ಮಂಜೇಶ್ವರ ನವೆಂ ೩೦ : ಮೀಂಜ ಗ್ರಾಮ ಪಂಚಾಯತಿನ ನೂತನ ಅಧ್ಯಕ್ಷ,ಉಪಾಧ್ಯಕ್ಷ ಪದವಿಗೆ ಇಂದು ಮೀಂಜ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲದೊಂದಿಗೆ ಮುಸ್ಲಿಂ ಬಂಡುಕೋರ ಬೆಲ್ಗಾಂ ಮುಹಮ್ಮದ್ ಕುಞ್ಞ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಬಿ.ಜೆ.ಪಿಯ ಚಂದ್ರಿಕಾ ಎಸ್.ಎನ್ ಭಟ್ ಆಯ್ಕೆಯಾಗಿದ್ದಾರೆ. ಮುಹಮ್ಮದ್ ಕುಞ್ಞ ೬ ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಬಾಸ್ಕರ್ ೪ ಮತ ಪಡೆದರು. ಮುಸ್ಲಿಂ ಲೀಗ್ ಬಂಡಾಯ ಎರಡು ಸದಸ್ಯರುಗಳು ಹಾಗೂ ಬಿ.ಜೆ.ಪಿಯ ನಾಲ್ವರು ಮುಹಮ್ಮದ್ ಕುಞ್ಞ ಪರ ಮತ ಚಲಾಯಿಸಿದರು, ಸಿ.ಪಿ.ಎಂ ನ ಇಬ್ಬರು ಸಭೆಗೆ ಹಾಜರಾಗಿರಲಿಲ್ಲ ಹಾಗೂ ಸಿ.ಪಿ.ಐ ನ ಇಬ್ಬರು ಸದಸ್ಯರು ತಟಸ್ತರಾಗಿ ನಿಂತರು. ಮೀಂಜ ಪಂಚಾಯತಿನ ಒಟ್ಟು ೧೪ ಬಲದ ಆಡಳಿತ ಸಮಿತಿಯಲ್ಲಿ ಬಿ.ಜೆ.ಪಿ ೪, ಮುಸ್ಲಿಂ ಲೀಗ್ ೩, ಕಾಂಗ್ರೆಸ್ ೨, ಸಿ.ಪಿ.ಎಂ ೨, ಸಿ.ಪಿ.ಐ ೨ , ಕೇರಳಾ ಕಾಂಗ್ರೆಸ್ ೧ ಸ್ತಾನಗಳನ್ನು ಹೊಂದಿದೆ.
ಪಂಚಾಯತ್ ಅಧ್ಯಕ್ಞರಾಗಿದ್ದ ಮುಸ್ಲಿಂ ಲೀಗಿನ ಕೂಡೇಲು ಅಬ್ದುಲ್ಲ ಹಾಗೂ ಉಪಾಧ್ಯಕ್ಷೆಯಾಗಿದ್ದ ಶೋಭಾ ಸೋಮಪ್ಪರವರನ್ನು ಅವೀಶ್ವಾಸ ಗೊತ್ತುವಳಿ ಮೂಲಕ ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಮುಸ್ಲಿಂ ಲೀಗಿನ ಇಬ್ಬರು ಸದಸ್ಯರು ಬಂಡಾಯವೆದ್ದು ಆಡಳಿತ ಸಮಿತಿಯನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಅವಿಶ್ವಾಸ ಗೊತ್ತುವಳಿಗೆ ಬಿ.ಜೆ.ಪಿ ಹಾಗೂ ಸಿ.ಪಿ.ಎಂ ಬೆಂಬಲಿಸಿದ್ದರು.
ಚಿತ್ರ, ವರದಿ: ಆರಿಫ್ ಮಂಜೇಶ್ವರ ,ಮಚ್ಚಂಪಾಡಿ