ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬಾಗೇಪಲ್ಲಿ: ಚರ್ಚೆಗೆ ಗ್ರಾಸವಾದ ಶಿಕ್ಷಕರ ಗುತ್ತಿಗೆ ಕೆಲಸ

ಬಾಗೇಪಲ್ಲಿ: ಚರ್ಚೆಗೆ ಗ್ರಾಸವಾದ ಶಿಕ್ಷಕರ ಗುತ್ತಿಗೆ ಕೆಲಸ

Thu, 26 Nov 2009 03:04:00  Office Staff   S.O. News Service
ಬಾಗೇಪಲ್ಲಿ.ನವಂಬರ್ 24: ತಾಲೂಕಿನ ಹಲವು ಶಿಕ್ಷಕರು ಗುತ್ತಿಗೆ ಕೆಲಸದಲ್ಲಿ ತೊಡಗಿರುವ ಬಗ್ಗೆ ಇಂದು ತಾ.ಪಂ. ಕಚೇರಿಯ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿತು.

ಶಾಸಕ ಎನ್.ಸಂಪಂಗಿ ಅದ್ಯಕ್ಷತೆಯಲ್ಲಿ ಆರಂಭವಾದ ಸಭೆಯಲ್ಲಿ ತಾಲೂಕಿನಲ್ಲಿ ಹಲವು ಶಿಕ್ಷಕರು ಶಾಲಾ ಕೊಠಡಿಗಳ ನಿರ್ಮಾಣದ ವಿಚಾರದಲ್ಲಿ ಶಿಕ್ಷಕರು ಎಸ್.ಡಿ.ಎಂ.ಸಿ ಅದ್ಯಕ್ಷರ ಹಾಗೂ ಸದಸ್ಯರ ಗಮನಕ್ಕೆ ತರದೆ ಏಕಪಕ್ಷಿಯವಾಗಿ ಗುತ್ತಿಗೆ ಕೆಲಸಗಳನ್ನು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆಂದು ಸಭೆಯಲ್ಲಿ ಅರೋಪಿಸಿದಾಗ ಎಚ್ಚತ್ತ ಶಾಸಕ ಎನ್. ಸಂಪಂಗಿ ರವರು  ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅದೇಶ ನೀಡಿ ಈ ಬಗ್ಗೆ ಅಂತಹ ಶಿಕ್ಷಕರ ಪಟ್ಟಿಯನ್ನು ತಯಾರಿಸಿ  ಮಾಹಿತಿ ಒದಗಿಸಿ ಎಂದರು  

ನಂತರ ಶಾಸಕರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ರಾಜಕೀಯ ಗಲಾಟೆಗಳಿಗೆ ಶಿಕ್ಷಕರ ಬಲಿ ಕೊಡಲಾಗುತ್ತಿದೆ ಇಂತಹ ಘಟನೆಗಳನ್ನು ಅನೇಕ ಸಲ ಖಂಡಿಸಿದ್ದನೆ  ಅದರೆ ಶಿಕ್ಷಕರು ಪಾಠ ಪ್ರವಚನಗಳನ್ನು ಮಾಡುವುದು ಬಿಟ್ಟು ಗುತ್ತಿಗೆ ಕೆಲಸಗಳನ್ನು ಮಾಡಿದರೆ ಈ ಸಮಾಜವನ್ನು ದೇವರೆ ಕಾಪಾಡಬೇಂದು ವಿಷಾಧಿಸಿದರು ೮ ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿ ಚಂದೆಶೇಖರ್ ಬಾಬು ರವರನ್ನು ಕೇಳಿದಾಗ ಅದಕ್ಕೆ ಉತ್ತರಿಸಿ ಬಿ‌ಇ‌ಒ ರವರು ಸೈಕಲ್ ಇನ್ನು ಬಂದಿಲ್ಲ ಬಂದ ನಂತರ ವಿತರಿಸಲಾಗುವುದು ಎಂದರು ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಶಾಸಕರು ಸರ್ಕಾರ ೮ ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವ ವ್ಯವಸ್ಥೆ ಮಾಡಿದೆ ಅದರೆ ಇಲ್ಲಿ ೯ ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ವಿತರಣೆ ಮಾಡುತ್ತಿದ್ದಾರೆಂದು ವ್ಯಂಗವಾಡಿದರು 

ಉರ್ದು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ಪ್ರಸ್ತಾಪಿಸಿದ ಶಾಸಕರು ಸರ್ಕಾರ ಮೇಲೆ ಒತ್ತಡ ತಂದು ಶಿಘ್ರದಲ್ಲೆ ಖಾಲಿಯಿರುವ ಶಿಕ್ಷಕರನ್ನು ನೇಮಿಸಲಾಗವುದು ಅಲ್ಪಸಂಖ್ಯಾರು ಹೆಚ್ಚಿರುವ ನಾರೇಮದ್ದೇಪಲ್ಲಿ ಪಾತಪಾಳ್ಯ ಚೇಳೂರು ಮುಂತಾದ ಸ್ಥಳಗಳ್ಲಿ ನೂತನ ಉರ್ದು ಪ್ರೌಡಶಾಲೆಗಳನ್ನು ಪ್ರಾರಂಬಿಸಲಾಗುವುದು  ನಂತರ ಶಾಸಕರು ಸರ್ಕಾರಿ ಅಸ್ಪತ್ರೆಯಲ್ಲಿ ವೈದ್ಯರು ಬೇರೆ ಸ್ಥಳಗಳಿಗೆ ನಿಯೋಜನೆಗೊಂಡಿರುವ ಬಗ್ಗೆ ತಾಲೂಕು ವೈದ್ಯಧಿಕಾರಿ ಡಾ|| ರೇಣಿಕಮ್ಮರನ್ನು ಕೇಳದಾಗ ಚೇಳೂರು ಅಸ್ಪತ್ರೆಯ ವೈದ್ಯ ಡಾ|| ಭವನಾ ಚಿಂತಾಮಣಿ ಅಸ್ಪತೆಗೆ ನಿಯೋಜನೆಗೊಂಡಿದ್ದಾರೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಅಸ್ಪತ್ರೆಯ ವೈದ್ಯ ಡಾ|| ಸಂಜಯ ರವರನ್ನು ಗೂಳೂರು ಅಸ್ಪತ್ರೆ ನಿಯೋಜನೆ ಮಾಡಲಾಗಿದೆ ಎಂದರು ಇದ್ದಕ್ಕೆ ಉತ್ತರಿಸಿದ ಶಾಸಕರು ಈ ನಿಯೋಜನಗಳನ್ನು ರದ್ದು ಮಾಡಿ ಎಂದು ಡಿ.ಎಚ್.ಓ. ರವರಿಗೆ ಪತ್ರ ಬರೆಯಿರಿ ಎಂದ ಶಾಸಕರು ಅಸ್ಪತ್ರೆಯಲ್ಲಿ ಶುಚಿ ಮಾಡುವ ಕಾರ್ಯಕ್ರಮ ಶುಚಿಯಾಗಿ ನಡೆಯುತ್ತಿಲ್ಲ ತಿಂಗಳಿ ೯ ಲಕ್ಷ ರೂ ಟೆಂಡರ್ ಮೂಲಕ ಕಾಮಗಾರಿ ಪಡೆದಿರುವ ಗುತ್ತಿಗೆದಾಗ ಕಳೆಪೆ ಕೆಲಸದಲ್ಲಿ ತೊಡಗಿದ್ದಾರೆ ಬೇಡ್ ಶೀಟು ಪ್ಯಾನು  ಶೌಚಾಲಯ ಗೋಡೆ ಮುಂತಾದ ಸ್ಥಳಗಳನ್ನು ಸ್ವಚ್ಚ ಮಾಡಬೇಕಾದ ಗುತ್ತಿಗೆದಾರ ಕಾಟಚಾರಕ್ಕೆ ಮಾಡುತ್ತಿದ್ದಾರೆ ಗುಡಿಬಂಡೆಯಲ್ಲಿ ಇದೆ ಗುತ್ತಿಗೆದಾರ ಟೆಂಡರ್ ಪಡೆದಿದ್ದು ಈ ಬಗ್ಗೆ ತನಿಖೆ ಮಾಡಿ ಕ್ರಮಕೈಗೊಳ್ಳುವ ಭರವಸೆ ನೀಡಿದರು 

ತಾಲೂಕು  ಸಮಾಜ  ಕಲ್ಯಾಣಿಧಿಕಾರಿ ನಾಗರಾಜ್ ತರಾಟೆಗೆ ತೆಗೆದುಕೊಂಡ ಶಾಸಕರು ಒಂದು ಕಡೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿ ಮೂರು ಬಿಲ್‌ಗಳನ್ನು ಮಾಡಿ ಹಣ ನುಂಗುವ ನೀವು ತಾಲೂಕಿನಲ್ಲಿ ನಿಮ್ಮ ಇಲಾಖೆಯಿಂದ ನಡೆಯುತ್ತಿರುವ ಕೆಲಸಗಳ ಬಗ್ಗೆ ಕಾಳಜಿ ಇದಯೇ ಎಂದು ಪ್ರಶ್ನಿಸಿ ತಕ್ಷಣ ಮಾಹಿತಿ ಒದಗಿಸಿ ಎಂದರು

ಉದ್ಯೋಗ ಖಾತ್ರಿ ಯೋಜನೆಗೆ ಸರ್ಕಾರದಿಂದ ೨೧ ಕೊಟಿ ರೂ ಬಿಡುಗಡೆಯಾಗಿದ್ದು ಇದುವರೆಗೂ ೨೦ ಕೊಟಿ ರೂಗಳನ್ನು ಖರ್ಚು ಮಾಡಲಾಗಿದೆ ತಾ.ಪ. ಕಾರ್ಯನಿರ್ವಹಣಾಧಿಕಾರಿ ಡಾ|| ಬಿ.ಶ್ರೀನಿವಾಸ ತಿಳಿಸಿ ೨೦೯೧ ಕಾಮಗಾರಿಳು ಪ್ರಗತಿಯಲ್ಲಿವೆ ಈ ವರ್ಷದಲ್ಲಿ ೭೨ ಕೊಟಿ ರೂಗಳು ತಾಲೂಕಿಗೆ ಮಂಜೂರಾತಿ ದೊರೆಯಲಿದೆ ಎಂದರು ನಂತರ ಶಾಸಕ ಎನ್.ಸಂಪಂಗಿ ಮಾತನಾಡಿ ಸೋನಿಯಗಾಂಧಿಯವರ ಅಚ್ಚು ಮೆಚ್ಚಿನ ಉದ್ಯೋಗ ಖಾತ್ರಿ ಯೋಜನೆ ತಾಲೂಕಿನಲ್ಲಿ ಯಶ್ವಸಿ ಕಾರ್ಯಕ್ರಮವಾಗಿದ್ದು ಜಾತಿ ಮತ ಬೆದವಿಲ್ಲದೆ ಸಮಾಜದ ಎಲ್ಲಾ ಬಡ ಜನಾಂಗ ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ ಈ ಯೋಜನೆಯಿಂದ ತಾಲೂಕಿನಲ್ಲಿ ವಲಸೆ ಕೂಲಿ ಕೆಲಸಕ್ಕಾಗಿ ದೂರದ ನಗರಗಳಿಗೆ ಹೋಗುವುದು ತಪ್ಪಿದೆ ಎಂದರು ನಂತರ ಸಭೆಗೆ ಗೈರುಹಾಜರಾಗುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಶೋಕಾಸ್ ನೀಡುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಾಸಕರು ಸೂಚಿಸಿದರು 

ಈ ಕಾರ್ಯಕ್ರಮದಲ್ಲಿ ತಾ.ಪಂ.ಅದ್ಯಕ್ಷ ಅಶ್ವತಪ್ಪ ಉಪಾದ್ಯಕ್ಷ ಡಿ.ಎನ್.ರವೀಂದ್ರರೆಡ್ಡಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಫಾಲಕ ಆಭಿಯಂತರ ಮಲ್ಲೇಶಪ್ಪ. ಸಮಾಜ ಕಲ್ಯಾಣ ಇಲಾಖೆಯ ನಾಗರಾಜ್, ಅರಣ್ಯಾಧಿಕಾರಿ ಮುನಿನಾರಾಯಣಪ್ಪ, ಜಿ.ಪಂ.ತಾಂತ್ರಿಕ ಇಲಾಖಾಧಿಕಾರಿ ಜಯರಾಮಯ್ಯ, ಎ.ಪಿ.ಎಂ.ಸಿ ಕಾರ್ಯದರ್ಶಿ ದೊಡ್ಡಕೊಂಡಪ್ಪ, ಮುಂತಾದ ಅಧಿಕಾರಿಗಳು ಬಾಗವಹಿಸಿದ್ದರು.

Share: