ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಗುಲಬರ್ಗಾ: ಸಾಲಕ್ಕಾಗಿ ಅರ್ಜಿ ಆಹ್ವಾನ

ಗುಲಬರ್ಗಾ: ಸಾಲಕ್ಕಾಗಿ ಅರ್ಜಿ ಆಹ್ವಾನ

Tue, 20 Apr 2010 03:00:00  Office Staff   S.O. News Service

ಗುಲಬರ್ಗಾ,ಏ.೧೯.(ಕ.ವಾ.)-ಅಂಗವಿಕಲರ ಸ್ವಯಂ ಸೇವಾ ಸಂಸ್ಥೆಗಳಿಗೆ / ಸ್ವ ಸಹಾಯ ಸಂಘಗಳಿಗೆ ಎನ್.ಹೆಚ್.ಎಫ್.ಡಿ.ಸಿ. ಯಿಂದ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ: ೨೮-೦೪-೨೦೧೦ರೊಳಗೆ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಗುಲಬರ್ಗಾ ಇವರ ಕಚೇರಿಗೆ ಸಲ್ಲಿಸಬೇಕು.

 

ಸಾಲ ಪಡೆಯಲು ಅರ್ಹತೆ ಮತ್ತು ಸಲ್ಲಿಸಬೇಕಾದ ದಾಖಲಾತಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು/ ಸ್ವಸಹಾಯ ಗುಂಪುಗಳಿಂದ ಸಾಲ ಪಡೆಯಲು ಇರಬೇಕಾದ ಫಲಾನುಭವಿಗಳ ಅರ್ಹತೆಗಳಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣ ಎದುರುಗಡೆ, ಸರ್ಕಾರಿ ಅಂಧ ಮಕ್ಕಳ ಶಾಲೆ ಗುಲಬರ್ಗಾ ಇವರಿಗೆ ಸಂಪರ್ಕಿಸಲು ಕೋರಲಾಗಿದೆ.

 

ಕರಾಮುವಿ: ಏ.೩೦ರವರೆಗೆ ದಂಡಶುಲ್ಕ ಪಾವತಿಗೆ ಅವಕಾಶ

 

 

ಗುಲಬರ್ಗಾ,ಏ.೧೯.(ಕ.ವಾ.)-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದ ಎಂ.ಎ./ಎಂ.ಕಾಂ.ಪ್ರಥಮ ಮತ್ತು ಅಂತಿಮ ಸಿಸಮ್ ಸ್ಕೀಮ್ ವಿದ್ಯಾರ್ಥಿಗಳು ಜೂನ್ ೨೦೧೦ರಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅಹಾರಾಗಿರುತ್ತಾರೆ. ೨೦೦೪-೦೫,೨೦೦೫-೦೬,೨೦೦೬-೦೭ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ೨೦೧೦ರ ಜೂನ್ ಮಾಹೆಯಲ್ಲಿ ನಡೆಯುವ ಪರೀಕ್ಷೆಗಳು ಅಂತಿಮ ಅವಕಾಶವಾಗಿರುತ್ತವೆ. ಯಾವುದೇ ಕಾರಣದಿಂದ ಈ ಅವಕಾಶವನ್ನು ವಿಸ್ತರಿಸಲಾಗುವುದಿಲ್ಲ. ಎಂ.ಎ. ಮನೋವಿಜ್ಞಾನ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಎಂ.ಎ./ಎಂ.ಕಾಂ. (ಪ್ರಥಮ ಮತ್ತು ಅಂತಿಮ) ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಅರ್ಹರಾಗಿರುತ್ತಾರೆ. ಎಂ. ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸುವ ಬಗ್ಗೆ ಸಕಾಲದಲ್ಲಿ ಮಾಹಿತಿಯ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು. ಪರೀಕ್ಷೆಗಳು ೨೦೧೦ರ ಜೂನ್ ಮಾಹೆಯಲ್ಲಿ ಪ್ರಾರಂಭವಾಗುತ್ತವೆ. ಈ ಪರೀಕ್ಷೆಗಳಿಗೆ ಹಾಜರಾಗಲು ೨೦೦ ರೂ. ದಂಡ ಶುಲ್ಕ ಸಹಿತ ೨೦೧೦ರ ಏಪ್ರಿಲ್ ೩೦ ಕೊನೆಯದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ವಿವರವಾದ ಶುಲ್ಕದ ಮಾಹಿತಿಗಾಗಿ ಕರಾಮುವಿ ಪ್ರಾದೇಶಿಕ ಕೇಂದ್ರ ಗುಲಬರ್ಗಾ ದೂರವಾಣಿ ಸಂಖ್ಯೆ ೦೮೪೭೨-೨೬೫೮೬೮ಕ್ಕೆ ಸಂಪರ್ಕಿಸಬಹುದಾಗಿದೆ.

 

 

ಡಾ|| ಅಂಬೇಡ್ಕರ್ ಸ್ಮರಣಾರ್ಥ ಕ್ರೀಡಾಕೂಟದ ಸಮಾರೋಪ ಸಮಾರಂಭ

 

ಗುಲಬರ್ಗಾ,ಏ.೧೯.(ಕ.ವಾ.)- ಗುಲಬರ್ಗಾ ಸರ್ಕಾರಿ ಮಹಾವಿದ್ಯಾಲಯದಲ್ಲಿ ದಿನಾಂಕ: ೨೦-೦೪-೨೦೧೦ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮರಣಾರ್ಥ ಅಂತರ ಕಾಲೇಜು ಸಾಂಸ್ಕೃತಿಕ ಮತ್ತು ಕ್ರೀಡಾಕೂಟದ ಸಮಾರೋಪ ಸಮಾರಂಭ ಜರುಗಲಿದೆ ಎಂದು ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.

 

 

ಜನಗಣತಿ-೨೦೧೧ ಸಹಾಯವಾಣಿ ಕೇಂದ್ರ ಪ್ರಾರಂಭ

 

 

ಗುಲಬರ್ಗಾ

,ಏ.೧೯.(ಕ.ವಾ.)- ಭಾರತದ ಜನಗಣತಿ-೨೦೧೧ರ ಮನೆ ಗಣತಿ ಮತ್ತು ಮನೆ ಪಟ್ಟಿ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಅವುಗಳನ್ನು ಪರಿಹರಿಸಲು ಪಾಲಿಕೆಯಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ದೂರವಾಣಿ ಸಂಖ್ಯೆ ೦೮೪೭೨-೨೭೮೩೬೪ ಮತ್ತು ಉಚಿತ ದೂರವಾಣಿ ಸಂಖ್ಯೆ ೧೦೯೫ ಇರುತ್ತದೆ. ಇದರ ಪೂರ್ಣ ಜವಾಬ್ದಾರಿಯನ್ನು ಪಾಲಿಕೆಯ ಕಾರ್ಯಪಾಲಕ ಅಭಿಯಂತರರಿಗೆ ವಹಿಸಲಾಗಿದೆ.

 

 

ಭಾರತದ ಜನಗಣತಿ-೨೦೧೧ಕ್ಕೆ ಸಂಬಂಧಿಸಿದಂತೆ ಬಂದಂತಹ ದೂರುಗಳನ್ನು ಕ್ರಸಂ/ ದಿನಾಂಕ/ ದೂರುದಾರರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ/ ದೂರಿನ ಮಾದರಿ, ಕ್ರಮ/ ಸಹಿ, ಈ ಮಾದರಿಯಲ್ಲಿ ದಾಖಲಿಕೊಳ್ಳಲಾಗುವುದು. ದೂರುಗಳನ್ನು ತೀವ್ರಗತಿಯಲ್ಲಿ ವಿಲೇವಾರಿ ಮಾಡಲು ಗುರುರಾಜ ಕುಲಕರ್ಣಿ ಜನಗಣತಿ ಗುಮಾಸ್ತರನ್ನು ಕಾರ್ಯಪಾಲಕ ಅಭಿಯಂತರರಿಗೆ ಸಹಾಯಕರಾಗಿ ಕೆಲಸಕ್ಕೆ ನಿಯೋಜಿಸಲಾಗಿದೆ. ಜನಗಣತಿ-೨೦೧೧ಕ್ಕೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಈ ಮೇಲಿನ ಮಾದರಿಯಲ್ಲಿ ತಮ್ಮ ದೂರುಗಳನ್ನು ಸಲ್ಲಿಸಬೇಕೆಂದು ಗುಲಬರ್ಗಾ ಮಹಾನಗರ ಪಾಲಿಕೆಯ ಪ್ರಿನ್ಸಿಪಲ್ ಜನಗಣತಿ ಅಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

 

 

ಲೋಕೋಪಯೋಗಿ ಸಚಿವರ ಪ್ರವಾಸ

 

ಗುಲಬರ್ಗಾ,ಏ.೧೯.(ಕ.ವಾ.)- ಲೋಕೋಪಯೋಗಿ ಸಚಿವರಾದ ಸಿ.ಎಂ. ಉದಾಸಿಯವರು ೨೦೧೦ರ ಏಪ್ರಿಲ್ ೨೨ ರಂದು ಬೆಳಿಗ್ಗೆ ೧೨-೩೦ ಗಂಟೆಗೆ ಗುಲಬರ್ಗಾಕ್ಕೆ ರಸ್ತೆ ಮೂಲಕ ಆಗಮಿಸುವರು. ಮಧ್ಯಾಹ್ನ ೩ ರಿಂದ ೪ ಗಂಟೆಯವರೆಗೆ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ಮತ್ತು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಕೈಗೊಳ್ಳುವರು. ನಂತರ ಬೀದರ ಜಿಲ್ಲೆಯ ಭಾಲ್ಕಿಗೆ ರಸ್ತೆ ಮೂಲಕ ಪ್ರಯಾಣಿಸುವರು.

 

ವಿಧಾನ ಪರಿಷತ್ ಸಭಾಪತಿ ಅವರು ಪ್ರವಾಸ ಕಾರ್ಯಕ್ರಮ

 

ಗುಲಬರ್ಗಾ,ಏ.೧೯.(ಕ.ವಾ.)- ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು ೨೦೧೦ರ ಏಪ್ರಿಲ್ ೨೦ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಗುಲಬರ್ಗಾಕ್ಕೆ ಆಗಮಿಸಿ ಮಧ್ಯಾಹ್ನ ೧-೩೦ ಗಂಟೆಗೆ ಭಾಲ್ಕಿಗೆ ಪ್ರಯಾಣಿಸುವರು. ಭಾಲ್ಕಿ ಹಿರೇಮಠ ಸಂಸ್ಥಾನದವರು ಹಮ್ಮಿಕೊಂಡಿರುವ ಪೂಜ್ಯ ಡಾ|| ಬಸವಲಿಂಗ ಪಟ್ಟದ್ದೇವರ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಗುಲಬರ್ಗಾಕ್ಕೆ ಆಗಮಿಸಿ ರಾತ್ರಿ ೧೦ ಗಂಟೆಗೆ ಬಸವ ಎಕ್ಸ್‌ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.

 

ಚುನಾವಣಾ ವಿಶೇಷ ಮಾಹಿತಿ:೨ ದಿನಾಂಕ:೧೯-೦೪-೨೦೧೦

 

ಗ್ರಾಮಪಂಚಾಯ್ತಿ ಚುನಾವಣೆ-೨೦೧೦

 

ಗ್ರಾಮಪಂಚಾಯ್ತಿವಾರು ಸದಸ್ಯರ ಆಯ್ಕೆಯ ಪಕ್ಷಿನೋಟ

 

ಜಿಲ್ಲೆಯಲ್ಲಿ ದಿನಾಂಕ:೧೨-೦೫-೨೦೧೦ರಂದು ೨೧೬ ಗ್ರಾಮಪಂಚಾಯ್ತಿಗಳ ೨೨೮೨ ಸದಸ್ಯರ ಆಯ್ಕೆಗೆ ಚುನಾವಣೆ ಜರುಗಲಿದೆ. ಆಯ್ಕೆಗೊಳ್ಳಲಿರುವ ಒಟ್ಟು ಸದಸ್ಯರಲ್ಲಿ ೧೧೯೦ಪುರುಷ ಮತ್ತು ೧೦೯೨ ಮಹಿಳಾ ಸದಸ್ಯರಿರುತ್ತಾರೆ. ಮೀಸಲು ಸದಸ್ಯರ ವಿವರದನ್ವಯ ಪರಿಶಿಷ್ಟಜಾತಿಯ ೨೬೪ಪುರುಷ ಮತ್ತು ೨೫೦ಮಹಿಳೆಯರು ಸೇರಿದಂತೆ ೫೧೪ಸದಸ್ಯರು, ಪರಿಶಿಷ್ಟವರ್ಗದ ೨೦ಪುರುಷ ಮತ್ತು ೨೦೮ ಮಹಿಳೆಯರು ಸೇರಿದಂತೆ ೨೨೮ ಸದಸ್ಯರು, ಹಿಂದುಳಿದ ವರ್ಗ ’ಅ’ದಲ್ಲಿ ೨೬೩ಪುರುಷ ಮತ್ತು ೩೦೬ ಮಹಿಳೆಯರು ಸೇರಿದಂತೆ ೫೬೯ ಸದಸ್ಯರು, ಹಿಂದುಳಿದ ವರ್ಗ ’ಬ’ದಲ್ಲಿ ೧೮೦ಪುರುಷ ಮತ್ತು ೫ಮಹಿಳೆಯರು ಸೇರಿದಂತೆ ೧೮೫ ಸದಸ್ಯರು ಹಾಗೂ ಸಾಮಾನ್ಯ ವರ್ಗದಲ್ಲಿ ೪೬೩ಪುರುಷ ಮತ್ತು ೩೨೩ ಮಹಿಳೆಯರು ಸೇರಿದಂತೆ ೭೮೬ ಸದಸ್ಯರಿರುತ್ತಾರೆ. ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯ್ತಿವಾರು ಸದಸ್ಯರ ಆಯ್ಕೆಯ ಪಕ್ಷಿನೋಟ ಇಂತಿದೆ.

ಕೊಪ್ಪ ತಾಲ್ಲೂಕಿನ ೨೨ ಗ್ರಾಮ ಪಂಚಾಯ್ತಿಗಳಲ್ಲಿ ೨೦ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದ್ದು ಪ್ರತಿ ಗ್ರಾಮ ಪಂಚಾಯ್ತಿವಾರು ಆಯ್ಕೆಗೊಳ್ಳಲಿರುವ ಸದಸ್ಯರ ವಿವರದನ್ವಯ ಜಾವಲ್ಮನೆ ೮, ಹಿರೇಕೊಡಿಗೆ ೧೦, ಹರಂದೂರು ೧೩, ಕೆಸವೆ ೬, ಬಂಡಿಗಡಿ ೧೦, ಶ್ಯಾನುವಳ್ಳಿ ೭, ನಿಲುವಾಗಿಲು ೬, ಹರಿಹರಪುರ ೯, ಅಸಗೋಡು ೭, ಕೊಪ್ಪ ಗ್ರಾಮಾಂತರ ೧೫, ಬಿಂತ್ರವಳ್ಳಿ ೧೧, ಮರಿತೊಟ್ಲು ೭, ನುಗ್ಗಿ ೯, ನರಸೀಪುರ ೮, ತುಳುವಿನ ಕೊಪ್ಪ ೮, ಭುವನಕೋಟಿ ೭, ಜಯಪುರ ೧೪, ಹಿರೇಗದ್ದೆ ೧೦, ಅಗಳಗಂಡಿ ೧೧ ಮತ್ತು ಗುಡ್ಡೆತೋಟ ಗ್ರಾಮ ಪಂಚಾಯ್ತಿ ೧೨ ಸದಸ್ಯರನ್ನು ಹೊಂದಿದೆ.

ಮೂಡಿಗೆರೆ ತಾಲ್ಲೂಕಿನ ೨೯ ಗ್ರಾಮಪಂಚಾಯ್ತಿಗಳಲ್ಲಿ ೨೪ ಗ್ರಾಮ, ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದ್ದು ಕಳಸ(ಮಾವಿನಕೆರೆ) ೨೯, ಸಂಸೆ ೧೬, ಹೊರನಾಡು ೭, ತೋಟದೂರು ೧೦, ಮರಸಣಿಗೆ ೧೦, ಇಡಕಣಿ(ಹಿರೈಬೈಲು)೧೨, ಜಾವಳಿ ೧೦, ನಿಡುವಾಳೆ ೬, ಬಾಳೂರು ೬, ಕೂವೆ ೧೪, ಸುಂಕಸಾಲೆ ೧೧, ತ್ರಿಪುರ ೮, ಫಲ್ಗುಣಿ ೯, ಬೆಟ್ಟಗೆರೆ ೭, ಹಳೇಮೂಡಿಗೆರೆ ೧೪, ಹೆಸಗಲ್ (ಬೆಳಗೊಳ)೧೯, ಮಾಕೋನಹಳ್ಳಿ ೧೦, ನಂದೀಪುರ(ಆಸ್ಪತ್ರೆ‌ಆವರಣ) ೮, ದಾರದಹಳ್ಳಿ ೧೨, ಗೋಣಿಬೀಡು ೨೨, ಜಿನ್ನಿಗ ೧೦, ಹಂತೂರು ೧೬, ಊರುಬಗೆ ೯ ಮತ್ತು ಕಿರಗುಂದ ಗ್ರಾಮ ಪಂಚಾಯ್ತಿ ೮ ಸದಸ್ಯರನ್ನು ಹೊಂದಿದೆ.

ನರಸಿಂಹರಾಜಪುರ ತಾಲ್ಲೂಕಿನ ಎಲ್ಲ ೧೪ ಗ್ರಾಮಪಂಚಾಯ್ತಿಗಳಿಗೂ ಚುನಾವಣೆ ನಡೆಯಲಿದ್ದು ನಾಗಲಾಪುರ ೮, ಹೊನ್ನೆಕೊಡಿಗೆ ೮, ಮೆಣಸೂರು ೧೦, ಕಡುಹಿನಬೈಲು ೯, ಮತ್ತಿನಕೊಪ್ಪ ೧೯, ಗುಬ್ಬಿಗಾ ೮, ಬಾಳೆ ೭, ಕರ್ಕೇಶ್ವರ ೮, ಕಾನೂರು ೧೧, ಸೀತೂರು ೧೧, ಆಡುವಳ್ಳಿ ೯, ಬನ್ನೂರು ೧೧, ಬಿ.ಕಣಬೂರು ೨೭ ಮತ್ತು ಮಾಗುಂಡಿ ಗ್ರಾಮ ಪಂಚಾಯ್ತಿ ೬ ಸದಸ್ಯರನ್ನು ಹೊಂದಿದೆ.

ಶೃಂಗೇರಿ ತಾಲ್ಲೂಕಿನ ಎಲ್ಲ ೯ ಗ್ರಾಮ ಪಂಚಾಯ್ತಿಗಳಿಗೂ ಚುನಾವಣೆ ನಡೆಯಲಿದ್ದು ಬೇಗಾರು ೯, ಧರೆಕೊಪ್ಪ ೭, ಅಡ್ಡಗದ್ದೆ ೯, ಮರ್ಕಲ್ ೧೩, ಮೆಣಸೆ ೧೬, ವಿದ್ಯಾರಣ್ಯಪುರ ೧೩, ನೆಮ್ಮೂರು ೭, ಕೆರೆ ೫ ಮತ್ತು ಕೂತುಗೋಡು ಗ್ರಾಮ ಪಂಚಾಯ್ತಿಯು ೭ ಸದಸ್ಯರನ್ನು ಹೊಂದಿದೆ.

ತರೀಕೆರೆ ತಾಲ್ಲೂಕಿನ ೪೬ ಗ್ರಾಮ ಪಂಚಾಯ್ತಿಗಳಲ್ಲಿ ೪೪ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದ್ದು ಲಕ್ಕವಳ್ಳಿ ೧೮, ಕೆಂಚಿಕೊಪ್ಪ ೧೦, ಹಲಸೂರು ೭, ಬರಗೇನಹಳ್ಳಿ ೮, ಮುಡಗೋಡು ೧೬, ಬಾವಿಕೆರೆ ೧೨, ಕರಕುಚ್ಚಿ ೧೨, ಗೋಪಾಲ ೮, ಮಳಲಿಚನ್ನೇನಹಳ್ಳಿ ೧೦, ಬೇಲೇನಹಳ್ಳಿ ೧೫, ಸಿದ್ದರಹಳ್ಳಿ ೧೨, ದೋರನಾಳು ೯, ಬೆಟ್ಟದಹಳ್ಳಿ ೧೦, ಸುಣ್ಣದಹಳ್ಳಿ ೮, ಗುಳ್ಳದಮನೆ ೭, ನಂದಿಬಟ್ಟಲು ೧೨, ಕಾಮನದುರ್ಗ ೭, ಉಡೇವಾ ೧೧, ಲಿಂಗದಹಳ್ಳಿ ೨೦, ಹಾದಿಕೆರೆ ೯, ಅಮೃತಾಪುರ ೯, ನೇರಲೇಕೆರೆ ೧೧, ಹುಣಸಘಟ್ಟ ೧೩, ಕೋರನಹಳ್ಳಿ ೮,

 

ಶ್ಯಾನುಭೋಗನಹಳ್ಳಿ ೯, ಕುಡ್ಲೂರು ೧೩, ಕೊರಟಿಕೆರೆ ೧೦, ಬಗ್ಗವಳ್ಳಿ ೧೨, ಸೊಕ್ಕೆ ೭, ಅತ್ತಿಮೊಗ್ಗೆ ೮, ಗೌರಾಪುರ ೭, ಸೊಲ್ಲಾಪುರ ೧೦, ಬೇಗೂರು ೧೧, ಮುಗುಳಿ ೭, ಗಡೀಹಳ್ಳಿ ೧೨, ಶಿವನಿ ೧೩, ಜೀರನಹಳ್ಳಿ ೧೨, ಕಲ್ಲೇನಹಳ್ಳಿ ೯, ತ್ಯಾಗದಕಟ್ಟೆ ೧೩, ಅನುವನಹಳ್ಳಿ ೮, ನಾರಾಣಾಪುರ ೮, ಜಾವೂರು ೮, ಜಿಕ್ಕಾನವಂಗಲ ೯ ಮತ್ತು ತಿಗಡ ಗ್ರಾಮ ಪಂಚಾಯ್ತಿಯು ೮ ಸದಸ್ಯರನ್ನು ಹೊಂದಿದೆ.

ಕಡೂರು ತಾಲ್ಲೂಕಿನ ಎಲ್ಲ ೫೯ ಗ್ರಾಮ ಪಂಚಾಯ್ತಿಗಳಿಗೂ ಚುನಾವಣೆ ನಡೆಯಲಿದ್ದು ಅಂತರಗಟ್ಟೆ ೧೦, ಕಲ್ಕೆರೆ ೮, ಆಸಂದಿ ೮, ಗಿರಿಯಾಪುರ ೭, ಹಿರೇನಲ್ಲೂರು ೧೩, ಚಿಕ್ಕಬಳ್ಳೇಕೆರೆ ೯, ಚೌಳಹಿರಿಯೂರು ೧೩, ವಕ್ಕಲಗೆರೆ ೧೨, ಪುರ ೧೦, ಬಿಸಲೆರೆ ೭, ಬಾಸೂರು ೧೨, ಕಾಮನಕೆರೆ ೧೦, ಜೋಡಿತಿಮ್ಮಾಪುರ ೮, ಬಳ್ಳಿಗನೂರು ೧೨, ಚಿಕ್ಕಂಗಳ ೮, ಮಲ್ಲೇಶ್ವರ ೧೧, ಬಿಳುವಾಲ ೯, ಗರ್ಜೆ ೮, ಯಗಟಿ ೧೩, ಉಡುಗೆರೆ ೯, ಹೋಚಿಹಳ್ಳಿ ೮, ಗಂಗನಹಳ್ಳಿ ೭, ಕುಂಕನಾಡು ೧೨, ಉಳಿಗೆರೆ ೯, ಅಣ್ಣೆಗೆರೆ ೯, ಯಳ್ಳಂಬಳಸೆ ೧೧, ವೈ.ಮಲ್ಲಾಪುರ ೧೦, ತಂಗಲಿ ೧೧, ಕಡೂರಹಳ್ಳಿ ೭, ಸರಸ್ವತಿಪುರ ೧೧, ಎಮ್ಮೆದೊಡ್ಡಿ ೧೫, ಬಿಸಲೆಹಳ್ಳಿ ೧೦, ಪಟ್ಟಣಗೆರೆ ೧೩, ಜಿಗಣೆಹಳ್ಳಿ ೧೦, ಜೀಲನಹಳ್ಳಿ ೫, ಮತಿಘಟ್ಟ ೧೩, ವಿ.ಯರದಕೆರೆ ೯, ಸಿಂಗಟಗೆರೆ ೧೬, ಕೆ.ಬಿದರೆ ೧೩, ಅಣೇಗೆರೆ ೧೧, ಪಂಚನಹಳ್ಳಿ ೯, ತಿಮ್ಲಾಪುರ ೧೦, ಎಸ್.ಮಾದಾಪುರ ೦೯, ಸೋಮನಹಳ್ಳಿ ೧೧, ಕೆರೆಸಂತೆ ೧೧, ಜೋಡಿಹೋಚಿಹಳ್ಳಿ ೧೦, ಬಾಣೂರು ೧೧, ಸಖರಾಯಪಟ್ಟಣ ೧೬, ನಾಗೇನಹಳ್ಳಿ ೧೦, ದೇವನೂರು ೧೪, ಚಿಕ್ಕದೇವನೂರು ೧೧, ನಿಡಘಟ್ಟ ೧೬, ಹುಲಿಕೆರೆ ೧೩, ಎಸ್.ಬಿದರೆ ೧೫, ಹುಲ್ಲೇಹಳ್ಳಿ ೧೦, ನಿಡುವಳ್ಳಿ ೭, ಬಳ್ಳೇಕೆರೆ ೮, ಪಿಳ್ಳೇನಹಳ್ಳಿ ೧೦ ಮತ್ತು ನಾಗರಾಳು ಗ್ರಾಮ ಪಂಚಾಯ್ತಿ ೧೦ ಸದಸ್ಯರನ್ನು ಹೊಂದಿದೆ.

ಚಿಕ್ಕಮಗಳೂರು ತಾಲ್ಲೂಕಿನ ೪೭ ಗ್ರಾಮ ಪಂಚಾಯ್ತಿಗಳಲ್ಲಿ ೪೬ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದ್ದು ಪ್ರತೀ ಗ್ರಾಮ ಪಂಚಾಯ್ತಿವಾರು ಆಯ್ಕೆಗೊಳ್ಳಲಿರುವ ಸದಸ್ಯರ ವಿವರದನ್ವಯ ತೊಗರಿಹಂಕಲ್ ೧೫, ಇನಾಂ ದತ್ತಾತ್ರೇಯ ಪೀಠ ೭, ಮೇಲಿನಹುಲುವತ್ತಿ ೭, ಶಿರವಾಸೆ ೧೪, ಬಿದರೆ ೯, ಕಡವಂತಿ ೮, ದೇವದಾನ ೧೬, ಹುಯಿಗೆರೆ ೧೦, ಬಸರವಳ್ಳಿ ೯, ಬೈಗೂರು ೯, ಬ್ಯಾರವಳ್ಳಿ(ಮಲ್ಲಂದೂರು) ೧೨, ದೊಡ್ಡಮಾಗರವಳ್ಳಿ ೧೦, ಆಲ್ದೂರು ೨೬, ಸತ್ತೀಹಳ್ಳಿ ೧೪, ಕೆಳಗೂರು ೧೦, ತಳೀಹಳ್ಳ ೯, ಮೈಲಿಮನೆ ೧೧, ಆಣೂರು ೧೩, ವಸ್ತಾರೆ ೭, ಕೂದುವಳ್ಳಿ ೭, ಬಸ್ಕಲ್ ೯, ಕೆ.ಆರ್.ಪೇಟೆ (ಬಿಗ್ಗನಹಳ್ಳಿ ದಾಖಲೆ) ೮, ಮಳಲೂರು ೯, ಅಂಬಳೆ ೧೦, ಮುಗಳವಳ್ಳಿ ೯, ಮರ್ಲೆ ೧೪, ಹರಿಹರದಹಳ್ಳಿ ೯, ಕಳಸಾಪುರ ೧೫, ಈಶ್ವರಹಳ್ಳಿ ೧೦, ಬೆಳವಾಡಿ ೧೪, ಮಾಚೇನಹಳ್ಳಿ ೮, ಕುರುಬರಬೂದಿಹಾಳ್ ೭, ಸಿಂಧಿಗೆರೆ ೯, ಲಕ್ಯಾ ೧೨, ಲಕ್ಕಮ್ಮನಹಳ್ಳಿ ೮, ಹಿರೇಗೌಜ ೧೨, ಬಿಳೇಕಲ್ಲನಹಳ್ಳಿ ೧೨, ಮಲ್ಲೇನಹಳ್ಳಿ (ಬಿಂಡಿಗಾ) ಗ್ರಾಮ ೧೪, ದಾಸರಹಳ್ಳಿ ೯, ಹಿರೇಕೊಳಲೆ ೯, ಅಲ್ಲಂಪುರ ೧೧, ಬೀಕನಹಳ್ಳಿ ೮, ಕರ್ತಿಕೆರೆ ೧೬, ತೇಗೂರು ೧೬, ಮೂಗ್ತಿಹಳ್ಳಿ ೧೨ ಮತ್ತು ಇಂದಾವರ ಗ್ರಾಮ ಪಂಚಾಯ್ತಿಯು ೬ ಸದಸ್ಯರನ್ನು ಹೊಂದಿದೆ.

 

 


Share: