ರಾಮನಗರ ಏ.೧೯ ಕರ್ನಾಟಕ ವಾರ್ತೆ:ತೋಟಗಾರಿಕೆ ಇಲಾಖೆ, ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮಾಗಡಿ ತಾಲ್ಲೂಕಿನ ತೋಟಗಾರಿಕಾ ಕ್ಷೇತ್ರಗಳ ೨೦೧೦ನೇಸಾಲಿನ ಪೂರ್ಣ ಅವಧಿಯ (ದಿನಾಂಕ:೦೧-೦೧-೨೦೧೦ ರಿಂದ ೩೦-೦೯-೨೦೧೦ರ ವರೆಗೆ) ಮಾವು ಫಸಲುಗಳ ವಿಲೇವಾರಿಗೆ ಟೆಂಡರ್ ಪ್ರಕಟಣೆಯನ್ನು ಹೊರಡಿಸಲಾಗಿದೆ. ಟೆಂಡರ್ ಪ್ರಕಿಯೆಯನ್ನು ದಿನಾಂಕ:೨೬-೪-೨೦೧೦ನೇ ಸೋಮವಾರದಂದು ಮದ್ಯಾಹ್ನ ೨-೩೦ಘಂಟೆಯೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ರಾಮನಗರರವರ ಕಛೇರಿಯಲ್ಲಿ ನಡೆಸಲಾಗುವುದು. ಆಸಕ್ತಿಯುಳ್ಳ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಸದರಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
ಬಗಿನಗೆರೆ ತೋಟಗಾರಿಕೆ ಕ್ಷೇತ್ರ ಮಾಗಡಿ ತಾಲ್ಲೂಕು ಮಾವು ಗಿಡ ೧೭೫೦ ಫಸಲನ್ನು ಕೊಳ್ಳುವ ಕೊನೆಯ ದಿನಾಂಕ:೩೦-೯-೨೦೧೦ ಠೇವಣಿ ಮೊತ್ತ ರೂ.೫೦೦೦-೦೦ ಟೆಂಡರು ನಡೆಸುವ ವೇಳೆ ಮಧ್ಯಾಹ್ನ ೩-೦೦ ಗಂಟೆಗೆ, ಹಾರೋಹಳ್ಳಿ ತೋಟಗಾರಿಕೆ ಕ್ಷೇತ್ರ ಮಾಗಡಿ ತಾಲ್ಲೂಕು ಇಲ್ಲಿ ಮಾವು ಗಿಡ ೩೨೦ ಫಸಲನ್ನು ಕೊಳ್ಳುವ ಕೊನೆಯ ದಿನಾಂಕ: ೩೦-೯-೨೦೧೦ ಠೇವಣಿ ಮೊತ್ತ ರೂ.೨೦೦೦-೦೦ ಟೆಂಡರು ನಡೆಸುವ ವೇಳೆ ಮಧ್ಯಾಹ್ನ ೩-೩೦ ಗಂಟೆಗೆ ಟೆಂಡರ್ ಫಾರಂಗಳನ್ನು ಪ್ರತಿ ಫಸಲಿಗೆ ರೂ.೨೫-೦೦ ಪಾವತಿ ಮಾಡಿ ಈ ಕಛೇರಿ ಅಥವಾ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಪಡೆಯಬಹುದು. ಟೆಂಡರ್‌ದಾರರು ಫಸಲಿಗೆ ನಿಗದಿಪಡಿಸಿದ ಠೇವಣಿ ಮೊತ್ತ ಮತ್ತು ಫಸಲಿಗೆ ತಾವು ನಮೂದಿಸುವ ಟೆಂಡರ್ ಮೊತ್ತದ ಶೇಕಡ ೫೦ ಭಾಗದ ಮೊತ್ತವನ್ನು ಪ್ರತ್ಯೇಕವಾಗಿ ಅಡ್ಡಗೆರೆ ಎಳೆದ ಡಿಮಾಂಡ್ ಡ್ರಾಪ್ಟ್ ರೂಪದಲ್ಲಿ ಕೆ.ಎಸ್.ಹೆಚ್.ಡಿ.ಎ. ಬೆಂಗಳೂರು ರವರ ಹೆಸರಿನಲ್ಲಿ ಪಡೆದು ಟೆಂಡರ್ ಜೊತೆ ಕಡ್ಡಾಯವಾಗಿ ಲಗತ್ತಿಸಬೇಕು. ಟೆಂಡರ್ ಫಾರಂನಲ್ಲಿ ಟೆಂಡರ್‌ದಾರರು ತಾವು ದಾಖಲಿಸುವ ಮೊತ್ತವನ್ನು ಕಡ್ಡಾಯವಾಗಿ ನಮೂದಿಸಿ ತಮ್ಮ ಹೆಸರು ಮತ್ತು ವಿಳಾಸವನ್ನು ಭರ್ತಿ ಮಾಡಿ ಸಹಿ ಮಾಡಿರಬೇಕು. ಟೆಂಡರ್‌ದಾರರು ಭರ್ತಿ ಮಾಡಿದ ಮೊಹರಾದ ಟೆಂಡರ್‌ಫಾರಂಗಳನ್ನು ನಿಗದಿಪಡಿಸಿದ ದಿನಾಂಕ ಮತ್ತು ವೇಳೆಗೆ ಅಥವಾ ಅದಕ್ಕೂ ಮೊದಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ರಾಜ್ಯವಲಯ)ರಾಮನಗರರವರ ಕಛೇರಿಯಲ್ಲೇ ಸಲ್ಲಿಸಬೇಕು. ಪ್ರತೀ ಫಸಲಿಗೂ ಪ್ರತ್ಯೇಕ ಟೆಂಡರನ್ನು ಸಲ್ಲಿಸಬೇಕು.
ತೋಟಗಾರಿಕೆ ಕ್ಷೇತ್ರಗಳ ಫಸಲನ್ನು ಟೆಂಡರ್ ಅನುಮೋದನೆಯಾದ ದಿನಾಂಕದಿಂದ ೧೦ ದಿನಗಳೊಳಗಾಗಿ ಪೂರ್ಣ ಮೊಬಲಗನ್ನು ಪಾವತಿ ಮಾಡಿ ಫಸಲನ್ನು ರೂಢಿಸಿಕೊಳ್ಳಬೇಕು. ಟೆಂಡರ್ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ತೋಟಗಾರಿಕೆ ನಿರ್ದೇಶಕರು ಪಡೆದಿರುತ್ತಾರೆ. ಇಲಾಖಾ ಅಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಪರಿಷ್ಕೃತ ನಿಯಮಾವಳಿಗಳ ವಿವರಗಳನ್ನು ನಿಬಂದನೆ ಮತ್ತು ಷರತ್ತುಗಳನ್ನು ಈ ಕಛೇರಿಯಲ್ಲಿ ಅಥವಾ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದು ಎಂದು ರಾಮನಗರ ಜಿಲ್ಲೆಯ ರಾಜ್ಯವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಲಿಗೆ ತರಬೇತಿ ಕೇಂದ್ರಕ್ಕೆ ಪ್ರವೇಶ ಮಾಡಿಕೊಳ್ಳಲು ಅರ್ಜಿ ಆಹ್ವಾನ
ರಾಮನಗರ ಏ.೧೯ ಕರ್ನಾಟಕ ವಾರ್ತೆ:
೨೦೦೯-೧೦ನೇ ಸಾಲಿಗೆ ರಾಮನಗರ ಟೌನಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಹೊಲಿಗೆ ತರಬೇತಿ ಕೇಂದ್ರಕ್ಕೆ ಪ್ರವೇಶ ಮಾಡಿಕೊಳ್ಳಲು ಅರ್ಹ ಹೆಣ್ಣು ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:೫-೫-೨೦೧೦ರ ಸಂಜೆ ೫-೦೦ಗಂಟೆಯ ಒಳಗಾಗಿ ಈ ಕಛೇರಿಗಾಗಲೀ ಅಥವಾ ಹೊಲಿಗೆ ತರಬೇತಿ ಕೇಂದ್ರ, ರಾಯರದೊಡ್ಡಿ ರಾಮನಗರ ಇಲ್ಲಿಗೆ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ತಾಲ್ಲೂಕು ಪಂಚಾಯಿತಿ ಕಛೇರಿ, ನಗರಸಭೆ ಸಂಕೀರ್ಣ, ರಾಮನಗರ ಅಥವಾ ಹೊಲಿಗೆ ತರಬೇತಿ ಕೇಂದ್ರ, ರಾಯರದೊಡ್ಡಿ, ರಾಮನಗರ ಇಲ್ಲಿಂದ ಪಡೆಯ ತಕ್ಕದ್ದು, ಮಹಿಳಾ ಹೊಲಿಗೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗೆ ಮಾಹೆಯಾನ ರೂ.೩೦೦-೦೦ ರಂತೆ ತರಬೇತಿ ಭತ್ಯೆ ನೀಡಲಾಗುವುದು. ಪ್ರವರ್ಗ-೧ ಮತ್ತು ಪ.ಜಾತಿ ಮತ್ತು ಪ.ವರ್ಗದವರನ್ನು ಹೊರತುಪಡಿಸಿ ಇತರೆ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ರೂ. ೧೫೦೦೦-೦೦ ಗಳ ವಾರ್ಷಿಕ ಆದಾಯ ಮಿತಿಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ತರಬೇತಿಗೆ ಅರ್ಜಿ ಸಲ್ಲಿಸಲು ೭ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಯು ಪ್ರಕಟಣೆ ಪ್ರಕಟಿಸಿದ ದಿನಾಂಕ ೧೮ ವರ್ಷ ತುಂಬಿರಬೇಕು. ತಹಶೀಲ್ದಾರ್ ರವರಿಂದ ಪಡೆದ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಅರ್ಜಿಯೊಂದಿಗೆ ಲಗತ್ತಿಸಿರಬೇಕು. ವಿಧವೆಯರಿಗೆ ಮೊದಲನೇ ಆದ್ಯತೆ ನೀಡಲಾಗುವುದು. ಹೆಚ್ಚಿನ ವಿವರಗಳನ್ನು ರಾಮನಗರದ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪಡೆಯಬಹುದಾಗಿದೆ.