ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಬಿಜೆಪಿ ಬಣದಲ್ಲಿ ಒಳಜಗಳ - ಅಧ್ಯಕ್ಷರ ನೇಮಕಾತಿಗೆ ಎರೆಡು ಪಟ್ಟಿ ಬಿಡುಗಡೆ!

ಭಟ್ಕಳ: ಬಿಜೆಪಿ ಬಣದಲ್ಲಿ ಒಳಜಗಳ - ಅಧ್ಯಕ್ಷರ ನೇಮಕಾತಿಗೆ ಎರೆಡು ಪಟ್ಟಿ ಬಿಡುಗಡೆ!

Mon, 04 Jan 2010 15:14:00  Office Staff   S.O. News Service
ಭಟ್ಕಳ, ಜನವರಿ 4: ಭಟ್ಕಳ ಬಿಜೆಪಿ ಬೂತ್ ಮಟ್ಟದ ರಾಜಕಾರಣಕ್ಕೀಗ ಭೂತ ಬಡೆದುಕೊಂಡಿದ್ದು ಸಂಸದ ಮತ್ತು ಮಾಜಿ ಶಾಸಕರಿಬ್ಬರ ಬಣಗಳ ಒಳಕಚ್ಚಾಟದಿಂದಾಗಿ ಬೂತ್ ಮಟ್ಟದ ಅಧ್ಯಕ್ಷರ ನೇಮಕ ವಿಚಾರವಾಗಿ ಈಗ ಎರಡೆರಡು ಪಟ್ಟಿಗಳು ಸಿದ್ದಗೊಂಡು ಪ್ರತ್ಯೇಕವಾಗಿ ಬಿಡುಗಡೆಗೊಂಡಿವೆ, ಇದರಿಂದಾಗಿ ಮುಂದಿನ ದಿನಗಳಲ್ಲಿ ಇಲ್ಲಿ ಬಿಜೆಪಿಗೆ ಭಾರಿ ನಿರಾಶೆಯುಂಟಾಗುವ ಸಂಭವವಿದೆ ಎನ್ನಲಾಗಿದೆ. ಇಲ್ಲಿ ಸ್ವಪಕ್ಷದವರಿಂದಲೆ ಭಾರಿ ವಿರೋದವನ್ನು ಎದುರಿಸುತ್ತಿರುವ ಬಿಜೆಪಿಗರು ಕಟ್ಟಾ ಹಿಂದು ಜಾಗರಣ ಹಿನ್ನೆಲೆಯುಳ್ಳ  ಸಂಸದ ಅನಂತ್ ಕುಮಾರ್ ಒಂದೆಡೆಯಾದರೆ ಮತ್ತೊಂದಡೆ ಸೌಮ್ಯ ಮನೋಭಾವನೆಯು ಗುಂಪುಗಳಲ್ಲಿ ಪರಸ್ಪರ ಪರವಿರೋಧದ ಅಲೆಯಿಂದಾಗಿ ಈಗ ಪಕ್ಷವು ತತ್ತರಿಸುವಂತಾಗಿದೆ. 

ಅನಂತಕುಮಾರ ಬಣದವರೆನ್ನಲಾದ ಗಣೆಶ ನಾಯ್ಕ ಇತ್ತಿಚೆಗಷ್ಟೆ ಬಹಿರಂಗವಾಗಿ ಮಾಜಿ ಶಾಸಕ ಶಿವಾನಂದ ನಾಯ್ಕರ ವಿರುದ್ದ ತೀವ್ರತರವಾದ ವಾಗ್ಧಾಳಿಯನ್ನು ಮಾಡಿದ್ದು ರವಿವಾರದಂದು ಸಹ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ನಾಯ್ಕ ಬಿಜೆಪಿಯಲ್ಲಿನ ಒಳಜಗಳ ನಿಲ್ಲದೆ ಹೋದರೆ ಇದು ದೇವಾರಾಣೆಗೂ ಉದ್ದಾರವಾಗುವುದಿಲ್ಲವೆಂಬ ಭವಿಷ್ಯವಾಣಿಯ ಮೂಲಕ ಬಿಜೆಪಿ ಇನ್ನೇನು ಭಟ್ಕಳದಲ್ಲಿ ನಿರ್ನಾಮದ ಹಂತದಲ್ಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 

ಬಿಜೆಪಿಯಲ್ಲಿ ಗೊಂದಲ ಪರಿಹಾರವಾಗಬೇಕಿದ್ದು ಪ್ರಮುಖವಾಗಿ ಮುಖಂಡರೆಲ್ಲರೂ ಒಂದಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ. ತಮ್ಮ ಗುರು ಅನಂತ ಹೆಗಡೆಯ ಹಾದಿಯನ್ನೆ ತುಳಿದ ಗಣೇಶ ನಾಯ್ಕ ಇಲ್ಲಿ ನಿಷ್ಟಾವಂತರಿಗೆ ಮೂಲೆಗುಂಪುಮಾಡು ಕೆಲಸ ಬಹಳ ವ್ಯವಸ್ಥಿತವಾಗಿ ಮಾಡಲಾಗುತ್ತಿದ್ದು ಪಕ್ಷದಲ್ಲಿ ನಿಷ್ಟೆಯನ್ನು ಇಟ್ಟುಕೊಂಡವರಿಗೆ ಕಡೆಗಣಿಸಲಾಗಿದೆ. ಯಾವುದೆ ಸಿದ್ದಾಂತವಿಲ್ಲದ ಜನ ಪಕ್ಷವನ್ನು ಬುಡಸಹಿತ ಕಿತ್ತುಹಾಕುವರು ಇದು ಇದೇ ರೀತಿ ಮುಂದುವರೆದರೆ ದೇವರಾಣೆಗೂ ಪಕ್ಷ ಅಧೋಗತಿಯನ್ನು ಕಾಣುವುದರಲ್ಲಿ ಸಂದೇಹವೆ ಇಲ್ಲ ಎಂದಿದ್ದಾರೆ.

ಸಂಸದ ಅನಂತಕುಮಾರ ಹಾಗೂ ಶಿವಾನಂದ ನಾಯ್ಕರು ಒಟ್ಟಾಗಿ ಒಂದೆ ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕು ಅಂದಾಗ ಮಾತ್ರ ಇಲ್ಲಿನ ಭಿನ್ನಮತ ಶಮನಗೊಳ್ಳುವುದು. ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು ಪಕ್ಷವನ್ನು ಬಲಗೊಳಿಸಲು ಎಲ್ಲರೂ ಸನ್ನದ್ದರಾಗಬೇಕು ಎಂದು ಅವರು ಕರೆ ನೀಡಿದರು.

ವರದಿ: ಎಮ್ಮಾರ್ ಮಾನ್ವಿ, ಭಟ್ಕಳ 


Share: