ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೈಕಿಣಿಯಲ್ಲಿ ಇಬ್ಬರು ವಿಷ ಸೇವನೆ: ಓರ್ವನ ಸಾವು

ಕೈಕಿಣಿಯಲ್ಲಿ ಇಬ್ಬರು ವಿಷ ಸೇವನೆ: ಓರ್ವನ ಸಾವು

Tue, 31 Oct 2023 06:12:35  Office Staff   SO News

ಭಟ್ಕಳ:ತಾಲೂಕಿನ ಕೈಕಿಣಿ ಗ್ರಾಪಂ ಕಾಮತ್ ಕಂಪೌಂಡ್ ಸಮೀಪ ಕುಳಿತು ಗೆಳೆಯರೀರ್ವರು ವಿಷ ಸೇವನೆ ಮಾಡಿದ್ದು, ಓರ್ವ ಸಾವನ್ನಪ್ಪಿದ್ದರೆ, ಇನ್ನೋರ್ವ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಮೃತ ಯುವಕನನ್ನು ತಾಲೂಕಿನ ಕೈಕಿಣಿ ಮಠದಹಿತ್ತು ನಿವಾಸಿ  ಗಿರೀಶ ಮಾರುತಿ ಮೊಗೇರ ಎಂದು ಗುರುತಿಸಲಾಗಿದೆ. ಈತನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಇಲ್ಲಿನ ಕೈಕಿಣಿ ಮಠದಹಿತ್ತು ಮೂಲದ, ಪ್ರಸ್ತುತ ಬಸ್ತಿಮಕ್ಕಿಯ ನಿವಾಸಿಯಾಗಿರುವ ಲೋಕರಾಜ ನಾಗರಾಜ ಮೊಗೇರ  ಎಂದು ಹೆಸರಿಸಲಾಗಿದೆ. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸಾಗಿಸಲಾಗಿದೆ. ವಿಷ ಸೇವನೆಗೆ ಸ್ಪಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. 
ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೋಕರಾಜ ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುವ ಕಾರಣ, ಆತ ಚೇತರಿಸಿಕೊಂಡ ನಂತರವಷ್ಟೇ ಅಸಲಿ ವಿಷಯ ಹೊರ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮೃತ ಗಿರೀಶ ಮೊಗೇರ ಚಿಕ್ಕಪ್ಪ ಗಣೇಶ ಈರಪ್ಪ ಮೊಗೇರ ಪೊಲೀಸರಿಗೆ ದೂರು ನೀಡಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Share: