ಮಂಗಳೂರು, ಅ.5: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ಕಾಮನ್ ವೆಲ್ತ್ ಶಿಕ್ಷಣ ಹಾಗೂ ಮಾನಯತಾ ಅಧ್ಯಯನ(ಎಸಿಡಬ್ಲೂಇಎಚ್ಸಿ) ದಿಂದ ಕೊಡಲಾಗುವ ‘ಡಾ.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಪರಿಸರ ರತ್ನ-2009’ ಪ್ರಶಸ್ತಿಗೆ ಕಾರ್ಪೋರೇಶನ್ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಜೆ.ಎಮ್.ಗರ್ಗ್ ಭಾಜಕರಾಗಿದ್ದಾರೆ.
ಈ ಪ್ರಶಸ್ತಿಯನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಬಿ.ಎಸ್.ಶೇರಿಗಾರ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಎಸಿಡಬ್ಲೂಇಎಚ್ಸಿಯ ಅಧ್ಯಕ್ಷ ಸಿ.ಜಗನ್ನಾಥ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರು, ರಾಷ್ಟ್ರೀಯ ಪರಿಸರ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಪುಟ್ಟಯ್ಯ, ಜೆ.ಎಮ್.ಗರ್ಗ್ರ ಪತ್ನಿ ಮತ್ತಿತರರು ಉಪಸ್ಥಿತರಿದ್ದರು