ಭಟ್ಕಳ, ಫೆಬ್ರವರಿ 18: ಇಲ್ಲಿನ ಭಟ್ಕಳ ಹೆಲ್ತ್ ಕೇರ್ ಆಡಳಿತ ಮಂಡಳಿಯ ವೆಲ್ಫೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದ ರೋಗಿಯ ಸಂಬಂಧಿಕರು ದಾಂಧಲೆಯನ್ನು ಮಾಡಿದ್ದಲ್ಲದೆ ವೈದ್ಯರ ಮೇಲೆ ಮಾಡಿ ತುರ್ತು ಚಿಕಿತ್ಸಕ ಘಟಕ (ಐ.ಸಿ.ಯು),ಶಸ್ತ್ರ ಚಿಕಿತ್ಸೆ ಮಾಡುವ ಕೋಣೆ ದ್ವಂಸಗೊಳಿಸಿದ ಘಟನೆ ಬುಧವಾರದಂದು ರಾತ್ರಿ ೧೨-೩೦ ಕ್ಕೆ ಜರುಗಿದ್ದು ಈ ಕುರಿತು ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ವಿವರ: ಬುಧವಾರ ರಾತ್ರಿ ಸುಮಾರು ೧೧ ಗಂಟೆಗೆ ಶಿರಲಿಯ ರೋಗಿಯೊಬ್ಬರು ವೆಲ್ಫರ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದು ಅವರನ್ನು ತಪಾಸಣೆ ಮಾಡಿದ ವೈದ್ಯರು ರೋಗಿಗೆ ಯಾವುದೆ ತೊಂದರೆ ಇಲ್ಲ ಒತ್ತಡದಿಂದಾಗಿ(ಟೆನ್ಶನ್) ನಿಂದಾಗಿ ಬಳಲಿಕೆಯಾಗಿದೆ. ರೋಗಿಯ ಹೃದಯ ಸಂಬಂಧಿ ಕಾಯಿಲೆಯ ಕುರಿತು ತಪಾಸಣೆಯನ್ನು ನಡೆಸಿದ್ದರು ಎನ್ನಲಾಗಿದೆ. ಆದರೆ ರೋಗಿಗೆ ಏನಾದರೂ ತಿನ್ನಲು ಕೊಡಬಹುದೆ ಎಂದು ರೋಗಿಯ ಸಂಬಂಧಿಕರು ವೈದ್ಯರನ್ನು ಕೇಳಿದ್ದು ಆತನಿಗೆ ಏನಾದರೂ ಹಣ್ಣುಗಳನ್ನು ಕೊಡಿ ಎಂದಾಗ ಕಲ್ಲಂಗಡಿ ಹಣ್ಣನು ಕೊಟ್ಟಿದ್ದು ಅದನ್ನು ತಿಂದ ಕೆಲವೆ ನಿಮಿಷದಲ್ಲಿ ರೋಗಿಯ ಪ್ರಾಣ ಪಕ್ಷಿ ಹಾರಿ ಹೋಗಿದ್ದು ಇದರಿಂದ ರೊಚ್ಚಿಗೆದ್ದ ಮೃತ ವ್ಯಕ್ತಿಯ ಸಂಬಂಧಿಕರು ವೈದ್ಯರ ಮೇಲೆ ಎಕಾಎಕಿ ಹಲ್ಲೆಯನ್ನು ಮಾಡಿದ್ದು ಐಸಿಯು ಘಟಕದ ಯಂತ್ರ ಹಾಗೂ ಅಲ್ಲಿದ್ದ ಬೆಲೆಬಾಳುವ ಚಿಕಿತ್ಸಕ ವಸ್ತುಗಳನ್ನು ಹಾಳು ಮಾಡಿದ್ದು ವೈದ್ಯರ ನಿರ್ಲಕ್ಷದಿಂದಲೇ ಸಾವು ಸಂಭವಿಸಿದೆ ಎಂದು ರಂಪಾಟ ತೆಗೆದರೆನ್ನಲಾಗಿದೆ. ಸುದ್ದಿ ತಿಳಿದ ಸಿಪಿಐ ಗುರುಮತ್ತೂರು ಸ್ಥಳಕ್ಕ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎನ್ನಲಾಗಿದೆ.

ಘಟನೆಯನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನ ವೈದ್ಯರು ಸಹಾಯಕ ಕಮಿಷನರ್ ರಿಗೆ ಮನವಿಯನ್ನು ಸಲ್ಲಿಸಿ ಮಾತುಕತೆಯನ್ನು ನಡೆಸುತ್ತಿರುವುದು
ವೈದ್ಯರ ಸಂಘ ಖಂಡನೆ: ಬುಧವಾರದಂದು ರಾತ್ರಿ ರೋಗಿಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಭಟ್ಕಳ ಘಟಕವು ತೀವ್ರವಾಗಿ ಖಂಡಿಸಿದ್ದು ಈ ಕುರಿತು ವೈದ್ಯರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಸಂಜೆ ೭ ಗಂಟೆಗೆ ಸಹಾಯಕ ಕಮಿಷನರ್ ಡಾ.ತ್ರಿಲೋಕಚಂದ್ರ ರಿಗೆ ಮನವಿಪತ್ರವನ್ನು ನೀಡಿದ್ದು ಭಟ್ಕಳದಲ್ಲಿ ಹಲವಾರು ಬಾರಿ ವೈದ್ಯರ ಮೇಲೆ ಹಲ್ಲೆಯನ್ನು ಮಾಡಲಾಗಿದೆ. ಏನಾದರೂ ನೈಸರ್ಗಿಕ ಅನಾಹುತಗಳು ಜರುಗಿ ರೋಗಿಗೆ ಯಾವುದೇ ತೊಂದರೆ ಆದಲ್ಲಿ ವೈದ್ಯರು ಹಲ್ಲಗೊಳಗಾಗುತ್ತಿದ್ದಾರೆ. ಹೀಗಾದರೆ ಭಟ್ಕಳದಲ್ಲಿ ಯಾವನೆ ವೈದ್ಯ ಬರುವುದಿಲ್ಲ. ಈಗಾಗಲೆ ಇಲ್ಲಿನ ಜನರ ಮನಸ್ಥಿತಿಗೆ ರೋಸಿ ಹೋದ ಉತ್ತಮ ವೈದ್ಯರೆಲ್ಲ ಇಲ್ಲಿಂದ ಜಾಗ ಖಾಲಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯು ಮುಂದಿನ ದಿಗಳಲ್ಲಿ ಒದಗಿ ಬಾರದಿರಲಿ ಎಂದು ವೈದ್ಯ ಸಂಘವು ಸಹಾಯಕ ಕಮಿಷನರ್ ರಲ್ಲಿ ಮನವಿಯನ್ನು ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನ ಡಾ. ಸವಿತಾ ಕಾಮತ್, ಡಾ. ರಾಜಗೋಪಾಲ್ ರಾವ್, ಡಾ. ಜಲಾಲುದ್ದೀನ್, ಡಾ. ಸತಿಶ್ ಪ್ರಭು, ಡಾ. ರವಿಕುಮಾರ್, ಡಾ. ರಷೀದ್ ಮುಂತಾದವರು ಉಪಸ್ಥಿತರಿದ್ದರು.