ಭಟ್ಕಳ, ಜನವರಿ 21: ಇಲ್ಲಿನ ಖಝರ್ ಜಾಮಿಆ ಮಸ್ಜಿದ್ ಮತ್ತು ಮೆರಾಅಜುಲ್ ಹುದಾ ಯುತ್ ಅಸೋಸಿಯೇಶನ್ ಸಂಯುಕ್ತಶ್ರಾಯದಲ್ಲಿ ನಗರದ ಸರ್ಪನಕಟ್ಟ ಜಾಮಿಆ ಮಸ್ಜಿದ್ ಸಮೀಪ ಜನವರಿ 23 ಹಾಗೂ 24 ರಂದು ಸಂಜೆ 6.30 ಕ್ಕೆ ಮಜ್ಲಿಸೆ ಬುರ್ದಾ ಸಮಾರಂಭವನ್ನು ಅಯೋಜಿಸಲಾಗಿದ್ದು ಮುಖ್ಯ ಅತಿಥಿಗಳಾಗಿ ತಾಜುಲ್ ಉಲೂಮಾ ಸೈಯ್ಯದ್ ಅಬ್ದುಲ್ ರಹ್ಮಾನ್ ಬುಖಾರಿ ಉಲ್ಲಾಳ ತಂಗಳ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಮುಖ್ಯ ಪ್ರವಚನಕಾರರಾಗಿ ಎಮ್.ಪಿ.ಅಬ್ದುಲ್ಲಾ ಝೈನಿ ಮಂಗಳೂರು ಆಗಮಿಸಲಿದ್ದು ಕೆ.ಎಸ್.ಆಟೋ ಕೋಯಾ ತಂಗಳ್ ಕಂಬಳ ಬುರ್ದಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಸ್ಲಿಮ್ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಪ್ರಕಟಣೆಯಲ್ಲಿ ಮನವಿಯನ್ನು ಮಾಡಲಾಗಿದೆ.