ಸಕಲೇಶಪುರ, ಡಿಸೆಂಬರ್ 21: ವಿಧಾನ ಪರಿಷತ್ ಚುನಾವಣೆಯಲ್ಲಿ ಐದುನೂರು ಮತಗಳ ಅಂತರದಿಂದ ನನ್ನ ಗೆಲುವು ನಿಶ್ಚಿತ ಎಂದು ಬಿ.ಜೆ.ಪಿ ಪಕ್ಷದ ವಿಧಾನ ಪರೀಷತ್ ಚುನಾವಣೆ ಅಭ್ಯರ್ಥಿ ನಾರಾಯಣ ಹೇಳಿದ್ದಾರೆ.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮತನಾಡಿದ ಅವರು, ನಾನು ನನ್ನ ಗೇಲುವಿನ ಬಗ್ಗೆ ತಮಾಷೆ ಮಾಡುತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ವಿರೋಧಿಗಳು ನನ್ನ ಗೆಲುವನ್ನು ತಡೆಯಲು ರೂಪಿಸಿದ ಷಡ್ಯಂತ್ರ ಪ್ರಯೋಜನವಾಗಿಲ್ಲ, ಮತದಾನದ ವೇಳೆ ವಿರೋದಿಗಳು ದಬ್ಬಾಳಿಕೆ ಮೂಲಕ ಮತದಾನ ಮಾಡಿಸಿದ್ದರಿಂದಾಗಿ ನನ್ನ ಗೆಲುವಿನ ಅಂತರ ಸ್ವಲ್ಪತಗ್ಗ ಬಹುದಾಗಿದೆ ಹೊರತು ಸೋಲುವುದು ಅಸಾಧ್ಯ ಎಂದರು.
ಜಿಲ್ಲೆಯ ಇತಿಹಾಸದಲ್ಲಿ ದಲಿತ ಅಭ್ಯರ್ಥಿಗೆ ವಿಧಾನ ಪರೀಷತ್ ಚುನಾವಣೆಗೆ ಸ್ಪರ್ದಿಸಲು ಅವಕಾಶ ನೀಡಿರುವುದು ಇದೇ ಮೊದಲು ಹಾಗೂ ದಲಿತ ಸಮಾಜದೂಂದಿಗೆ ನನ್ನ ಬಾಂಧವ್ಯ ಚನ್ನಾಗಿರುವುದರಿಂದ ಸುಮಾರು ೧೮೦೦ ರಷ್ಟಿರುವ ದಲಿತ ಮತದಾರರಲ್ಲಿ ಶೇ 90ರಷ್ಟು ಮತದಾರರು ನನ್ನನು ಬೆಂಬಲಿಸಿದ್ದಾರೆ ಎಂದರು. ತನ್ನ ಸಾರ್ವತ್ರಿಕ ಜೀವನದಲ್ಲಿ ಯಾರೂಂದಿಗೂ ವೈಮನಸ್ಸ ಹೂಂದಿಲ್ಲದೇ ಇರುವುದರಿಂದ ನಾರಯಣ ಒಳ್ಳೆಯ ವ್ಯಕ್ತಿ ಎಂಬುದು ಎಲ್ಲರಿಗೂ ತಿಳಿದಿದೆ ಆದ್ದರಿಂದ ಲಿಂಗಾಯಿತರು ಹಾಗೂ ಒಕ್ಕಲಿಗರು ವಿಶೇಷವಾಗಿ ಮುಸ್ಲಿಂ ಮತದಾರರು ನನ್ನನು ಬೆಂಬಲಿಸಿದ್ದಾರೆ. ಬಿ.ಜೆ.ಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಕರ್ತವ್ಯ ನಿರ್ವಹಿಸಿರುವುದು ನನ್ನ ಗೆಲವಿಗೆ ಸಹಕಾರಿಯಾಗಲಿದೆ ಎಂದರು. ವಿರೋಧಿಗಳು ಹೇಳುವಂತೆ ಅಥಾವ ಚುನಾವಣಾ ಪೂರ್ವ ಸಮೀಕ್ಷೆಯಂತೆ ಈ ಕ್ಷೇತ್ರದಲ್ಲಿ ಮತದಾನವಾಗಿಲ್ಲ ಹಾಸನ ಜಿಲ್ಲೆಯ ರಾಜಕಾರಣವೆ ವಿಬಿನ್ನವಾಗಿರುವುದರಿಂದ ಹಾಗೂ ದಲಿತ ಅಭ್ಯರ್ಥಿಯೂಬ್ಬನನ್ನು ಗೇಲ್ಲಿಸಲು ಮತದಾರರು ನಿರ್ಣಯಿಸಿರುವುದರಿಂದ ನಿಶ್ಚಿತವಾಗಿ ನಾನೆ ಗೆಲ್ಲುವುದಾಗಿ ಹೇಳುತಿದ್ದೇನೆ, ಈ ಹೇಳಿಕೆಯಲ್ಲಿ ಏಳ್ಳೂಷ್ಟು ಅನುಮಾನ ಬೇಡ, ಗೆದ್ದನಂತರ ಈ ಕ್ಷೇತ್ರವನ್ನು ಕಾಡುತ್ತಿರುವ ಕಾಡಾನೆ ಸಮಸ್ಯೆ ಪರಿಹಾರಕ್ಕೆ ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು. ಈ ಚುನಾವಣೆಯಲ್ಲಿ ತಮ್ಮ ತುನ,ಮನವನ್ನು ಅರ್ಪಿಸಿ ಪ್ರಚಾರ ನೆಡಸಿದ ಎಲ್ಲ ಕಾರ್ಯಕರ್ತರಿಗೆ ಹಾಗೂ ಪಕ್ಷದ ಮುಖಂಡರಿಗೆ ಈ ಸಂದರ್ಭದಲ್ಲಿ ಧನ್ಯವಾದವನ್ನು ಸಲ್ಲಿಸುವುದಾಗಿ ತಿಳಿಸಿದರು.