ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೂಡಿಗೆರೆ: ಮಹಾರಾಷ್ಟಕ್ಕೆ ಸೇರಿದ ಕರ್ನಾಟಕದ ಹಾಸನ ಮತ್ತು ದ.ಕ.ಜಿಲ್ಲೆಗಳು..!

ಮೂಡಿಗೆರೆ: ಮಹಾರಾಷ್ಟಕ್ಕೆ ಸೇರಿದ ಕರ್ನಾಟಕದ ಹಾಸನ ಮತ್ತು ದ.ಕ.ಜಿಲ್ಲೆಗಳು..!

Wed, 16 Dec 2009 16:20:00  Office Staff   S.O. News Service
ಮೂಡಿಗೆರೆ.ಡಿ,16- ಇದೇನೆಂದು ಅಚ್ಚರಿಪಡಬೇಡಿ, ಮಹಾರಾಷ್ಟ್ರ ಏಕಿಕರಣಕ್ಕಾಗಿ ಮತ್ತು ಬೆಳಗಾಂ ಅನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಮಾತು ಕತೆಗಳು ಮತ್ತು ಪ್ರತಿಭಟನೆಗಳು ನಡೆಯುತ್ತಲೇ ಇವೆ. 

ಆದರೆ ಸದ್ದಿಲ್ಲದ ರೀತಿಯಲ್ಲಿ ಹಾಸನ ಜಿಲ್ಲೆ ಸೇರಿದಂತೆ ಅರಕಲಗೂಡು, ರಾಮನಾಥಪುರ, ಹೆಗ್ಗಡೆ, ದಕ್ಷಿಣ ಕನ್ನಡಜಲ್ಲೆ ಸೇರಿದಂತೆ ಶಿರಾಡಿ, ಕಡಬ, ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ, ಸೂಳ್ಯ ತಾಲ್ಲೂಕುಗಳು ಮಹಾರಾಷ್ಟ್ರಕ್ಕೆ ಸೇರ್‍ಪಡೆಯಾಗಿದ್ದಾದರೂ ಯಾವಾಗ ಎನ್ನುವುದೇ ಅಚ್ಚರಿಯ ಸಂಗತಿಯಾಗಿದೆ.
16-mdg1.jpg
-ಮಹಾರಾಷ್ಟಕ್ಕೆ ಸೇರಿದ ಕರ್ನಾಟಕದ ಹಾಸನ ಮತ್ತು ದ.ಕ.ಜಿಲ್ಲೆಗ ನಕ್ಷೆ.
 
ಬೇಲೂರಿನ ಚನ್ನಕೇಶವ ಟೆಂಪಲ್‌ನಲ್ಲಿ ಮಾರಾಟವಾಗುತ್ತಿರುವ ಇಂಡಿಯನ್ ಮ್ಯಾಫ್ ಜೋದ್‌ಪುರ್ ನಿಂದ ಪ್ರಕಟಿಸಿರುವ ಕರ್ನಾಟಕ ರೋಡ್ ಅಟ್ಲಾಸ್ ಮತ್ತು ದೂರದ ಗೈಡ್‌ನಲ್ಲಿರುವ 32 ನೇ ಪುಟದಲ್ಲಿರುವ ಕೊಡಗು ಜಿಲ್ಲೆಯಲ್ಲಿ 2 ಜಿಲ್ಲೆಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಿರುವುದು ಕಂಡುಬಂದಿದೆ.

ಕನ್ನಡಿಗರು ಬೆಳಾಗಾಂ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕೊಡಲು ಸುತಾರಾಂ ಒಪ್ಪದಿದ್ದರೂ ಈ ಮ್ಯಾಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಹಾಸನ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಿರುವುದು ಸೂಚನಿಯ ಸಂಗತಿಯಾಗಿದೆ. ಹೊರದೇಶ ಮತ್ತು ಹೊರರಾಜ್ಯಗಳಿಂದ  ಬರುವಂತಹ ಪ್ರವಾಸಿಗರಿಗೆ ಕರ್ನಾಟಕದ ಜಿಲ್ಲೆಗಳ ಪರಿಚಯವಾಗಲೆಂದು ತಿಳಿಸುವ ಮ್ಯಾಫ್‌ನಲ್ಲಿ ಈ ರೀತಿಯ ತಪ್ಪುಗಳು ಇದ್ದರೆ. ಬೇರೆ ರಾಜ್ಯದ ಮ್ಯಾಪ್ ಗಳ ಕತೆ ಏನಾಗಿರಬಾರದು, ಒಟ್ಟಿನಲ್ಲಿ ಈ ಮ್ಯಾಫ್ ಹಿಡಿದುಕೊಂಡು ಮಹಾರಾಷ್ಟ್ರದಲ್ಲಿ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹುಡುಕಬೇಕಾಗಿದೆ.


ವರದಿ- ಎಸ್.ಎನ್.ಮಂಜುನಾಥ್

ಮೂಡಿಗೆರೆ.


Share: