ಭಟ್ಕಳ, ಜನವರಿ 25:ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಶಿಲುಭೆಯನ್ನು ದ್ವಂಸಗೈದು ಬಳಿಕ ಅದನ್ನು ಶ್ರೀರಾಮ ಸೇನೆಯೆ ಮಾಡಿದೆ ಎಂದು ಒಪ್ಪಿಕೊಂಡ ಶ್ರೀರಾಮ ಸೇನೆಯ ಶಂಕರ್ ನಾಯ್ಕ್ ಸೇರಿದಂತೆ ಇಲ್ಲಿಯವರೆ ಒಟ್ಟು ಎಂಟು ಜನ ರಾಮಸೇನ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದಾರೆ. ಇದರಲ್ಲಿ ಕೋಮು ಪ್ರಚೋದನೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಕರಣವು ಸೇರಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಭಾರತೀಯ ಹಿಂದುಗಳ ಮೇಲೆ ಆಗುತ್ತಿರುವಂತಹ ಹಲ್ಲೆಯನ್ನು ಖಂಡಿಸಿ ಇತ್ತಿಚೆಗೆ ಭಟ್ಕಳದ ಶ್ರೀರಾಮ ಸೇನೆಯು ಇಲ್ಲಿನ ಸಹಾಯಕ ಕಮಿಷನರ್ ಮೂಲಕ ರಾಷ್ಟ್ರಪತಿಗಳಿ ಮನವಿಯೊಂದನ್ನು ಸಲ್ಲಿಸಿದ್ದು ಅದರಲ್ಲಿ ಒಂದು ವೇಳೆ ಆಸ್ಟ್ರೇಲಿಯಾದಲ್ಲಿ ಹಿಂದುಗಳ ಮೇಲೆ ಹಲ್ಲೆಯು ನಿಲ್ಲದೆ ಹೋದರೆ ಭಟ್ಕಳದಲ್ಲಿನ ಚರ್ಚುಗಳ ಮೇಲೆ ದಾಳಿ ಮಾಡಿ ಇಲ್ಲಿಗೆ ಬುರುವ ಆಸ್ಟ್ರೇಲಿಯನ್ನರ ಮೇಲೆ ಹಲ್ಲೆ ಮಾಡಲಾಗುವುದು ಎಂದು ತಿಳಿಸಿದ್ದರು. ಈ ಹೇಳಿಕೆಯು ಒಂದು ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದ್ದು ಇದರಿಂದ ಕೋಮುಸೌಹಾರ್ಧತೆ ಹಾಳಾಗುವುದೆಂದು
ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವಂತಹ ಇಂತಹ ಹೇಳಕೆಯ ವಿರುದ್ದ ಮನವಿ ಪತ್ರದಲ್ಲಿ ಹೆಸರನ್ನು ನಮೂದಿಸಿದ್ದ ಎಲ್ಲಾ ಮೂವತ್ತೊಂದು ಜನರ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ರಾಮಸೇನೆಯ ಬೇಟೆಯಲ್ಲಿ ಪೋಲಿಸರು: ಭಟ್ಕಳದಲ್ಲಿ ಕೋಮು ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾದ ಎಲ್ಲ ೩೧ ಜನ ಶ್ರೀರಾಮ ಸೇನಾ ಕಾರ್ಯಕರ್ತರ ಬೇಟೆಯಲ್ಲಿ ತೊಡಗಿರುವ ಪೋಲಿಸರು ಅವರನ್ನು ಹಿಡಿಯಲು ಹರಸಾಹಸ ನಡೆಸಿದ್ದಾರೆ. ಪೋಲಿಸರು ತಮ್ಮ ಬೇಟೆಯಲ್ಲಿದ್ದಾರೆ ಎಂದು ವಿಷಯ ತಿಳಿಯುತ್ತಿದ್ದಂತೆ ಬಹಳಷ್ಟು ಮಂದಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಎಲ್ಲಿಯೆ ಅಡಗಿ ಕುಳಿತಿರಲಿ ಅವರನ್ನು ಹಿಡಿದೆ ಬಿಡುವುದಿಲ್ಲ ಎಂಬ ಛಲವನ್ನು ಪೋಲಿಸರು ತೊಟ್ಟಂತಿದೆ. ಅದಕ್ಕಾಗಿ ಅವರು ಸರ್ವಪ್ರಯತ್ನವನ್ನು ಮಾಡುತ್ತಿದ್ದಾರೆ.