ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕುಂಜತ್ತೂರು: ಕ್ವಾರ್ಟರ್ಸ್ ನ ಕೊಳಕು ನೀರು ರಾಷ್ಟ್ರೀಯ ಹೆದ್ದಾರಿಗೆ: ಮೌನವನ್ನು ಪಾಲಿಸುತ್ತಿರುವ ಅಧಿಕಾರಿಗಳು

ಕುಂಜತ್ತೂರು: ಕ್ವಾರ್ಟರ್ಸ್ ನ ಕೊಳಕು ನೀರು ರಾಷ್ಟ್ರೀಯ ಹೆದ್ದಾರಿಗೆ: ಮೌನವನ್ನು ಪಾಲಿಸುತ್ತಿರುವ ಅಧಿಕಾರಿಗಳು

Fri, 20 Nov 2009 03:28:00  Office Staff   S.O. News Service
ಕುಂಜತ್ತೂರು, ನವೆಂಬರ್ 19: ಕ್ವಾರ್ಟರ್ಸ್ ನ ಕೊಳಕು ನೀರನ್ನು ರಾಷ್ಟ್ರೀಯ ಹೆದ್ದಾರಿಗೆ ಬಿಟ್ಟು ತೂಮಿನಾಡು ರಾಷ್ಟ್ರೀಯ ಹೆದ್ದಾರಿಯ ಬಸ್ ನಿಲ್ದಾನದಲ್ಲಿ ಚರಂಡಿಯಲ್ಲಿ ಕೊಳಕು ನೀರು ನಿಂತು ದುರ್ನಾತದಿಂದ ಜನರು ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ಪರಿಸ್ಥಿತಿ ಬಂದೊದಗಿದರೂ ಸಂಭಂಧ ಪಟ್ಟ ಅಧಿಕಾರಿಗಳು ಮೌನವನ್ನು ಪಾಲಿಸುತ್ತಿರುವುದು ಈ ಪ್ರದೇಶದ ನಾಗರೀಕರಲ್ಲಿ ಅಧಿಕಾರಿಗಳು ಕ್ವಾರ್ಟರ್ಸ್ ಮಾಲಿಕನಿಂದ ಲಂಚವನ್ನು ಸ್ವೀಕರಿಸುತ್ತಾರೆ ಎಂಬ ಅನುಮಾನಗಳನ್ನು ಪುಷ್ಟೀಕರಿಸುತ್ತದೆ ಎಂದು ನಾಗರೀಕರು ಆರೋಪಿಸಿದ್ದಾರೆ.
19-bkl2.jpg
ರಾಷ್ಟ್ರೀಯ ಹೆದ್ದಾರಿಯ ಬದಿಗೆ ಖಾಸಗಿ ವ್ಯಕ್ತಿಯೊಬ್ಬ ತನ್ನ ಕ್ವಾರ್ಟರ್ಸ್ ನಿಂದ ಹರಿದು ಹೋಗುವ ಕೊಳಕು ನೀರನ್ನು ರಸ್ತೆ ಬದಿಯಲ್ಲಿ ಸಾರ್ವಜನಿಕರ ಕಣ್ಣುಮುಚ್ಚಲು ತುಂಡು ಕಲ್ಲುಗಳನ್ನು ತಂದು ಚರಂಡಿಯಂತೆ ಮಾಡಿ ಅದಕ್ಕೆ ಕೊಳಕು ನೀರನ್ನು ಬಿಡುತಿದ್ದಾನೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇವನ ಈ ಅಕ್ರಮ ಚರಂಡಿ ನಿರ್ಮಾಣದ ಬಗ್ಗೆ ಪಂಚಾಯತಿಗೂ ಅದೇ ರೀತಿ ಸಂಭಂಧ ಪಟ್ಟ ಅಧಿಕಾರಿಗಳೀಗೂ ಯಾವುದೇ ದೂರುಗಳನ್ನು ನೀಡಿದರೂ ಯಾರೂ ಇತ್ತ ಕಡೆ ಗಮನಿಸುವುದಿಲ್ಲವೆಂಬುದು ಸಾರ್ವಜನಿಕರ ಆರೋಪ. ವಿಧ್ಯಾರ್ಥಿಗಳು ಪ್ರಯಾಣಿಕರು ಅದೇ ರಿತಿ ರಿಕ್ಷಾ ಚಾಲಕರು ತಮ್ಮ ಆಟೋ ರಿಕ್ಷಾಗಳನ್ನು ನಿಲ್ಲಿಸುವ ತೂಮಿನಾಡು ಜಂಕ್ಷನ್ ಗೆ ಕೊಳಕು ನೀರನ್ನು ಬಿಡುತ್ತಿರುವ ಕ್ವಾರ್ಟರ್ಸ್ ಮಾಲೀಕನ ವಿರುದ್ದ ಸಂಭಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಇಲ್ಲವಾದರೆ ಈ ಪ್ರದೇಶದ ನಾಗರೀಕರು ಆರೋಗ್ಯ ಇಲಾಖೆ ಹಾಗು ಪಂಚಾಯತಿನ ವಿರುದ್ದ ಧರಣಿ ಸತ್ಯಾಗ್ರಹಕ್ಕೆ ಮುಂದಾಗುವುದಾಗಿ ಕೇಳಿ ಬರುತ್ತಿದೆ. 

ಚಿತ್ರ, ವರದಿ:  ರಹಿಮಾನ್ ಉದ್ಯಾವರ



Share: