ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಶಿವಾಜಿ ವಿದ್ಯಾ ಮಂದಿರ ಅಸ್ನೋಟಿಗೆ ರಾಜ್ಯ ಮಟ್ಟದ ಉತ್ತಮ ಪ್ರೌಢಶಾಲಾ ಪ್ರಶಸ್ತಿ

ಕಾರವಾರ: ಶಿವಾಜಿ ವಿದ್ಯಾ ಮಂದಿರ ಅಸ್ನೋಟಿಗೆ ರಾಜ್ಯ ಮಟ್ಟದ ಉತ್ತಮ ಪ್ರೌಢಶಾಲಾ ಪ್ರಶಸ್ತಿ

Fri, 04 Oct 2024 04:15:34  Office Staff   S O News

ಕಾರವಾರ: ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು (ರಿ) ಧಾರವಾಡ ನೀಡುವ ರಾಜ್ಯ ಮಟ್ಟದ ಉತ್ತಮ ಪ್ರೌಢಶಾಲಾ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಾದ ಅಕ್ಟೋಬರ್ 5 ರಂದು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ.  

ರಾಜ್ಯದ ಉತ್ತಮ ಪ್ರೌಢಶಾಲೆಗಳ ಶೈಕ್ಷಣಿಕ ಮತ್ತು ಸಾಮಾಜಿಕ ಬದ್ಧತೆ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣ ಜೊತೆಗೆ ಸಂಸ್ಕಾರಯುತ ಕಲಿಕೆಯನ್ನು ಮಾಪನ ಮಾಡಿ, ರಾಜ್ಯದ 5 ಶಾಲೆಗಳಿಗೆ ಸದರಿ ಪ್ರಶಸ್ತಿಯನ್ನು ಘೋಷಿಸಿದ್ದು, ಅಸ್ನೋಟಿಯ ಶಿವಾಜಿ ವಿದ್ಯಾಮಂದಿರ ಈ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.


Share: