ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಮಟಾ ತಾಲೂಕಿನ ಹೆಗಡೆ ಸರ್ಕಲ್‌ನಿಂದ ಹಳಕಾರ ಕ್ರಾಸವರೆಗೆ ಮತ ಎಣಿಕೆ ಹಿನ್ನಲೆ ವಾಹನ ಸಂಚಾರ ನಿಷೇಧ

ಕುಮಟಾ ತಾಲೂಕಿನ ಹೆಗಡೆ ಸರ್ಕಲ್‌ನಿಂದ ಹಳಕಾರ ಕ್ರಾಸವರೆಗೆ ಮತ ಎಣಿಕೆ ಹಿನ್ನಲೆ ವಾಹನ ಸಂಚಾರ ನಿಷೇಧ

Tue, 04 Jun 2024 00:49:52  Office Staff   S O News

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ಕುಮಟಾದ ಡಾ.ಎ.ವಿ.ಬಳಿಗಾ, ಕಲಾಮತ್ತು ವಿಜ್ಞಾನ ಕಾಲೀಜಿನ ಮತ ಎಣಿಕೆ ಕೇಂದ್ರದ ಮುಂಭಾಗದ ರಸ್ತೆಯಾದ ಕುಮಟಾ ತಾಲೂಕಿನ ಹೆಗಡೆ ಸರ್ಕಲ್‌ನಿಂದ ಹಳಕಾರ ಕ್ರಾಸವರೆಗೆ ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ಜೂನ್ 4 ರ ಬೆಳಗ್ಗೆ 6 ಗಂಟೆಯಿಂದ ಮತ ಎಣಿಕೆ ಮುಕ್ತಾಯವಾಗುವವರೆಗೆ ನಿಷೇಧಿಸಿ ಹಾಗೂ ಈ ಅವಧಿಯಲ್ಲಿ ವಿವೇಕನಗರ 4ನೇ ಕ್ರಾಸ ಮೂಲಕ, ವಿವೇಕನಗರ ಶಾಲೆಯ ಪಕ್ಕದ ಮಾರ್ಗವಾಗಿ ರಾಮಲಿಲಾ ಆಸ್ಪತ್ರೆ ಕ್ರಾಸ್ ಎನ್‌ಹೆಚ್-66 ಮುಖಾಂತರ ಕುಮಟಾ ಶಹರಕ್ಕೆ, ಹಳಕಾರ ಕ್ರಾಸ್‌ನಿಂದ ಹೆಗಡೆವರೆಗಿನ ಎಲ್ಲಾ ಸಾರ್ವಜನಿಕರು ಹಳಕಾರ ಕ್ರಾಸ್-ಚಿತ್ರಿಗಿ ಮಾರ್ಗವಾಗಿ ಶಹರಕ್ಕೆ ತಲುಪಲು ಮಾರ್ಗ ಬದಲಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದಾರೆ.


Share: