯರು ಕಳಪೆ ಕಾಮಗಾರಿಯ ಬಗ್ಗೆ ಈ ಹಿಂದೆಯು ಪುರಸಭೆ ವಿಶೇಷ ಅಧವೇಶನದಲ್ಲಿ ದೂರು ನೀಡಲಾಗಿದ್ದರು ಕ್ರಮ ಕೈಗೊಳ್ಳಲಾಗಿಲ್ಲ ಬದಲಾಗಿ ದೂರು ನೀಡಿದ್ದ ದಾಖಲೆಗಳೆ ಕಾಣೆಯಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಈ ಕಾಮಗಾರಿಗಳು ಕಳಪೆ ಎಂದು ಈ ಹಿಂದೆ ಪಟ್ಟಣದ ಹಲವು ಪ್ರಗತಿ ಪರ ಸಂಘ ಸಂಸ್ಥೆಗಳು ದೂರು ನೀಡಿ ಕಳಪೆ ಕಾಮಗಾರಿಗೆ ಕಾರಣರಾಗಿರುವ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಬಾರದು ಎಂದು ಆಗ್ರಹಿಸಿದ್ದರು ಆದರೆ ಸಂಘ ಸಂಸ್ಥೆಗಳ ಆಗ್ರಹಕ್ಕೆ ಮನ್ನಣೆ ನೀಡದ ಪುರಸಭೆ ಹಣ ಬೀಡುಗಡೆಗೂಳಿಸಿದೆ ಎಂದು ದೂರಿದ್ದಾರೆ.  


Share: