ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಲವ್ ಜಿಹಾದ್-ಹೀಗೂ ಉಂಟೇ....!? ಡಬ್ಬ ಸ್ಟೋರಿಯ ಸುತ್ತ.....!

ಸಕಲೇಶಪುರ: ಲವ್ ಜಿಹಾದ್-ಹೀಗೂ ಉಂಟೇ....!? ಡಬ್ಬ ಸ್ಟೋರಿಯ ಸುತ್ತ.....!

Mon, 07 Dec 2009 19:00:00  Office Staff   S.O. News Service
ಲವ್ ಜಿಹಾದ್-ಎನೀ ವಿವಾದ ಎಂಬ ಎಚ್.ಆರ್. ಚಂದ್ರಶೇಕರ್‌ರವರ ಲೇಕನ ಕುರಿತು ಜನತಾ ಮಾಧ್ಯಮ ಪತ್ರಿಕೆ ಮುಕ್ತ ಚರ್ಚೆಗೆ ಅಹ್ವಾನಿಸಿರುವುದು ಹಾಗೂ ಈ ವಿಷಯಕ್ಕೆ ಸಂಭಂದಿಸಿದಂತೆ ಅನೇಕ ಸ್ನಹಿತರು ಮಾಡಿಕೊಂಡ ಮನವಿ ಮೇರೆಗೆ ನನ್ನ ಅನಿಸಿಕೆಯನ್ನು ವ್ಯೆಕ್ತಪಡಿಸುತ್ತಿದ್ದೇನೆ.

ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಮಾಹಿತಿಯನ್ನು ಆದರಿಸಿ‘ಸಮಸ್ಯೆಯ ಭೀಕರ ಸ್ವರೋಪವನ್ನು ತೆರದಿಡವುದಕ್ಕಿಂತ, ಪ್ರೀತಿಯ ವಿರಹದಲ್ಲಿ ಬೆಂದು ಹೋಗಿರುವ, ಜಾತಿಯ ಕಾರಣಕ್ಕಾಗಿ ಹತ್ಯೆಯಾಗಿರುವ, ಆತ್ಮಹತ್ಯೆ ಮಾಡಿಕೊಂಡಿರುವ,  ಪ್ರೀತಿಯಿಂದ ವಂಚಿತರಾಗಿ ಬದುಕುತ್ತಿರುವ  ಭಗ್ನ ಪ್ರೇಮಿಗಳ ಬಳಿ ಹೋಗಿ ಜಾತಿ, ದರ್ಮ, ಹಣ,ಬಣ್ಣದ ಬಗ್ಗೆ ವಿಚಾರಿಸುತ್ತಿದ್ದರೆ ಅಥಾವ ಎಚ್.ಆರ್. ಚಂದ್ರಶೇಕರ್‌ರವರು ಯಾರನ್ನಾದರು ಪ್ರೀತಿಸಿ ಗೊತ್ತಿದ್ದರೆ ‘ಲವ್ ಜಿಹಾದ್’ ಬಗ್ಗೆ ಎಂದು ಅನುಮಾನ ವ್ಯೆಕ್ತಪಡಿಸುರುತ್ತಿಲಿಲ್ಲ .

ಜಾತಿ ಮತವೆನ್ನದೆ ಎಲ್ಲವನ್ನು  ಅಪ್ಪಿಕೊಂಡ ಸ್ವಾಮಿ ವಿವೇಕನಂದ, ಗೌತಮಬುಧ್ದ ನಾರಾಯಣಗುರು, ಬಸವಣ್ಣ, ಸೂಫಿ ಸಂತರು ಡಾ. ಅಂಬೇಡ್ಕರ್ ಗಾಂದಿಜಿ ಅವರನ್ನು ತಲೆ ಮೇಲೆ  ತಿರುಗಿದ  ದೇಶ ನಮ್ಮದು. ಹೀರ-ರಾಂಜ, ದೇವಾದಾಸ-ಪಾರು ಮತ್ತು ಸಲೀಂ- ಅನಾರ್ಕಲಿಗಳಂತಹ ಪ್ರೇಮಿಗಳನ್ನಾ ಕಂಡ ದೇಶ ನಮ್ಮದು. ಇಂತಹ ಪುಣ್ಯ ಭೂಮಿಯಲ್ಲಿ ಅದೆಷ್ಟೋ ದುರಂತ ಪ್ರೇಮ ಕಥೆಗಳು ಜಗತ್ತಿಗೆ ಗೊತ್ತಾಗದೆ  ಕಾಲ ಗರ್ಬದಲ್ಲಿ ಹುದುಗಿ ಹೋಗಿದಿಯೋ ಗೊತ್ತಿಲ್ಲ. ಇಂದಿಗೂ ಜಗತ್ತಿಗೆ  ಪ್ರೇಮದ  ಸಂಕೇತವಾಗಿ  ನಾವು  ತಾಜ್‌ಮಹಲ್  ಬೊಟ್ಟು ಮಾಡುತ್ತೇವೆ  ಚಂದ್ರಶೇಖರವರೆ  ಇದೆಲ್ಲಾ  ನಿಮಗೂ  ಗೊತ್ತಿದೆ. ನಾನು ನನ್ನ ಸ್ನೆಹಿತರು ಅನೇಕ ‘ಅಂತರ್ ಜಾತಿ’ ಮದುವೆಗಳಿಗೆ ಸಾಕ್ಷಿಯಾಗಿದ್ದೆವೆ. ಅಲ್ಲಿ ನಾವು ಕಂಡಿರುವುದು ಜಾತಿಯಲ್ಲ ‘ಪವಿತ್ರ ಪ್ರೀತಿ’ಯನ್ನು, ನಮ್ಮನ್ನು ಒಂದಾಗಿ ಬದುಕಲು ಬಿಡಿ ಎನ್ನುವ ಪ್ರೇಮಿಗಳ ಕೂಗನ್ನು.

ಈ ಪ್ರೀತಿ, ಪ್ರೇಮ  ಹೀಗೆ ಸುಮ್ಮನೆ ಅರ್ಥವಾಗುವ ವಸ್ತುವಲ್ಲ, ನಮ್ಮ ದೇಹದಿಂದ  ‘ನೆತ್ತರು ಸುರಿದರು  ನಮಗೆ ಕಣ್ಣಿರು ಬರೊದಿಲ್ಲ, ಆದರೆ ಪ್ರೀತಿಸುವ ಹೃದಯಗಳು ಬೇರೆ ಯಾಗುತ್ತಿರುವುದನ್ನು ನೋಡುತ್ತಿದ್ದರೆ ಕಣ್ಣಿರು ನಿಲ್ಲೂದಿಲ್ಲ’.

ಹೀಗೂ ಉಂಟೆ: ಲವ್ ಜಿಹಾದ್ ಎಂಬುದು  ಡಬ್ಬ ಸ್ಟೋರಿ, ಇದರಲ್ಲಿ ಒಂದಂಶವು ಸತ್ಯಂಶವಿಲ್ಲ, ಒಂದು ಸಮೂದಾಯವನ್ನು ದುರುದ್ದೇಶದಿಂದ ಅಥವ ಪೂರ್ವಗ್ರಹ ಪೀಡಿತರಾಗಿ ಅವಮಾನಿಸುವ ಪೂರ್ವಯೊಜಿತ ಕುತಂತ್ರವಾಗಿದೆ. ಕರ್ನಾಟಕ ಮತ್ತು ಕೇರಳ ಸಿ‌ಒಡಿ ಪೊಲೀಸ್ ಅದಿಕಾರಿಗಳು ನ್ಯಾಯಲಯದ ಆದೇಶದಂತೆ ೧೫ ದಿನಗಳಲ್ಲಿ ತನಿಕೆ ನಡೆಸಿ ನೀಡಿರುವ ಮದ್ಯಾಂತರ ವರದಿಯೊ ಇದಕ್ಕೆ ಸಾಕ್ಷೀಯಾಗಿದೆ.

ಮಾಧ್ಯಮಗಳು:- ಪಾಶ್ಚಾತ್ಯರಂತೆ ಶೌಚಲಯ ಕ್ರಿಯೇಗೆ, ನೀರಿಗೆ ಬದಲಾಗಿ ಟಿಶೋ ಪೆಪರ್ ಬಳೆಸುವ ಪದ್ದದಿ ನಮ್ಮಲಿರುತ್ತಿದ್ದರೆ, ಕನ್ನಡದ ಕೇಲವು ಪತ್ರಿಕೆಗಳು ಅದಕ್ಕೂ ಲಾಯಕ್ಕಿರುತ್ತಿರಲ್ಲಿಲ್ಲ, ಅಷ್ಟೋಂದು ನೀಚ ಮಟ್ಟಕ್ಕೆ ಇಳಿದು ಬಿಟ್ಟಿವೆ ನಮ್ಮ ಈ ಪತ್ರಿಕೆಗಳು,ಹೇಸಿಗೆ ಹುಟ್ಟಿಸು ವಂತೆ ಬರೆಯುತ್ತಿವೆ. ಈ ಕೊಮುವಾದಿ ಪತ್ರಿಕೆಗಳಿಗೆ  ವೃತ್ತಿ ದರ್ಮ, ನ್ಯಾಯ, ನೀತಿ, ಇತ್ಯಾದಿಗಳಂತೂ ಎಂದೋ ಸತ್ತು ಹೊಗಿವೆ. ಇದಕ್ಕೆ ಪ್ರಸ್ತತ ಚಾಲ್ತಿಯಲ್ಲಿರುವ ಲವ್ ಜಿಹಾದ್ ತಾಜ ನಿರ್ದೇಶನವಾಗಿದೆ.

ಫ್ಲಾಶ್ ಬ್ಯಾಕ್:- ಲವ್ ಜಿಹಾದ್ ಎಂದು ಪ್ರಥಮ ಬಾರಿಗೆ ಬಳೆಸಿದ್ದು ‘ಕೇರಳ ಕೌಮುದಿ’ ಮಂಬ ಮಳಿಯಾಳಿ ದಿನ ಪತ್ರಿಕೆ, ಕ್ರಮೇಣ ಕರ್ನಾಟಕದ ಟಿ.ವಿ. ಚಾನಲ್,ದಕ್ಷಿಣ ಕನ್ನಡದ ಸ್ಥಳಿಯ ಕೆಲವು ಪತ್ರಿಕೆಗಳು ನಂತರ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿ ನ್ಯಾಯಲಯದಲ್ಲು ಈ ಪದ ಬಳೆಕೆಯಾಯಿತು (ನ್ಯಾಯಂಗ ಯಾವ ಅದಾರದಲ್ಲಿ ಈ ಪದ ಬಳಸಿತೊ ನನಗಿನ್ನು ಅರ್ಥವಾಗಿಲ್ಲ?).
ಮುಸ್ಲಿಮರು, ಅನ್ಯ ದರ್ಮದ  ಯುವತಿಯರನ್ನು ಪ್ರೀತಿಸಿ ಮದುವೆಯಾಗುವ ಬೃಹುತ್ ಜಾಲವೆ ಹುಟ್ಟಿಹಾಕಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಮತಾಂತರ ನಡೆಯುತ್ತಿದೆ ನಂತರ ದೇಶ ದ್ರೋಹಿ ಕೆಲಸಕ್ಕೂ ಬಳಿಸಿ ಕೂಳ್ಳಲಾಗುತ್ತಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಮೂಬೈಲ್‌ನಲ್ಲೂ ಈ ಬಗ್ಗೆ ಬೆಗೆ-ಬಗೆಯ ಮೆಸೇಜ್‌ಗಳು ಹರಿದಾಡುತ್ತಿವೆ.

ಸೆಲ್ವರಾಜ್ ಪ್ರೇಮ ಪ್ರಕರಣ ಲವ್ ಜಿಹಾದ್‌ಗೆ ನಾಂದಿ ಹಾಡಿತ್ತು.ಚಾಮರಾಜನಗರದ ಸೆಲ್ವೆರಾಜ್ ಪೋಷಕರು ಎಂಬುವರು, ಅಸ್ಗರ್ ಎನ್ನುವ ೨೪ ವಯಸ್ಸಿನ ಯುವಕ ನನ್ನ ಮಗಳಾದ ಸೆಲ್ವರಾಜ್ ವಯಸ್ಸು ೨೧ ಇವಳನ್ನು ಪ್ರೇಮ ಪ್ರಕರಣದಲ್ಲಿ ಸಿಲುಕಿಸಿ ಅಪಹರಿಸಿದ್ದಾನೆ ಎಂದು ಕಳೆದ ಅಕ್ಟೋಬರ್ ೨೨ರಂದು ಹೈ ಕೋರ್ಟಿಗೆ ಹೆಬೀಯಸ್ ಕಾರ್ಪಸ್ ಅರ್ಚಿ ಸಲ್ಲಿಸಿದ್ದರು. ಪೊಲಿಸರಿಂದ ನ್ಯಾಯಲಯಕ್ಕೆ ಏರೀದ ಈ ಪ್ರಕರಣ ೧೫ ದಿನಗಳಲ್ಲಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹ ನೀರ್ದೆಶಕರಿಗೆ ನ್ಯಾಯಲಯ ಆದೇಶ ನೀಡಿತ್ತು. ಈ ೧೫ದಿನಗಳ ಕಾಲ ಸೆಲ್ವರಾಜ್ ತನ್ನ ಪತಿ ಅಸ್ಗರನನ್ನು ತೆಜಿಸಿ ತನ್ನ ಪೋಷಕರೊಂದಿಗಿರಲು ತಾಕೀತು ಮಾಡಿತು. ರಾಜ್ಯ ಪೊಲೀಸ್ ಸಿ‌ಒಡಿ ಅಧಿಕಾರಿಗಳು ಮತ್ತು ಕೇರಳ ಪೊಲೀಸ್ ಸಿ‌ಒಡಿ ಅದಿಕಾರಿಗಳು ವಿವಿಧ ಪ್ರದೇಶಗಳಿಗೆ ಬೇಟಿನೀಡಿ ಮಾಹಿತಿ ಸಂಗ್ರಹಿಸಿ ಲವ್ ಜಿಹಾದ್ ಹಿಂದೆ ವ್ಯವಸ್ಥಿತ ಯೋಜನೆ ಅಥಾವ ಸಂಚಿದೆ ಎನ್ನುವುದಕ್ಕೆ ಯಾವುದೆ ಪುರಾವೆ ತಮಗೆ ಲಬಿಸಲ್ಲ, ಹಿಂದು ಯುವತಿಯರನ್ನು ಬಲವಂತವಾಗಿ ಮತಾಂತರಿಸಿದ ಯಾವುದೆ ಉದಾಹಣೆಗಳಿಲ್ಲಾ ಎಂದು ನ್ಯಾಯಲಯಕ್ಕೆ ಮಧ್ಯಾಂತರ ವರದಿ ನೀಡಿದರು ಈ ದೇಶದ  ನ್ಯಾಯಂಗದ ಇತಿಹಾಸವನ್ನು  ಕೆದುಕುತ್ತಾ ಹೋದರೆ ನ್ಯಾಯಂಗವು  ದಂಪತಿಗಳನ್ನು ಬೆಸೆಯುವ ಬೆಸಗೆಯ  ಕೆಲಸನ್ನು ಮಾಡಿದೆ  ಈ ಪ್ರಕರಣದಲ್ಲಿ ದಂಪತಿಗಳನ್ನು ಬೇರ್ಪಡಿಸುವ ರೀತಿಯಲ್ಲಿ ವರ್ತಿಸಿದೆ.ಲವ್ ಜಿಹಾದ್ ಹಿಂದೆ ಬಿದ್ದಿದ್ದ ಮಾದ್ಯಮಗಳಿಗೆ,ಕೋಮುವಾದಿ ಸಂಘಟನೆಗಳಿಗೆ, ರಾಜ್ಯ ಸರಕಾರದ ಪ್ರಮುಖ ಸಚಿವರಿಗೆ ಸಿಕ್ಕಿದ್ದು ಮಾತ್ರ ‘ಪ್ರೀತಿಗೆ ಜಾತಿ‌ಇಲ್ಲ’ ಎಂಬ ಎವರ್ ಗ್ರೀನ್ ಉತ್ತರ ಮಾತ್ರ.
 
ತಪ್ಪು ಕಲ್ಪನೆ:- ಲವ್ ಜಿಹಾದ್ ಎಂದರೆ ಅನ್ಯ ದರ್ಮದ ಯುವತಿಯರನ್ನು ಇಸ್ಲಾಂ ದರ್ಮಕ್ಕೆ ಮತಾಂರಿಸುವುದಾಗಿದ್ದು ಈ ರೀತಿಯಲ್ಲಿ ಮತಾಂತರಿಸುವ ಯುವಕರಿಗೆ ಬಾರಿ ಪ್ರಮಾಣದಲ್ಲಿ ಲಕ್ಷಂತರ ಹಣ, ಹೂಸ ಕಾರು, ಬಂಗಲೆ ಉಡುಗೊರೆಯಾಗಿ ನಿಡಲಾಗುತ್ತದೆ ಎಂದು ಸುಳ್ಳನ್ನು ತೂರಿ ಬಿಡಲಾಗಿತ್ತು. ಕೆಲವು ಉಗ್ರ ಕೋಮುವಾದಿ ಸಂಘಟನೆಗಳು ‘ಸಹೋದರಿ ಉಳಿಸಿ’ ಹೋರಾಟಕ್ಕೂ ಮುಂದಾಗಿದ್ದರು ಮೊಹನನ ಸುಹಾಗ್ ಜೀಹಾದ್  ಹೊರ ಬಿಳುವುದರೊಂದಿಗೆ ಲವ್ ಜಿಹಾದ್ ದಬ್ಬದಲ್ಲಿ ಮಗುಚಿಬಿತ್ತು.
ವಾಸ್ತವ:- ಇಂಡಿಯಾ ಮುಸ್ಲಿಮರು ಜಗತ್ತಿನ ಅತೀಹೆಚ್ಚು ಮುಸ್ಲಿಮ್ ವಾಸಿಸುವ ದೇಶಗಳಲ್ಲಿ ಮೂರನೆಯವರಾಗಿದ್ದಾರೆ. ಇವರೆಲ್ಲರೂ ಸೌದಿ‌ಅರೇಬಿಯದಿಂದ ಬಂದವರಲ್ಲ..! ಇಲ್ಲಿಯ  ಜಾತಿ ವ್ಯವಸ್ಥೆಯಿಂದ ಬೇಸತ್ತು ಇಸ್ಲಾಮಿ ದರ್ಮದ ‘ಲವ್’ಗೆ ಆಕರ್ಶಿತರಾಗಿ ಇಂದು ಸುಮಾರು ೧೫ ಕೋಟಿಗೂ ಹೆಚ್ಚಿರುವ ಮುಸ್ಲಿಮರು ಬಹುತೇಕ ಮತಾಂತರಿಗಳೆ...! ಇದಕ್ಕೆ ಇತಿಹಾಸವೇ ಸಾಕ್ಷಿ ಯಾಗಿದೆ ಈ ವಾಸ್ತವದ ಅರಿವು ಎಲ್ಲರಿಗೂ ಇದೇ.
ಜ್
ಜಿಹಾದ್:- ದರ್ಮ ಯುದ್ದ ಎಂದು ವ್ಯಾಖ್ಯಿಸುವ ಈ ಪದವನ್ನು ಇಂಡಿಯಾದ ಮುಸ್ಲಿಮ್ ದಿನನಿತ್ಯದ ಬದುಕಿಗೆ‘ಜಿಹಾದ್’ ನಡೆಸುತ್ತಿದ್ದಾನೆ. ಸಚಾರ್ ವರದಿಯಂತೆ ಇಲ್ಲಿಯ ಮುಸ್ಲಿಮರು ಎಸ್.ಸಿ,ಎಸ್.ಟಿಯವರಿಗಿಂತಲು ಕೆಳಸ್ಥರದಲ್ಲಿ ಬದುಕುತ್ತಿದ್ದಾರೆ. ಅನಿಷ್ಟ ವರದಾಕ್ಷಣೆ ಪದ್ದತಿಯಿಂದಾಗಿ ಮದುವೆಯ ವಯಸ್ಸು ಮೀರಿದ ಹೆಣ್ಣು ಮಕ್ಕಳು ಮನೆಯಲ್ಲಿದ್ದಾರೆ. ಜಾಮೀನು ನೀಡಲಾಗದೆ ಜೈಲಿನಲ್ಲಿ ವಿಚಾರಣ ಖೈದಿಗಳಾಗಿ ಕೋಳೆಯುತ್ತಿದ್ದರೆ. ಆರ್ಥಿಕವಾಗಿ ಕುಗ್ಗಿ ಹೊಗಿರುವ ಮುಸ್ಲಿಮ ಹಸಿವು, ಅರೋಗ್ಯ, ಭಯ, ಅವಮಾನ ಮತ್ತು ಅನುಮಾನಗ ವಿರುದ್ದ ಜಿಹಾದ್ ನಡೆಸುತ್ತಿದ್ದಾನೆ.

ಮುಸ್ಲಿಮ್ ಹೆಸರಿನಿಂದಾಗಿ ಬೂಟುಗಳ ಎಟು ತಿನ್ನುತಿದ್ದಾನೆ, ಬಾಡಿಗೆ ಮನೆಗಾಗಿ ಅಲೆಯುತ್ತಾನೆ, ಲಾಡ್ಜ್‌ಗಳಲ್ಲಿ ರೂಂ ಸಿಗುವುದಿಲ್ಲ, ರೈಲು ನಿಲ್ದಾಣಗಳಲ್ಲಿ ಮಲಗಿದ್ದವರನ್ನು ಎಬ್ಬಿಸಿ ಪ್ರಶ್ನಿಸಲಾಗುತ್ತದೆ, ಗಡ್ಡದಾರಿಗಲನ್ನು ವಿನಾಕಾರಣ ಠಾಣೆಗೆ ತಂದು ಬಡಿಯಲಾಗುತ್ತದೆ, ಚಳವಳಿಗಾರರನ್ನು ಎನ್‌ಕೌಂಟರ್ ಮಾಡಲಾಗುತ್ತದೆ. ಶಂಕಿತ ಭಯೋತ್ಪದನೆಯ ಹೆಸರಿನಲ್ಲಿ ವಿನಾಕಾರಣ ಹಿಂಸಿಸಲಾಗುತ್ತದೆ. ವ್ಯೆವಸ್ಥೆಯ ವಿರುದ್ದ ಹೋರಾಡಿದವರನ್ನು ರೌಡಿ ಲೀಸ್ಟನಲ್ಲಿ ಸೇರಿಸಿ ಗಡಿಪಾರು ಮಾಡಲಾಗುತ್ತೆದೆ.

ಸಾಚಾರ್ ವರದಿಯಂತೆ ಶೇ ೨೫ರಷ್ಟು ಮಕ್ಕಳು ಶಾಲೆಗೆ ದಾಖಲಾಗುವುದಿಲ್ಲಾ, ಶೇ ೩.೪ ರಷ್ಟು ಪದವಿದಾರರಿದ್ದಾರೆ, ಶೇ ೨ರಷ್ಟು ಜನ ಸ್ನಾತಕೋತ್ತರ ಪಧವಿದಾರರಾಗಿದ್ದಾರೆ. ಒಟ್ಟು ಮುಸ್ಲಿಮ್ ಮಕ್ಕಳಲ್ಲಿ ಮದರಸಾಗೆ ಹೋಗುವರ ಸಂಖೆ ಶೇ ೩ರಷ್ಟು ಮಾತ್ರ. ಬೀಡಿ ಕಟ್ಟುವ, ಬಟ್ಟೆ ಹೋಳೆಯುವ ಮತ್ತು ಮೈಕಾನೀಕ್ ವೃತ್ತಿಗಳಲ್ಲಿರುವರಿಗೆ ಸಮಾಜಿಕ, ಆರ್ಥಿಕ ಭದ್ರತೆಗಳಿಲ್ಲ ಸೌಲಭ್ಯವು‌ಇಲ್ಲ.ಐ.ಪಿ.ಎಸ್.ನಲ್ಲಿ ಶೇ ೪ರಷ್ಟು,ಐ.ಎ.ಎಸ್.ನಲ್ಲಿ ಶೇ ೩ರಷ್ಟು ಮತ್ತು ಐ.ಎಫ್.ಎಸ್.ನಲ್ಲಿ  ಶೇ ೧.೮ರಷ್ಟು ಪ್ರಾತ್ಯನಿದ್ಯ ಪಡೆದಿದ್ದಾರೆ. ಪೊಲೀಸ್ ಪೇದೆಗಳಲ್ಲಿಶೇ ೬ರಷ್ಟು, ಆರೋಗ್ಯ ಇಲಾಖೆಯಲ್ಲಿ ಶೇ ೪ರಷ್ಟು, ಸಾರಿಗೆ ಇಲಾಖೆಯಲ್ಲಿ ಶೇ ೫ರಷ್ಟು ತೀರ ಕೆಳದರ್ಜೆಯ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುವರಲ್ಲಿ ಮುಸ್ಲಿಮ್ ಜನರೆ ಹೆಚ್ಚಾಗಿದ್ದಾರೆ.
ಇಂಥಹ  ಸ್ಥಿಥಿಯಲ್ಲಿ ಬದುಕುತ್ತಿರುವ ಸಮಾಜ ‘ಲವ್ ಜಿಹಾದ್’ ಎಂದು ಅದರ ಹಿಂದೆ ತಿರುಗಲು ಸಾದ್ಯವೆ?, ರಾಜ್ಯ ಪೊಲೀಸ್ ಸಿ‌ಒಡಿ ಅದಿಕಾರಿಗಳು ಮತ್ತು ಕೇರಳ ಪೊಲೀಸ್ ಸಿ‌ಒಡಿ ಅದಿಕಾರಿಗಳು ನ್ಯಾಯಲಯಕ್ಕೆ ನೀಡಿರುವ ವರದಿ ಸುಳ್ಳೆ?, ಈ ‘ಲವ್ ಜಿಹಾದ್’ ಬಗ್ಗೆ ಯಾವ ಠಾಣೆಯಲ್ಲಿ ಎಫ್.ಐ.ಅರ್.ದಾಕಲಾಗಿದೆ? ಅದರ ಸಂಖ್ಯೆ ಎಷ್ಟು?, ‘ಲವ್‌ಜಿಹಾದ್’ನಿಂದ ವಂಚಿತರಾಗಿರುವ ಒಂದೇ ಒಂದೂ ಯುವತಿ ಮಾಧ್ಯದ ಮುಂದೆ ಬರಲಿಲ್ಲ ಎಕೆ?.

ಸೆಲ್ವರಾಜ್‌ಗೂ ನ್ಯಾಯಲಯ ೩ ವಾರ ತಂದೆ-ತಾಯಿಯ ಜೋತಿ ಇರಲು ಸೂಜಿಸಿತ್ತು, ಸೆಲ್ವರಾಜ್ ಪ್ರೀತಿಯ ಕಡೆ ಹೋದಳು......ಪ್ರೀತಿಗೆ ಜಿಹಾದ್ ಪದ ಸೇರಿಸಿ ವಿಚಿತ್ರ ಆರ್ಥ ಸೃಷ್ಟಿಸಲು ಯತ್ನಿಸುತ್ತಿರುವುದರಲ್ಲಿ ಒಂದು ಸತ್ಯವಿದೆ. ಪವಿತ್ರ ಪ್ರೀತಿಯೂ ದರ್ಮ ಯುದ್ದಕ್ಕೆ ಸಮವಾದದ್ದೆ, ಈ ಜಾತಿ, ದರ್ಮ, ಹಣ, ಅಂತ್ಸತ್ತು,ಬಣ್ಣ, ಮೇಲು, ಕೀಳು, ಆಚಾರ ಸಂಪ್ರದಾಯಗಳ ನಡುವೆ ಪ್ರಮಾಣಿಕ ಪ್ರೇಮಿಗಳು ‘ಲವ್ ಗಾಗಿ ಜಿಹಾದ್’ ನಡೆಸುತ್ತಲೆ‌ಇದ್ದಾರೆ...!. 

(ಜನತಾ ಮಾಧ್ಯಮ ಪತ್ರಿಕೆಯಲ್ಲಿ ಡಿ,೧ಕ್ಕೆ ಪ್ರಕಟವಾದ ಲೇಖನ)


Share: