ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಲು ಆಗ್ರಹ

ಸಕಲೇಶಪುರ: ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಲು ಆಗ್ರಹ

Tue, 16 Mar 2010 02:58:00  Office Staff   S.O. News Service
ಸಕಲೇಶಪುರ, ಮಾ.15: ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿಯೆದುರು ಇತ್ತೀಚೆಗೆ ಧರಣಿ ನಡೆಸಿದರು.

ತಾಲೂಕಿನಲ್ಲಿ ಇರುವ ೮ ಹಾಸ್ಟೆಲ್‌ಗಳಲ್ಲಿ ಬಹುತೇಕ ದಲಿತ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ೨ ಕಾಲೇಜು ಹಾಸ್ಟೆಲ್‌ಗಳಲ್ಲಿ ಸುಮಾರು ೧೩೧ ವಿದ್ಯಾರ್ಥಿಗಳಿದ್ದು, ಇವರ ಊಟ ಉಪಚಾರಕ್ಕಾಗಿ ಸರಕಾರ ತಲಾ ಮಾಸಿಕ  ೬೫೦ ರೂ. ನೀಡುತ್ತಿದೆ. ಮೆಟ್ರಿಕ್ ಪೂರ್ವ ಹಾಸ್ಟೆಲ್ ಗಳಲ್ಲಿ ೩೪೦ ವಿದ್ಯಾರ್ಥಿಗಳಿದ್ದು, ಇವರ ಭೋಜನ ವೆಚ್ಚವಾಗಿ ತಿಂಗಳಿಗೆ ತಲಾ ೫೦೦ ರೂ., ಮೊರಾರ್ಜಿ ವಸತಿ ಶಾಲೆಯ ನೂರು ವಿದ್ಯಾರ್ಥಿಗಳಿಗೆ ತಿಂಗಳಿಗೆ ೬೫೦ ರೂ. ನೀಡುತ್ತದೆ. ಆದರೂ ಕೂಡ ಈ ಎಲ್ಲ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಸಮರ್ಪಕ ವಾಗಿ ಊಟ, ಉಪಚಾರ ನಡೆಸುತ್ತಿಲ್ಲ. ನೋಟ್‌ಬುಕ್, ಹಾಸಿಗೆ, ಹೊದಿಕೆ ಹಾಗೂ ಇತರ ಸಾಮಗ್ರಿಗಳನ್ನು ಕಳಪೆ ಗುಣಮಟ್ಟದಲ್ಲಿ ಖರೀದಿಸಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಣ್ಣೇಗೌಡ ವಂಚನೆ ಎಸಗಿರುವುದು ಕಂಡು ಬಂದಿದೆ. ಹಾಸ್ಟೆಲ್ ವ್ಯವಹಾರದಲ್ಲಿ  ಇವರು ಲಕ್ಷಾಂತರ ರೂ. ಭ್ರಷ್ಟಾಚಾರ ನಡೆಸಿದ್ದು, ಕೂಡಲೆ ಅಮಾನತುಗೊಳಿಸಿ ತನಿಖೆ ಕೈಗೊಳ್ಳಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಧರಣಿನಿರತರು ತಹಶೀಲ್ದಾರ್ ಚಂದ್ರಮ್ಮರಿಗೆ ಮನವಿ ಸಲ್ಲಿಸಿದರು.

ದಸಂಸ ವಿಭಾಗೀಯ ಸಂಚಾಲಕ ಎಸ್.ಎನ್. ಮಲ್ಲಪ್ಪ, ರಾಜ್ಯ ಸಂಘಟನಾ ಸಂಚಾಲಕ ಕೆ.ಈರಪ್ಪ, ಸಂಘದ ತಾಲೂಕು ಸಂಚಾಲಕ ರಮೇಶ್, ರಾಮು, ಮೀಸೆ ಮಂಜಯ್ಯ, ಶೇಖು, ನಿಂಗರಾಜು ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.

Share: