ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸರ್ಕಾರಿ ಕಾಲೇಜುಗಳಲ್ಲಿನ ವಿವಿಧ ಹುದ್ದೆಗಳಿಗೆ ಸಂದರ್ಶನ

ಸರ್ಕಾರಿ ಕಾಲೇಜುಗಳಲ್ಲಿನ ವಿವಿಧ ಹುದ್ದೆಗಳಿಗೆ ಸಂದರ್ಶನ

Fri, 30 Apr 2010 13:58:00  Office Staff   S.O. News Service
ಸರ್ಕಾರಿ ಕಾಲೇಜುಗಳಲ್ಲಿನ ವಿವಿಧ ಹುದ್ದೆಗಳಿಗೆ ಸಂದರ್ಶನ 

ಬೆಂಗಳೂರು, ಏಪ್ರಿಲ್ ೩೦ : (ಕರ್ನಾಟಕ ವಾರ್ತೆ) -  ಕರ್ನಾಟಕ ಲೋಕಸೇವಾ ಆಯೋಗವು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆಯೋಗದ ಕೇಂದ್ರ ಕಚೇರಿ, ಬೆಂಗಳೂರು ಇಲ್ಲಿ ಆಯಾ ಹುದ್ದೆಗಳ ಮುಂದೆ ನಮೂದಿಸಿರುವ ದಿನಾಂಕಗಳಂದು ಸಂದರ್ಶನವನ್ನು ನಡೆಸಲಿದೆ.

ಸಹಾಯಕ ಪ್ರಾಧ್ಯಾಪಕರು (ಮೆಕ್ಯಾನಿಲ್ ಇಂಜಿನಿಯರಿಂಗ್) - ೨೮ ಹುದ್ದೆಗಳಿಗೆ  - ಮೇ ೩ ರಂದು ಬೆಳಿಗ್ಗೆ ೯.೩೦ ಗಂಟೆ ಮತ್ತು ಮಧ್ಯಾಹ್ನ ೨.೦೦ ಗಂಟೆಗೆ ಹಾಗೂ ಮೇ ೪ ರಂದು ಬೆಳಿಗ್ಗೆ ೯.೩೦ ಗಂಟೆಗೆ ಸಂದರ್ಶನ ನಡೆಯಲಿದೆ.

ಸಹಾಯಕ ಪ್ರಾಧ್ಯಾಪಕರು (ಸಿವಿಲ್ ಇಂಜಿನಿಯರಿಂಗ್) - ೨೯ ಹುದ್ದೆಗಳಿಗೆ - ಮೇ ೪ ರಂದು ಬೆಳಿಗ್ಗೆ ೯.೩೦ ಗಂಟೆ ಮತ್ತು ಮಧ್ಯಾಹ್ನ ೨.೦೦ ಗಂಟೆಗೆ,  ಸಹಾಯಕ ಪ್ರಾಧ್ಯಾಪಕರು (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ಸ್)-೩೦ ಹುದ್ದೆಗಳಿಗೆ ಮೇ ೫ ರಂದು ಬೆಳಿಗ್ಗೆ ೯.೩೦ ಗಂಟೆ ಹಾಗೂ ಮಧ್ಯಾಹ್ನ ೨.೦೦ ಗಂಟೆಗೆ ಸಂದರ್ಶನ ನಡೆಯಲಿದೆ. 

ಸಹಾಯಕ ಪ್ರಾಧ್ಯಾಪಕರು (ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್) - ೧೭ ಹುದ್ದೆಗಳಿಗೆ ಮೇ ೬ ರಂದು ಬೆಳಿಗ್ಗೆ ೯.೩೦ ಗಂಟೆ ಮತ್ತು ಮಧ್ಯಾಹ್ನ ೨.೦೦ ಗಂಟೆಗೆ ಸಂದರ್ಶನ ನಡೆಯಲಿದೆ.

ಔಷಧ ವಿಜ್ಞಾನ ಪ್ರಾಧ್ಯಾಪಕರು:

ಔಷಧ ನಿಯಂತ್ರಣ ಇಲಾಖೆಯ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿನ ವಿವಿಧ ವಿಷಯಗಳಲ್ಲಿ ಪ್ರಾಧ್ಯಾಪಕರ/ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಮೇ ೭ ರಂದು ಸಂದರ್ಶನ. ಪ್ರಾಧ್ಯಾಪಕರು (ಫಾರ್ಮಾಸ್ಯುಟಿಕಲ್ ಕೆಮಿಸ್ಟ್ರಿ) - ೧  ಹುದ್ದೆ, ಪ್ರಾಧ್ಯಾಪಕರು (ಫಾರ್ಮಾಸ್ಯುಟಿಕ್ಸ್) - ೧ ಹುದ್ದೆ, ಪ್ರಾಧ್ಯಾಪಕರು (ಫಾರ್ಮಾಕಾಲಜಿ) - ೧ ಹುದ್ದೆ, ಸಹಾಯಕ ಪ್ರಾಧ್ಯಾಪಕರು (ಫಾರ್ಮಾಸ್ಯುಟಿಕ್ಸ್) - ೨ ಹುದ್ದೆ ಮತ್ತು ಸಹಾಯಕ ಪ್ರಾಧ್ಯಾಪಕರು (ಫಾರ್ಮಾಕಾಗ್ನೋಸಿ) -೧ ಹುದ್ದೆಗಳಿಗೆ ಮೇ ೭ ರಂದು ಬೆಳಿಗ್ಗೆ ೯.೩೦ ಗಂಟೆಗೆ ಸಂದರ್ಶನ ನಡೆಯುವುದು.

ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾ ಪತ್ರಗಳನ್ನು ಈಗಾಗಲೇ ಕಳುಹಿಸಲಾಗಿದೆ.  ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ, ವಿವಿಧ ಮೀಸಲಾತಿಯಡಿ ಸಂದರ್ಶನಕ್ಕೆ ಅರ್ಹರಾಗಿರುವ ಕೊನೆಯ ಅಭ್ಯರ್ಥಿಯ ಶೇಕಡವಾರು ಅಂಕಗಳು, ಸಂದರ್ಶನದ ವೇಳೆ ಮತ್ತು ದಿನಾಂಕ ವಿವಿಧ ಕಾರಣಗಳಿಂದ ತಿರಸ್ಕೃತವಾಗಿರುವ ಅಭ್ಯರ್ಥಿಗಳ ವಿವರಗಳು ಇತ್ಯಾದಿ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್ “hಣಣಠಿ://ಞಠಿsಛಿ.ಞಚಿಡಿ.ಟಿiಛಿ.iಟಿ/ಊome Pಚಿge” ನ್ನು ನೋಡಬಹುದು.    ವಿವಿಧ ಮೀಸಲಾತಿಯಡಿ ಸಂದರ್ಶನಕ್ಕೆ ಅರ್ಹರಾಗಿರುವ ಕೊನೆಯ ಅಭ್ಯರ್ಥಿಯ ಶೇಕಡವಾರು ಅಂಕಗಳನ್ನು ಆಯೋಗದ ಕೇಂದ್ರ ಕಚೇರಿ ಮತ್ತು ಮೈಸೂರು/ಬೆಳಗಾಂ/ಗುಲ್ಬರ್ಗಾ/ಶಿವಮೊಗ್ಗ ಪ್ರಾಂತೀಯ ಕಚೇರಿಗಳ ಸೂಚನಾ ಫಲಕಗಳಲ್ಲಿ ನೋಡಬಹುದಾಗಿದೆ.  

ಸಂದರ್ಶನ ಪತ್ರ ಸ್ವೀಕೃತವಾಗದಿದ್ದಲ್ಲಿ ಸಂಬಂಧಿತ ದಾಖಲೆಗಳೊಂದಿಗೆ ಕೇಂದ್ರ ಕಚೇರಿಯನ್ನು ಸಂದರ್ಶನಕ್ಕೆ ನಿಗದಿಪಡಿಸಿರುವ ದಿನಾಂಕದೊಳಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.


Share: