ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು: ಇಕ್ರಾ ಅರೆಬಿಕ್ ಸ್ಕೂಲ್ ಹೊಸ ಕಟ್ಟಡ ಉದ್ಘಾಟನೆ

ಮಂಗಳೂರು: ಇಕ್ರಾ ಅರೆಬಿಕ್ ಸ್ಕೂಲ್ ಹೊಸ ಕಟ್ಟಡ ಉದ್ಘಾಟನೆ

Tue, 03 Nov 2009 03:01:00  Office Staff   S.O. News Service

ಮಂಗಳೂರು, ನ.2 : ಕಳೆದ ಒಂದು ದಶಕದಿಂದ ಮಂಗಳೂರು ಮತ್ತು ಸುತ್ತಮುತ್ತ ಇಸ್ಲಾಮಿಕ್ ಶಿಕ್ಷಣವನ್ನು ನೀಡುತ್ತಿರುವ ಇಕ್ರಾ ಅರೆಬಿಕ್ ಶಾಲೆಯ ಕಟ್ಟಡವು ಮಂಗಳೂರಿನ ಕಲ್ಪನಾ ರೋಡ್, ವಾಸ್‌ಲೇನ್‌ನ

 3-bkl3.jpg

 

ಮೌಲನಾ ಸಯ್ಯದ್ ಅಬುಲ್ ಹಸನ್ ಅಲಿ ನದ್ವಿ ಎಜುಕೇಶನ್ ಫೌಂಡೇಶನ್ ವತಿಯಿಂದ ಕಾರ್ಯಾಚರಿಸಲಿರುವ ಈ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೌಲನಾ ಅಬುಲ್ ಬಾರಿ ನದ್ವಿ, ಮೌಲಾನಾ ರಿಯಾಝ್ ಉರ್ ರಹ್ಮಾನ್ ರಶಾದಿ, ತೋಕಾ ಅಹಮ್ಮದ್ ಮುಸ್ಲಿಯಾರ್, ಡಾ. ಹಬೀಬ್ ಉರ್ ರಹ್ಮಾನ್, ಜಿ.ಎ. ಬಾವ, ಯು.ಟಿ.ಖಾದರ್, ಮೌಲನಾ ಜಿಯಾ ನದ್ವಿ, ಮೌಲನಾ ಸಾಲಿಂ, ಹನೀಫ್ ಹಾಜಿ ಹಾಜರಿದ್ದರು. 

೩ನೆ ಅಡ್ಡರಸ್ತೆಗೆ ಸ್ಥಳಾಂತರಿಸಲ್ಪಟ್ಟಿದ್ದು, ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.

 3-bkl4.jpg

3-bkl5.jpg 

ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳಿಗಾಗಿ ಕುರ್‌ಆನ್ ಕಂಠಪಾಠ ಸ್ಪರ್ಧೆ ನಡೆಯಿತು. ವಿಜೇತರಾದ ಮುಹಮ್ಮದ್ ಖಮರ್ ಉಳ್ಳಾಲ್, ಸಮನ್ ಭಟ್ಕಳ್, ಇಮ್ತಿಯಾಝ್ ಉಪ್ಪಿನಂಗಡಿ ಅವರಿಗೆ ಬಹುಮಾನ ವಿತರಿಸಲಾಯಿತು. ಮುಹಮ್ಮದ್ ಖಮರ್ ಕಿರಾ‌ಅತ್ ಪಠಿಸಿದರು.  


Share: