ಭಟ್ಕಳ, ಡಿಸೆಂಬರ್ 16: ರಾಜ್ಯ ಪ್ರಶಸ್ತಿ ವಿಜೇತ ಹೆಬಳೆ ಗ್ರಾಮಪಂಚಾಯತ ಸದಸ್ಯ ನಿಸಾರ್ ಅಹ್ಮದ್ರನ್ನು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಶಾಲು ಹೊದಿಸಿ ಸನ್ಮಾನಿಸಿದರು. ನಿಸಾರರ ಸಮಾಜ ಸೇವೆ ಇನ್ನುಳಿದವರಿಗೆ ಸ್ಪೂರ್ತಿ ಎಂದು ಅವರು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಜೆ.ಡಿ.ನಾಯ್ಕ, ಜಿಲ್ಲಾಪಂಚಾಯತ ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ಸದಸ್ಯರಾದ ದಾಮೋದರ ಗರ್ಡೀಕರ, ಮಂಕಾಳು ವೈದ್ಯ, ಭೀಮಣ್ಣ ನಾಯ್ಕ, ಭಟ್ಕಳ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಮ್ಜಿ, ವಿಧಾನಪರಿಷತ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್, ಬದ್ರಲ್ಲಾ ಹಸನ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ