ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ಮಾದಕ ವಸ್ತು ಸಾಗಣೆದಾರದ ಬಂಧನ - ಒಂದು ಕೋಟಿ ರೂ ಕೋಕೇನ್ ವಶ

ಬೆಂಗಳೂರು: ಮಾದಕ ವಸ್ತು ಸಾಗಣೆದಾರದ ಬಂಧನ - ಒಂದು ಕೋಟಿ ರೂ ಕೋಕೇನ್ ವಶ

Tue, 19 Jan 2010 16:14:00  Office Staff   S.O. News Service

ಬೆಂಗಳೂರು, ಜನವರಿ 19:ಅಕ್ರಮವಾಗಿ ಮಾದಕ ವಸ್ತುಗಳನ್ನು  ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ೧ ಕೋಟಿ ಹೆಚ್ಚು ಮೌಲ್ಯದ ಕೊಕೇನ್‌ನ್ನು ನಗರದ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.  
 
ಖಚಿತ ಮಾಹಿತಿ ಮೇರೆಗೆ ರೇಸ್ ಕೋರ್ಸ್ ರಸ್ತೆಯಲ್ಲಿ ಉಮೇಶ್  ಮತ್ತು ಮೊಹನ್ ಎಂಬ ಆರೋಪಿಗಳನ್ನು  ವಶಕ್ಕೆ ತೆಗೆದುಕೊಂಡರು.  ಇಬ್ಬರು ಆರೋಪಿಗಳು ಕೇರಳದ ಮೂಲದವರೆಂದು ತಿಳಿದು ಬಂದಿದೆ.   

2 ಮೊಬೈಲ್, 1 ಕೆ.ಜಿ. ಕೊಕೇನ್ ಅರ್ದಕೆ.ಜಿ. ಗಾಂಜಾ, ಒಂದು ಕಾರನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಅಲೋಕುಮಾರ್ ಹೇಳಿದ್ದಾರೆ.  


Share: