ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ನಗರದಲ್ಲಿ ನಾತ್ ಮತ್ತು ಗಜಲ್ ಸ್ಪರ್ಧೆ - ಮನಸೂರೆಗೊಂಡ ಚಿಣ್ಣರು

ಭಟ್ಕಳ: ನಗರದಲ್ಲಿ ನಾತ್ ಮತ್ತು ಗಜಲ್ ಸ್ಪರ್ಧೆ - ಮನಸೂರೆಗೊಂಡ ಚಿಣ್ಣರು

Tue, 10 Nov 2009 18:39:00  Office Staff   S.O. News Service
ಭಟ್ಕಳ, ನವೆಂಬರ್ 10 : ಚಿತ್ರಗೀತೆಗಳ ಭರಾಟೆಯ ಇಂದಿನ ದಿನಗಳಲ್ಲಿ ಭಾವಭರಿತ ನಾತ್ ಮತ್ತು ಗಜಲ್ ಯಾರಿಗೆ ಬೇಕಾಗಿದೆ? ಅವೆಲ್ಲಾ ಹಿಂದಿನ ಮಾತು ಆ ಕಾಲ ಹೋಯಿತು ಎಂದು ನಿರುತ್ಸಾಹ ಹೊಂದಿದ್ದವರಿಗೆ ಅಚ್ಚರಿಯಾಗುವಂತಹ ಸುದ್ದಿ ಭಟ್ಕಳದಿಂದ ವರದಿಯಾಗಿದೆ.

ನಗರದ ಜಾಮಿಯಾಬಾದ ಶಮ್ಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಆವರಣದಲ್ಲಿ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಾತ್ ಮತ್ತು ಗಜಲ್ ಗಾಯನ ಸ್ಪರ್ದೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮೆರೆದರು.

ಕಾರ್ಯಕ್ರಮ ಮೊಹಮ್ಮದ್ ಇಮ್ರಾನ್ ಅಕ್ಬರಾ ರವರ ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭವಾಯಿತು.  ಡಾ. ಮೊಹಮ್ಮದ್ ಹನೀಫ್ ಶಬಾಬ್ ಸ್ವಾಗತ ಕೋರಿದರು.  ಅಂಜುಮಾನ್ ಕಲೆ ಮತ್ತು ವಾಣಿಜ್ಯ ಕಾಲೇಜಿನ ಉರ್ದು ವಿಭಾಗದ ಮುಖ್ಯಸ್ಥರಾದ ಡಾ. ಶಾ ರಶದ್ ಉಸ್ಮಾನಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  ಮೌಲಾನಾ ಸೈಯದ್ ಖುತುಬ್ ನದ್ವಿ ಮತ್ತು ಅಬ್ರಾರುಲ್ ಹಖ್ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ನಿರೂಪಿಸಿದರು.  
8_shams_3.jpg
ವಿಜೇತ ಮಕ್ಕಳಿಗೆ ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧಾ ವಿಭಾಗಗಳಿದ್ದು ಪ್ರತ್ಯೇಕವಾಗಿ ಬಹುಮಾನಗಳನ್ನು ನೀಡಲಾಯಿತು.

ಅಂತಿಮವಾಗಿ ಶಮ್ಸ್ ಇಂಗ್ಲಿಷ್ ಹೈ ಸ್ಕೂಲ್ ಪ್ರಾಂಶುಪಾಲರಾದ ಜನಾಬ್ ಶಫಿ ಶೇಖ್ ರವರು ವಂದನಾರ್ಪಣೆ ಸಲ್ಲಿಸಿದರು.

ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಕ್ರಮವಾಗಿ 1500, 1000 ಹಾಗೂ 500 ರೂಪಾಯಿಗಳ ನಗದು ಬಹುಮಾನಗಳನ್ನು ಹಾಗೂ ಪ್ರಶಸ್ತಿಪ್ರತ್ರಗಳನ್ನು ನೀಡಲಾಯಿತು.
8_shams_2.jpg
ವಿಜೇತರ ವಿವರಗಳು ಈ ಕೆಳಗಿನಂತಿವೆ:



Winners in the Naat Recitation Competition 

Boys:

Boys:

1st        Mohammed Mutahhir H         6th Std. Govt HP Urdu School Makhdoom Colony 

2nd        Mohammed Arsalan              5th Std. Anjuman Azad Primary School

3rd        Sinan Ahmed Siddiqua           5th Std. Shams English Medium School

Girls:

1st        Khairunnisa Nasiha SA           7th Std. Anjuman Azad Primary School

2nd        Aysha Fida H Ruknuddin      5th Std. Islahul Banat Islamic School

3rd        Fthima Hira SH Barmavar      6th Std. Shams English Medium School



Winners of the Ghazal Recitation Competitions:

Boys

1st        Mohammed Rahid M Irshad   10th Std. Tauheed Public School, Shiroor

2nd        Mohammed Zishan SA Khan 10th Std. Iqra English Medium School Murdeshwar 

3rd        Mohammed Ashaas Armar     10th Std. Shams English Medium School

Girls:

1st        Ashfiya Farzeen Ruknuddin   9th Std. Naunihal Central School Bhatkal 

2nd        Noori Afsha Usmani Ibrahim 8th Std. Govt H Urdu School Jamia Jali

3rd        Fthima Zahra H Ruknuddin   8th Std. Anjuman Girls EHS Nawayat Colony 


Share: