ಮೈಸೂರು, ಜ.3: ಕರಾವಳಿ ಪ್ರದೇಶದ ಜನರು ತಮ್ಮ ಸಂಸ್ಕೃತಿ ಮತ್ತು ವೈಭವ ನಶಿಸಿಹೋಗದಂತೆ ಎಚ್ಚರ ವಹಿಸಬೇಕೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಂಘದ ಆಶ್ರಯದಲ್ಲಿ ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಕರಾವಳಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಉಡುಪಿ ಮತ್ತು ಕರಾವಳಿ ಜಿಲ್ಲೆಗಳನ್ನು ಒಳಗೊಂಡಿರುವ ಕರಾವಳಿ ಪ್ರದೇಶದಲ್ಲಿ ನೂರಾರು ಪುಣ್ಯ ಕ್ಷೇತ್ರಗಳಿದ್ದು, ಶ್ರೀಮಂತ ಸಂಸ್ಕೃತಿ ಹಾಗೂ ಆಚರಣೆಗಳು ರೂಢಿಯಲ್ಲಿವೆ ಎಂದು ಅವರು ವರ್ಣಿಸಿದರು.
ಕರಾವಳಿಯ ಅದರಲ್ಲೂ ವಿಶೇಷವಾಗಿ ದ.ಕ.ಜಿಲ್ಲೆಯ ಜನರು ದೇಶ ವಿದೇಶಗಳು ಸೇರಿದಂತೆ ಅನೇಕ ಕಡೆ ವಾಸವಾಗಿದ್ದಾರೆ. ಆದರೆ, ಎಲ್ಲಿ ಹೋದರೂ ಅವರು ತಮ್ಮ ಮೂಲ ಸಂಸ್ಕೃತಿಯ ಸ್ಮರಣೆಯನ್ನು ಮರೆಯು ವುದಿಲ್ಲ ಎಂದು ದೇವೇಗೌಡ ಪ್ರಶಂಸಿದರು.
ಕರಾವಳಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತ ನಾಡಿ, ವಿಶಿಷ್ಟ ಸಂಸ್ಕೃತಿಯ ನೆಲೆಬೀಡಾ ಗಿರುವ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಪ್ರಾಧಿಕಾರ ವಿವಿಧ ಯೋಜನೆಗಳ ಮೂಲಕ ಪ್ರಯತ್ನಿಸಲಿದೆ ಎಂದರು.
ಈ ಸಂಬಂಧ ಸರಕಾರದ ಮುಂದೆಯೂ ಹಲವು ಪ್ರಸ್ತಾವನೆ ಗಳಿದ್ದು, ಅವುಗಳಿಗೆ ಅನುಮತಿ ಪಡೆದು ಜಾರಿಗೆ ತರುವುದಾಗಿ ಅವರು ಭರವಸೆ ನೀಡಿದರು.
ಶಾಸಕ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎಸ್.ಎ. ರಾಮದಾಸ್ ಮಾತನಾಡಿ, ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಜನರು ವಿಶ್ವಾದ್ಯಂತ ಹೆಸರು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಜಯಪ್ರಕಾಶ ಹೆಗಡೆ, ಶಾಸಕ ಸಾ.ರಾ. ಮಹೇಶ್, ದ.ಕ.ಜಿಲ್ಲಾ ಸಂಘದ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ರಾವ್, ಜನಾರ್ದನ್ ಹಾಗೂ ಇತರರು ಉಪಸ್ಥಿತರಿದ್ದರು.
‘ಸಿಎಂ ಸ್ಥಾನದಲ್ಲಿ ಮುಂದುವರಿಯಲು ಯಡಿಯೂರಪ್ಪ ಅನರ್ಹರು’
ಮೈಸೂರು, ಜ.೩: ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಯಡಿಯೂರಪ್ಪ ಅನರ್ಹರು ಎಂದು ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮವೊಂದರ ನಿಮಿತ್ತ ನಗರಕ್ಕೆ ಇಂದು ಆಗಮಿಸಿದ್ದ ಅವರು ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಮಾಣವಚನ ಸ್ವೀಕರಿಸಿ, ಸಂವಿಧಾನ ಬದ್ಧ ಹುದ್ದೆಯನ್ನು ಅಲಂಕರಿಸಿರುವ ಯಡಿಯೂರಪ್ಪ “ನಾನು ತಪ್ಪು ಮಾಡಿದ್ದೇನೆ, ಕ್ಷಮಿಸಿ” ಎಂದು ಗೋಗರೆಯುತ್ತಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಇಷ್ಟಕ್ಕೂ ಕ್ಷಮಿಸಲು ನಾವ್ಯಾರು ? ಎಲ್ಲವನ್ನೂ ಜನರೇ ನೋಡಿಕೊಳ್ಳುತ್ತಾರೆ ಬಿಡಿ ? ಎಂದು ದೇವೇಗೌಡ ಪ್ರತಿಕ್ರಿಯಿಸಿದರು.
ಬಿಜೆಪಿಯ ಆಂತರಿಕ ಭಿನ್ನಮತ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಗೆ ತೆರಳಿ “ನಾವೆಲ್ಲಾ ಒಂದಾಗಿದ್ದೇವೆ” ಎಂದು ಹಿಂದಿರುಗಿದ ನಂತರವೂ ಏನಾಯಿತು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಚುಟುಕಾಗಿ ನುಡಿದರು. ಸ್ಪೀಕರ್ ಸ್ಥಾನದ ಚುನಾವಣೆ ಸಂದರ್ಭದಲ್ಲಿನ ಘಟನೆಗಳು ಹಾಗೂ ನಂತರದ ಬೆಳವಣಿಗೆ ಕುರಿತು ಮಾತನಾಡಲು ದೇವೇಗೌಡ ಇಚ್ಛಿಸಲಿಲ್ಲ. ರೈತರ ಸಾಲಮನ್ನಾ ವಿಷಯದ ಬಗ್ಗೆ ಜ.೧೫ರಂದು ವಿಧಾನಸಭೆ ಅಧಿವೇಶನ ಕರೆದು ಚರ್ಚಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರಂತೆ. ಅದೇನು ಮಾಡ್ತಾರೆ ನೋಡೋಣ ಬಿಡಿ ಎಂದು ಅವರು ನುಡಿದರು.