ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಪಕ್ಷಾಂತರಗೊಂಡ ಬಳಿಕ ಬಿ.ಆರ್. ಗುರುದೇವ್ ಮಾಡಿದ್ದಾದರೂ ಏನು - ಎಚ್.ಎಂ. ವಿಶ್ವನಾಥ್ ಪ್ರಶ್ನೆ

ಸಕಲೇಶಪುರ: ಪಕ್ಷಾಂತರಗೊಂಡ ಬಳಿಕ ಬಿ.ಆರ್. ಗುರುದೇವ್ ಮಾಡಿದ್ದಾದರೂ ಏನು - ಎಚ್.ಎಂ. ವಿಶ್ವನಾಥ್ ಪ್ರಶ್ನೆ

Tue, 26 Jan 2010 17:08:00  Office Staff   S.O. News Service
ಸಕಲೇಶಪುರ, ಜನವರಿ 26: ಕಾಂಗ್ರಸ್‌ನಿಂದ ಜೆಡಿ‌ಎಸ್ ಅಲ್ಲಿಂದ ಬಿಜೆಪಿಗೆ ಹೋಗಿ ಬಿ.ಅರ್.ಗುರುದೇವ್ ಈ ಕ್ಷೇತ್ರಕ್ಕೆ ಮಾಡಿದ್ದದರು ಏನೂ? ನನ್ನ ಅವದಿಯಲ್ಲಿ ಮಂಜುರಾದ ಅನುದಾನವನ್ನು  ಎಂ.ಎಲ್.ಸಿ. ಅವದಿಯಲ್ಲಿ  ಶ್ರಮವಹಿಸಿ  ಪೂರ್ಣಗೊಳಿಸಿದ್ದರೆ ಅದೊಂದು  ಪುಣ್ಯದ  ಕೆಳಸವಾಗುತಿತ್ತು ಎಂದು  ಮಾಜಿ  ಶಾಸಕ  ಎಚ್. ಎಂ  ವಿಶ್ವನಾಥ್ ವ್ಯೆಂಗ್ಯವಾಗಿ ಹೇಳಿದರು. 
ಸೋಮವಾರ  ಸುದ್ಧಿಗಾರರೊಂದಿಗೆ ಮಾತನಾಡಿದ  ಅವರು ಈ  ಕ್ಷೇತ್ರಕ್ಕೆ  ಯಾವುದೆ ಅನುದಾನ ದೊರಕದಂತೆ ಗುರುದೇವ್  ತಡೆದರು  ಎಂದು  ಅರೋಪಿಸಿದರು.  ನನ್ನ ವಿರುದ್ದ ಗುರುದೇವ್  ಸೇರಿದಂತೆ ಅನೇಕರು  ಪಿತೂರಿನಡೆಸಿದರು ಆದರು  ಸಹ  ನಾನು  ೨೨ಸಾವಿರ  ಮತಗಳ  ಅಂತರದಿಂದ  ಗೆದ್ದು ಶಾಸಕನಾದೆ  ನಂತರ  ನಡೆದ  ತಾ. ಪಂ.,  ಜಿ. ಪಂ. ಹಾಗೂ ಪರಸಭೆಯಲ್ಲಿ ಜೆಡಿ‌ಎಸ್‌ಗೆ  ಜನ  ಗೆಲ್ಲಿಸಿ  ನನಗೆ  ಶಕ್ತಿ ನೀಡಿದರು  ಗುರುದೇವ್  ಹೇಳುವಂತೆ  ನಾನು  ಯಾರನ್ನು  ಕಿರುಕುಳ ನೀಡಿಲ್ಲ  ಪಕ್ಷದಲ್ಲಿ  ಕೆಲಸ  ಮಾಡದೆ  ದುರ್ಬಲಗೊಂಡು ಕೆಲವರು  ಹೊರಹೋಗಿದ್ದಾರೆ  ಎಂದರು. ಗರುದೇವ್  ಸ್ವಾರ್ಥ  ರಾಜಕಾರಣಿ ತನಗಾಗಿ  ಯಾರನ್ನು ಬೇಕದರು ಬಲಿ ನೀಡಬಲ್ಲರು  ಎನ್ನುತ್ತಾ  ಬಿ.ಜೆ.ಪಿ.  ಸ್ನೇಹಿತರು  ಖಾಲಿ ಹೊಟ್ಟೆಯಲ್ಲಿ  ದುಡಿದು  ಪಕ್ಷ ಕಟ್ಟಿದ್ದೀರಿ ಗುರುದೇವ್  ಅಂತವರಿಗೆ  ಅಧಿಕಾರ  ನೀಡಬೇಡಿ  ಇವರು  ಮನೆಯನ್ನು  ದೊಚುವ  ಮನಸ್ಸಿನವರು  ಇವರನ್ನು  ಅಧಿಕಾರದಿಂದ  ದೂರವಿಡಿ  ಎಂದರು.

ತಾಲೂಕಿದ್ಯಾಂತ  ಭ್ರಷ್ಟಾಚಾರ ಮೀತಿಮೀರಿದೆ  ಎಲ್ಲಾ  ಇಲಾಖೆಗಳು  ಜನರನ್ನು  ಸುಲಿಗೆ  ಮಾಡುತ್ತಿವೆ ಈ  ವಿಧಾನಸಭ  ಕ್ಷೇತ್ರವೂ  ೨೦ ವರ್ಷ ಹಿಂದಕ್ಕೆ  ಹೋಗಿದೆ  ನ್ಯಾಯಲಯದ  ಕಟ್ಟಡ  ಕಾಮಗಾರಿ   ಸ್ಥಗಿತಗೊಂಡಿದೆ  ಬೇಳೆಗಾರರ  ಸಮಸ್ಯೆ  ಸರಕಾರ  ನಿರ್ಲಕ್ಷಿಸಿತ್ತದೆ ಕಾಡಾನೆ  ಸಮಸ್ಯೆಯಿಂದ ಜನ ಜೀವ ಭಯದಲ್ಲಿದ್ದಾರೆ ಅನೇಕ  ರಸ್ತೆ  ಕಾಮಗಾರಿ  ಟೆಂಡರ್  ರದ್ದಾಗಿದೆ ಹೀಗೆ  ಹತ್ತು ಹಲವು  ಸಮಸ್ಯೆ  ಜನರನ್ನು  ಕಾಡುತ್ತೀವೆ  ಅಡಳಿತ  ಪಕ್ಷದ  ಮುಖಂಡ  ಎನ್ನುತ್ತಾ ಎರಡು ವರ್ಷ ಮುಖ್ಯಮಂತ್ರಿಯ ಹಿಂದೆ  ಸುತ್ತಿದ  ಗುರುದೇವ್  ಈ  ಎಲ್ಲಾ  ಸಮಸ್ಯೆಗಳ  ಪರಿಹಾರಕ್ಕೆ  ಮಾಡಿದ್ದಾದರು  ಏನೆಂದು  ಪ್ರೆಶ್ನಿಸಿದರು  ಮುಂದಿನ  ೧೫  ದಿನಗಳ ನಂತರ  ಜನರ  ಸಮಸ್ಯೆ  ಬಗೆ  ಹರಿಸಲು ಬೀದಿಗಿಳಿದು  ಹೋರಾಟ  ನಡೆಸುವುದಾಗಿ  ತಿಳಿಸಿದರು. ಸುದ್ಧಿಗೋಸ್ಠಿಯಲ್ಲಿ  ಇಬ್ರಾಹಿಂ  ಯಾದ್ಗಾರ್,  ಜಾಕಿರ್ ಮತ್ತು ಕಾಡಪ್ಪ ಇದ್ದರು,


Share: