ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಮದವಣಗಿತ್ತಿಯಂತೆ ಕಂಗೊಳಿಸುತ್ತಿರುವ ಜಿಲ್ಲೆಯ ಮತಗಟ್ಟೆಗಳು

ಕಾರವಾರ: ಮದವಣಗಿತ್ತಿಯಂತೆ ಕಂಗೊಳಿಸುತ್ತಿರುವ ಜಿಲ್ಲೆಯ ಮತಗಟ್ಟೆಗಳು

Mon, 06 May 2024 06:40:00  Office Staff   S O News

ಕಾರವಾರ: ಮತದಾನದ ದಿನವನ್ನು ಹಬ್ಬದಂತೆ ಆಚರಿಸಿ ಎನ್ನುವುದು ಚುನಾವಣಾ ಆಯೋಗದ ಆಶಯ. ಅದಕ್ಕೆ ಪೂರಕವಾಗಿ ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ಅನಾನುಕೂಲವಾಗದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ, ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿರುವ ಆಯೋಗವು, ಮತಗಟ್ಟೆಗಳನ್ನು ಅತ್ಯಾಕರ್ಷಕ ರೀತಿಯಲ್ಲಿ ಶೃಂಗರಿಸುವ ಮೂಲಕ ಮತದಾರರನ್ನು ಮತಗಟ್ಟೆಯೆಡೆಗೆ ಸೆಳೆಯಲು ಕಾರ್ಯಕ್ರಮಗಳನ್ನು ರೂಪಿಸಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೆತ್ರದಲ್ಲಿ ಮೇ 7 ರಂದು ನಡೆಯುವ ಮತದಾನಕ್ಕಾಗಿ ಮತಗಟ್ಟೆಗಳು ಮದುವಣಗಿತ್ತಿಯಂತೆ ಶೃಂಗಾರಗೊಳುತ್ತಿದ್ದು , ಎಲ್ಲರನ್ನೂ ಆಕರ್ಷಿಸುತ್ತಿವೆ.

ಲೋಕಸಭಾ ಚುನಾವಣಾ ಪರ್ವವನ್ನು ಇಡೀ ದೇಶ ಗರ್ವದಿಂದ ಆಚರಿಸಬೇಕು ಎನ್ನುವುದು ಭಾರತ ಚುನಾವಣಾ ಆಯೋಗದ ಘೋಷವಾಕ್ಯ. ಅದರಂತೆ ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯ ಎಲ್ಲಾ ಮತದಾರರು ಮೇ 7 ರಂದು ಮತಗಟ್ಟೆಗೆ ಆಗಮಿಸಿ ಹೆಚ್ಚಿನÀ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಮತದಾರರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮತಗಟ್ಟೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮತದಾರರನ್ನು ಮತಗಟ್ಟೆಗಳಿಗೆ ಅಕರ್ಷಿಸಲು ಮತಗಟ್ಟೆಗಳನ್ನು ಆಕರ್ಷಕ ಮತ್ತು ವೈವಿಧ್ಯಮಯವಾಗಿ ಸಿಂಗರಿಸುತ್ತಿದ್ದು, ಜಿಲ್ಲೆಯಲ್ಲಿ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 66 ವಿಶೇಷ ಮತಗಟ್ಟೆಗಳನ್ನು ಸಿದ್ದಪಡಿಸಲಾಗುತ್ತಿದೆ.:

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರದ ಬೋರಿಬಾಗ ಕಿನ್ನರದಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯು ಸುಣ್ಣಬಣ್ನಗಳಿಮದ ಅಲಕೃಂತಗೊAಡಿದ್ದು, ಶಾಲೆಯ ಆವರಣ ಗೋಡೆಗಳ ಮೇಲೆ ರಚಿಸಿರುವ ಮತದಾನ ಜಾಗೃತಿಯ ಸಂದೇಶ ಸಾರುವ ಚಿತ್ರಗಳು ಮತದಾರರನ್ನು ಅಕರ್ಷಿಸುತ್ತಿದ್ದು, ಶಾಲೆಯ ಒಳಬಾಗದಲ್ಲಿನ ಗೋಡೆಗಳ ಮೇಲೆ , ಹಿರಿಯ ನಗರೀಕರು ಮತ್ತು ವಿಕಲಚೇತನರಿಗ ವೀಲ್ ಚೇರ್ ಸೌಲಭ್ಯ ಇರುವ ಬಗ್ಗೆ ಮತ್ತು ಯಕ್ಷಗಾನದ ಚಿತ್ರದ ಮೂಲಕ ಮತದಾನದ ಸಂದೇಶ ಹಾಗೂ ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸುವ ಕುರಿತಂಎ ಬಿಡಿಸಲಾಗಿರುವ ವರ್ಣಮಯ ಚಿತ್ರಗಳು ಗಮನ ಸೆಳೆಯುತ್ತವೆ..

ಭಟ್ಕಳ ತಾಲೂಕಿನ ಕಿತ್ರೆ ಗ್ರಾಮದ ಪ.ಪಂಗಡ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲಕೃಂತಗೊAಡಿರುವ ಮತಗಟ್ಟೆಯಲ್ಲಿ ಆಕ಼ರ್ಷಕ ಪ್ರವೇಶ ದ್ವಾರ ನಿರ್ಮಿಸಿದ್ದು, ಬುಡಕಟ್ಟು ಸಮುದಾಯದ ವೈವಿಧ್ಯಮಯ ಕಲೆಯನ್ನು ಬಿಂಬಿಸುವ ಮಾದರಿಗಳು ಮತ್ತು ಗೋಡೆಗಳ ಮೇಲೆ ವರ್ಲಿ ಚಿತ್ರಗಳನ್ನು ರಚಿಸುವ ಮೂಲಕ ನೋಡುಗರ ಕಣ್ಮನ ಸೆಳೆಯುವಂತೆ ಸಿಂಗಾರಗೊಳಿಸಲಾಗಿದೆ.

ಯಲ್ಲಾಪುರದ ಉಮ್ಮಚಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ವಿಕಲಚೇತನ ಮತಗಟ್ಟೆಯಲ್ಲಿ, ವರ್ಲಿ ಚಿತ್ತಾರದೊಂದಿಗೆ ಆಕರ್ಷಕ ಪ್ರವೇಶ ದ್ವಾರ , ಶಾಲಾ ಗೋಡೆಗಳ ಆವರಣ ಗೋಡೆಗಳ ಅಲಂಕಾರ ಮತದಾರರನ್ನು ಸೆಳಯುತ್ತದೆ.

ಇದಲ್ಲದೇ ಜಿಲ್ಲೆಯಲ್ಲಿ ಮಹಿಳಾ ಮತದಾರರು ಅಧಿಕವಾಗಿರುವ ಮತಗಟ್ಟೆಗಳಲ್ಲಿ ಒಟ್ಟು 24 ಮಹಿಳಾ ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, ವಿಕಲ ಚೇತನರಿಂದ ನಿರ್ವಹಿಸುವ 10 ವಿಕಲ ಚೇತನ ಮತಗಟ್ಟೆಗಳನ್ನು, ಯುವ ನೌಕರರಿಂದ ನಿರ್ವಹಿಸಲ್ಪಡುವ 16 ಯುವ ಮತಗಟ್ಟೆಗಳನ್ನು ಹಾಗೂ 16 ಮಾದರಿ ಮತಗಟ್ಟೆಗಳನ್ನು ಸಿದ್ದಪಡಿಸಲಾಗುತ್ತಿದೆ.


Share: