ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜ್ಯದ ವಿವಿಧ ನಗರಗಳಲ್ಲಿ ಇಂದಿನಿಂದ ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಶಿಬಿರ

ಬೆಂಗಳೂರು: ರಾಜ್ಯದ ವಿವಿಧ ನಗರಗಳಲ್ಲಿ ಇಂದಿನಿಂದ ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಶಿಬಿರ

Sun, 27 Sep 2009 02:44:00  Office Staff   S.O. News Service

ಬೆಂಗಳೂರು, ಸೆ.26: ರಾಜ್ಯದಿಂದ ಪ್ರಸ್ತುತ ಸಾಲಿನಲ್ಲಿ ಹಜ್ಜ್ ಯಾತ್ರೆ ಕೈಗೊಳ್ಳುವವರಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂದಿನಿಂದ ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಗೆ ಹಜ್ಜ್ ಸಮಿತಿಯು ವಿಶೇಷ ಶಿಬಿರವನ್ನು ಆಯೋಜಿಸಿದೆ.

ಗುಲ್ಬರ್ಗ: ಸೆ.27 ಹಾಗೂ 28 ರಂದು ಗುಲ್ಬರ್ಗ ವರ್ತುಲ ರಸ್ತೆಯಲ್ಲಿರುವ ಬಾಖ್ವಾರ್ ಭವನದ ಎದುರಿನ ಕೆ‌ಎನ್‌ಝೆಡ್ ಗಾರ್ಡನ್, ಬಿಜಾಪುರ: ಸೆ.28ರಂದು ಬಿಜಾಪುರ ಕ್ರೀಡಾಂಗಣದ ಚಾಂದನಿ ಭವನ,

ಬೀದರ್: ಸೆ.29ರಂದು ಬೀದರ್ ಜಿಲ್ಲಾ ಆಸ್ಪತ್ರೆ, ಬಾಗಲಕೋಟೆ: ಸೆ.29ರಂದು ಬಾಗಲಕೋಟೆ ಜಿಲ್ಲಾ ಆಸ್ಪತ್ರೆ, ಕೋಲಾರ: ಸೆ.30ರಂದು ಕೋಲಾರದ ಎಸ್‌ಎನ್‌ಆರ್ ಸರಕಾರಿ ಆಸ್ಪತ್ರೆ, ತುಮಕೂರು: ಸೆ.30 ರಂದು ತುಮಕೂರು ಹಝ್ರತ್ ಮದಾರ್‌ಷಾ ಶಾದಿ ಮಹಲ್, ದಾವಣಗೆರೆ- ಚಿತ್ರದುರ್ಗ: ಸೆ.೩೦ರಂದು ದಾವಣಗೆರೆ ಜಿಲ್ಲಾ ಸರಕಾರಿ ಆಸ್ಪತ್ರೆ.

ಚಿಕ್ಕಬಳ್ಳಾಪುರ:  ಅಕ್ಟೋಬರ್ 1ರಂದು ಚಿಕ್ಕಬಳ್ಳಾಪುರದ ಸರಕಾರಿ ಆಸ್ಪತ್ರೆ, ಶಿವಮೊಗ್ಗ: ಅ.೧ರಂದು ಶಿವಮೊಗ್ಗ ಆರ್‌ಎಂಎಲ್ ನಗರ ಎರಡನೆ ಹಂತದಲ್ಲಿನ ಯುನಿಟಿ ಶಾದಿ ಮಹಲ್, ಬೆಳಗಾವಿ: ಅ.೩ರಂದು ಬೆಳಗಾವಿನ ಜಿಲ್ಲಾ ಆರೋಗ್ಯ ಕೇಂದ್ರ, ರಾಮನಗರ: ಅ.೩ರಂದು ರಾಮನಗರದ ಸರಕಾರಿ ಆಸ್ಪತ್ರೆ, ಧಾರವಾಡ: ಅ.೫ರಂದು ಧಾರವಾಡದ ಜಿಲ್ಲಾ ಆಸ್ಪತ್ರೆ.

ಚಿಕ್ಕಮಗಳೂರು: ಅ.5 ರಂದು ಚಿಕ್ಕಮಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆ,

ಮೈಸೂರು-ಮಂಡ್ಯ-ಚಾಮರಾಜನಗರ: ಅ.5ರಂದು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿನ ಬನ್ನಿಮಂಟಪದ ದಾರುಲ್ ಉಲೂಮ್ ಸಿದ್ದೀಖಿಯ ಅರೆಬಿಕ್ ಕಾಲೇಜು,

ಹಾಸನ: ಅ.6ರಂದು ಹಾಸನದ ಜಿಲ್ಲಾ ಆಸ್ಪತ್ರೆ,

ಹಾವೆರಿ: ಅ.6ರಂದು ಹಾವೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆ.

ಉತ್ತರ ಕನ್ನಡ: ಅ.6ರಂದು ಕಾರವಾರದ ಜಿಲ್ಲಾ ಆಸ್ಪತ್ರೆ,

ಕೊಡಗು: ಅ.6ರಂದು ಮಡಿಕೇರಿಯ ಜಿಲ್ಲಾ ಆಸ್ಪತ್ರೆ,

ದಕ್ಷಿಣ ಕನ್ನಡ-ಉಡುಪಿ: ಅ.7ರಂದು ಮಂಗಳೂರಿನ ಯೆನಪೋಯ ಆಸ್ಪತ್ರೆ,

ಗದಗ: ಅ.9ರಂದು ಮುಲ್‌ಗುಂಡ್ ನಕ್ ಬಂಗಾರ್ ಶೆಟ್ಟರ್ ಪೆಟ್ರೋಲ್ ಬಂಕ್ ಹಿಂಭಾಗದ ಝಾಕಿರ್ ಹುಸೈನ್ ಕಾಲನಿಯ ಡಾ.ಝಾಕಿರ್ ಹುಸೈನ್ ಶಾದಿ ಮಹಲ್.

ರಾಯಚೂರು: ಅ.10 ರಂದು ರಾಯಚೂರಿನ ಜಿಲ್ಲಾ ಆಸ್ಪತ್ರೆ,

ಬೆಂಗಳೂರು ನಗರ: ಅ.13ರಂದು ಬೆಂಗಳೂರಿನ ಮಿಲ್ಲರ‍್ಸ್ ರಸ್ತೆಯ ಖುದ್ದುಸ್ ಸಾಹೇಬ್ ಈದ್ಗಾ ಮೈದಾನ.

ಬಳ್ಳಾರಿ-ಕೊಪ್ಪಳ: ಅ.18 ರಂದು ಬಳ್ಳಾರಿಯ ಬೆಂಗಳೂರು ಮುಖ್ಯರಸ್ತೆಯ ಮುಸ್ಲಿಮ್ ಶಾದಿ ಮಹಲ್ ಎದುರಿನ ರಂಗ ಮಂದಿರದಲ್ಲಿ ಹಜ್ಜ್ ಯಾತ್ರಿಗಳಿಗೆ ವಿಶೇಷ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ರಾಜ್ಯ ಹಜ್ಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ನಯಾಝ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share: