ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಕಾರವಾರದ ಗುಡ್ಡಕುಸಿತ ಸಂತ್ರಸ್ತರ ನೆರವಿಗೆ ಧಾವಿಸಿದ ಅಂಜುಮಾನ್ ಹಾಮಿ ಎ ಮುಸ್ಲಿಮೀನ್ ಸಂಘಟನೆ

ಭಟ್ಕಳ: ಕಾರವಾರದ ಗುಡ್ಡಕುಸಿತ ಸಂತ್ರಸ್ತರ ನೆರವಿಗೆ ಧಾವಿಸಿದ ಅಂಜುಮಾನ್ ಹಾಮಿ ಎ ಮುಸ್ಲಿಮೀನ್ ಸಂಘಟನೆ

Sun, 11 Oct 2009 02:46:00  Office Staff   S.O. News Service
ಭಟ್ಕಳ, ಅಕ್ಟೋಬರ್ ೧೦: ಕಾರವಾರದದಲ್ಲಿ ಗುಡ್ಡ ಕುಸಿದು ಹಲವರ ಸಾವುನೋವು ಹಾಗೂ ಅಪಾರ ಆಸ್ತಿಪಾಸ್ತಿ ಕಳೆದುಕೊಂಡ ಸಂತ್ರಸ್ಥರಿಗೆ ನೆರವಾಗುವುಲ್ಲಿ ಇಲ್ಲಿನ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಸಂಸ್ಥೆಯ ಅಂಜುಮಾನ್ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಮಾಹಾವಿದ್ಯಾಲಯದ ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ ವಿಭಾಗದ ವಿದ್ಯಾರ್ಥಿಗಳು ಇಂದು ಜಾತ ಹಮ್ಮಿಕೊಳ್ಳುವುದರ ಮೂಲಕ ಸಂತ್ರಸ್ಥರೊಂದಿಗೆ ತಾವು ಇದ್ದೇವೆ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದರು. ಸಂತ್ರಸ್ಥರ ಪರಿಹಾರ ನಿಧಿಗಾಗಿ ಅಂಜುಮನ್ ಸಂಸ್ಥೆಯಿಂದ ನಡೆಸಲ್ಪಡುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಣವನ್ನು ಕ್ರೂಢಿಕರಿಸಿದಲ್ಲದೆ ನಗರದ ವಿವಿಧ ಅಂಗಡಿಗಳಲ್ಲಿ ಸಂತ್ರಸ್ಥರ ಪರಿಹಾರಕ್ಕಾಗಿ ದೇಣಿಗೆಯನ್ನು ಸಂಗ್ರಹಿಸಿದರು. 

ಇಂದು ಬೆಳಗ್ಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ತಮ್ಮ ಸಂಸ್ಥೆಯು ಸಂತ್ರಸ್ಥರ ಪರಿಹಾರ ನಿಧಿಗೆ ಕೈಲಾದ ಸಹಾಯವನ್ನು ಮಾಡುವುದು ಎಂದು ತಿಳಿಸಿದರು. ಜಾತದಲ್ಲಿ ಎನ್.ಎಸ್.ಎಸ್. ಅಧಿಕಾರಿ ಮಂಜುನಾಥ್ ಪ್ರಭು, ಎನ್.ಸಿ.ಸಿ. ಯ ಲೆಫ್ಟಿನೆಂಟ್ ಮಾರ್ಶಲ್ ಎಸ್.ಎ. ಇಂಡಿಕರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ಮೂರು ದಿನಗಳಲ್ಲಿ ಸಂಗ್ರಹವಾದ ಹಣವನ್ನು ಸಹಾಯಕ ಕಮಿಷನರ್ ಮೂಲಕ ಸರಕಾರದ ಸಂತ್ರಸ್ಥರ ಪರಿಹಾರ ನಿಧಿಗೆ ಕಳುಹಿಸುವುದಾಗಿ ಮಂಜುನಾಥ್ ಪ್ರಭು ಈ ಸಂದರ್ಭದಲ್ಲಿ ಪತ್ರಕರ್ತರಿಗೆ ತಿಳಿಸಿದರು.  


Share: