ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು:"ಲವ್ ಜಿಹಾದ್" ಹೆಸರಿನಿಂದ ಇಸ್ಲಾಂ ಧರ್ಮಕ್ಕೆ ಅಪಪ್ರಚಾರ ಮಾಡುವುವವರನ್ನು ಖಂಡಿಸಿ, ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ನ 12 ರಂದು ಜನ ಜಾಗೃತಿ ಸಮಾವೇಶ

ಮಂಗಳೂರು:"ಲವ್ ಜಿಹಾದ್" ಹೆಸರಿನಿಂದ ಇಸ್ಲಾಂ ಧರ್ಮಕ್ಕೆ ಅಪಪ್ರಚಾರ ಮಾಡುವುವವರನ್ನು ಖಂಡಿಸಿ, ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ನ 12 ರಂದು ಜನ ಜಾಗೃತಿ ಸಮಾವೇಶ

Wed, 11 Nov 2009 02:21:00  Office Staff   S.O. News Service

ಮಂಗಳೂರು,ನ.೧೦: "ಲವ್ ಜಿಹಾದ್" ಎಂಬ ಹೆಸರಿಗೂ ಇಸ್ಲಾಂ ಧರ್ಮಕ್ಕೂ ಯಾವುದೇ ಸಮ್ಮಂದವಿಲ್ಲದಿದ್ದರೂ ಹಿಂದು ಮುಸ್ಲಿಂ ಐಕ್ಯತೆಗೆ ದಕ್ಕೆ ತರಲು "ಲವ್ ಜಿಹಾದ್" ಎಂಬ ನವೀನ ಹೆಸರನ್ನು ಹುಟ್ಟು ಹಾಕಿ ಇಸ್ಲಾಂ ಧರ್ಮಕ್ಕೆ ಅಪಪ್ರಚಾರ ಮಾಡುವವರನ್ನು ಖಂಡಿಸಲು ಹಾಗೂ ’ಜಿಹಾದ್’ ಎಂಬ ಪದಕ್ಕೆ ಇಸ್ಲಾಂ ಧರ್ಮದಲ್ಲಿರುವ ಅರಬೀ ಪದದ ನಿಜ ಅರ್ಥವನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ದ.ಕ ಜಿಲ್ಲಾ ಹಾಗೂ ಉಡುಪಿಯಾ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ನ 12ರಂದು ಅಪರಾಹ್ನ ಗಂಟೆ ೪ ಕ್ಕೆ ಮಂಗಳೂರಿನ ಬಂದರಿನಲ್ಲಿರುವ " ಝೀನತ್ ಭಕ್ಷ್ಯ್ ಯತೀಂಖಾನ ಹಾಲಿನಲ್ಲಿ" ಜನ ಜಾಗೃತಿ ಸಮಾವೇಶವನ್ನು ಎರ್ಪಡಿಸಲಾಗಿದೆ ಎಂದು ಕಮಿಟಿಯಾ ಉಪಾಧ್ಯಕ್ಷ ಅಲ್ ಹಾಜ್ ಇಬ್ರಾಹಿಂ ಕೋಡಿಜಾಲ್ ಅವರು ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ಈ ಸಮಾವೇಶದಲ್ಲಿ ಮುಸ್ಲಿಂ ಹಾಗೂ ಇತರ ಸಮುದಾಯದ ಧಾರ್ಮಿಕ  ಮುಖಂಡರು, ರಾಜಕೀಯ ಮುಖಂಡರು, ಮತ್ತು ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಎಂದು ಅವರು ಮಾಹಿತಿ ನೀಡಿದರು.

 ಕಮಿಟಿಯಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಪ್, ಕಾರ್ಯದರ್ಶಿಗಳಾದ ಬಿ.ಅಬ್ಬೂಬಕ್ಕರ್, ಅಹಮ್ಮದ್ ಬಾವಾ, ಕಾರ್ಯಕಾರಿ ಸಮಿತಿ ಸದಸ್ಯ ಸಿ.ಎಂ.ಮುಸ್ತಫಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

 

ಸೌಜನ್ಯ: ಗಲ್ಫ್ ಕನ್ನಡಿಗ 


Share: