ಭಟ್ಕಳ, ಅಕ್ಟೋಬರ್ 31: ಇತ್ತಿಚೆಗೆ ಉತ್ತರಕರ್ನಾಟಕದ ೮ ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಭಾರಿ ಅನಾಹುತದಲ್ಲಿ ಕೋಟ್ಯಾಂತರ ರೂಗಳ ಸ್ವತ್ತುವಿತ್ತಗಳು ಹಾನಿಯಾಗಿದ್ದು ನಾರಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದು ಈ ನಿಟ್ಟಿನಲ್ಲಿ ಸಂತೃಸ್ತರಿಗೆ ಪರಿಹಾರವನ್ನು ಒದಗಿಸುವಲ್ಲಿ ಭಟ್ಕಳದ ಮಜ್ಲಿಸೆ ಇಸ್ಲಾಹ್ ತಂಝೀಮ್ ನೇತೃತ್ವದಲ್ಲಿ ಭಟ್ಕಳದ ಮುಸ್ಲಿಮ್ ಸಂಘನೆಗಳು ಇಂದಿನಿಂದ ನಾಲ್ಕು ದಿನಗಳವರೆಗೆ ಮನೆಮನೆಗೆ ತೆರಳಿ ಪರಿಹಾರವನ್ನು ಸಂಗ್ರಹಿಸವ ’ನೆರೆಪೀಡಿತರಿಗೆ ನೆರವಾಗಿರಿ’ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಇದಕ್ಕೆ ಇಂದು ಮುಂಜಾನೆ 10 ಗಂಟೆಗೆ ಇಲ್ಲಿನ ಸುಲ್ತಾನ್ ಮಸೀದಿಯಿಮದ ಚಾಲನೆ ದೊರೆತಿದ್ದು ತಂಜೀಂ ಹಾಗೂ ಇತರ ಸಂಘಟನೆಗಳ ಮುಖಂಡರು ಮನೆ ಮನೆಗೆ ತೆರಳಿ ಹಣವನ್ನು ಸಂಗಹ್ರಹಿಸಿದರು. ನಾಲ್ಕು ದಿನಗಳ ಈ ಅಭಿಯಾನದಲ್ಲಿ ಒಟ್ಟಾದ ಹಣವನ್ನು ಉತ್ತರ ಕರ್ನಾಟಕದ ಜಿಲ್ಲೆಗಳ ಸಂತೃಸ್ತರಿಗೆ ನಿಡಲಾಗುವುದು ಎಂದು ತಂಝೀಮ್ ಮುಖಂಡರು ತಿಳಿದ್ದಾರೆ.
ಈ ಅಭಿಯಾನದಲ್ಲಿ ತಂಝೀಮ್ ನ ಪ್ರಧಾನ ಕಾರ್ಯದರ್ಶಿ ಎಸ್.ಜೆ. ಖಾಲಿದ್,ಅಬ್ದುಲ್ಲಾ ದಾಮೂದಿ, ಜಮಾತೆ ಇಸ್ಲಾಮಿಯ ಸೈಯ್ಯದ್ ಅಶ್ರಫ್ ಬರ್ಮಾವರ್, ಯಾಸಿರ್ ನದ್ವಿ ಬರ್ಮಾವರ್, ಶೌಕತ್ ಕತೀಬ್ ಮುಂತಾದವರು ಭಾಗವಹಿಸದ್ದರು.