ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ

Sat, 01 Jun 2024 02:38:39  Office Staff   S O News

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ತಲೆದೋರಿದ್ದ ಬರದ ಛಾಯೆ ಈ ವರ್ಷ ದೂರವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು, ಪ್ರಸಕ್ತ ಸಾಲಿನ ಮುಂಗಾರು ಮಳೆಯು ರೈತರ ಮೊಗದಲ್ಲಿ ನೆಮ್ಮದಿ ಮತ್ತು ಸಂತಸ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಅತ್ಯಂತ ಬಿರುಸಿನಿಂದ ನಡೆಯುತ್ತಿದ್ದು, ಜಿಲ್ಲೆಯಲ್ಲಿ 14,959 ಮೆಟ್ರಿಕ್ ಟನ್ ರಸಗೊಬ್ಬರ ಹಾಗೂ 5,409 ಕ್ವಿಂಟಲ್ ಭಿತ್ತನೆ ಬೀಜದ ದಾಸ್ತಾನು ಮಾಡಲಾಗಿದ್ದು, ಭಿತ್ತನೆ ಬೀಜ ಹಾಗೂ ರಸಗೊಬ್ಬರದ ವಿತರಣೆ ಕಾರ್ಯವು ಸುಗಮವಾಗಿ ನಡೆಯುತ್ತಿದೆ.

ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗುವ ಕುರಿತಂತೆ ಹವಾಮಾನ ಇಲಾಖೆಯ ಮುನ್ಸೂಚನೆಗಳು ಇದ್ದು, ಇದಕ್ಕೆ ಪೂರಕವೆಂಬAತೆ ಪೂರ್ವ ಮುಂಗಾರು ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಜಿಲ್ಲೆಯ ರೈತರಿಗೆ ಭಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇದ್ದು, ರೈತರು ಯಾವುದೇ ರೀತಿಯ ಆತಂಕ, ಗೊಂದಲಪಡುವ ಅವಶ್ಯಕತೆಯಿಲ್ಲ. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ಮಾಡಲಾಗುತ್ತಿದೆ.: ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿಗಳು ಉತ್ತರ ಕನ್ನಡ 

 ಜಿಲ್ಲೆಯಲ್ಲಿ ಮಾರ್ಚ್ 1 ರಿಂದ ಮೇ 30 ರ ವರೆಗಿನ ಪೂರ್ವ ಮುಂಗಾರು ಮಳೆಯ ವಾಡಿಕೆ ಪ್ರಮಾಣವು 97 ಮಿ.ಮೀ ಇದ್ದು, ಪ್ರಸ್ತುತ 133 ಮಿ.ಮೀ ಮಳೆಯಾಗಿದ್ದು, ಶೇ.38 ರಷ್ಟು ಅಧಿಕವಾಗಿದೆ ಅಲ್ಲದೇ ಜನವರಿ 1 ರಿಂದ ಮೇ 30 ರ ವರೆಗಿನ ಸರಾಸರಿ ಮಳೆಯು 97 ಮಿ.ಮೀ ಇದ್ದದ್ದು 145 ಮಿ.ಮೀ ಸುರಿಯುವ ಮೂಲಕ ಶೇ.49 ರಷ್ಟು ಹೆಚ್ಚಾಗಿದ್ದು, ಇದರಿಂದಾಗಿ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಹೆಚ್ಚು ಭರದಿಂದ ನಡೆಯುತ್ತಿವೆ.

 ಮುಂಗಾರು ಹಂಗಾಮಿನಲ್ಲಿ ಭಿತ್ತನೆಗಾಗಿ ಕಾರವಾರ ತಾಲೂಕಿನಲ್ಲಿ 993 ಹೆಕ್ಟೇರ್, ಅಂಕೋಲಾದಲ್ಲಿ 3865, ಕುಮಟಾ 2639, ಹೊನ್ನಾವರ 1985, ಭಟ್ಕಳ 2426, ಶಿರಸಿ 8255, ಸಿದ್ದಾಪುರ 5772, ಯಲ್ಲಾಪುರ 2931, ಮುಂಡಗೋಡ 12358, ಹಳಿಯಾಳ 20900, ಜೋಯಿಡಾ 3890, ದಾಂಡೇಲಿಯಲ್ಲಿ 700 ಹೆಕ್ಟೇರ್ ಸೇರಿದಂತೆ ಒಟ್ಟು 66,714 ಹೆಕ್ಟೇರ್ ನಲ್ಲಿ ಭಿತ್ತನೆ ಗುರಿ ಹೊಂದಿದ್ದು, ಯಲ್ಲಾಪುರ, ಮುಂಡಗೋಡ,ಹಳಿಯಾಳ, ಜೋಯಿಡಾ ಮತ್ತು ದಾಂಡೇಲಿಯಲ್ಲಿ ಈಗಾಗಲೇ ಒಟ್ಟು 20,934 ಹೆಕ್ಟೇರ್ ನಲ್ಲಿ ಭಿತ್ತನೆ ಕಾರ್ಯ ಮಾಡಲಾಗಿದೆ.

 ಬಿತ್ತನೆ ಬೀಜದ ಬೇಡಿಕೆಯು ಕಾರವಾರ ತಾಲೂಕಿನಲ್ಲಿ 100 ಕ್ವಿಂಟಾಲ್ ಬೇಡಿಕೆ ಇದ್ದು ಅಂಕೋಲಾದಲ್ಲಿ 800, ಕುಮಟಾ 800, ಹೊನ್ನಾವರ 800, ಭಟ್ಕಳ 800, ಶಿರಸಿ 800, ಸಿದ್ದಾಪುರ 400, ಯಲ್ಲಾಪುರ 400, ಮುಂಡಗೋಡ 1000, ಹಳಿಯಾಳ 800, ಜೋಯಿಡಾ 500, ದಾಂಡೇಲಿಯಲ್ಲಿ 50 ಕ್ವಿಂಟಾಲ್ ಸೇರಿದಂತೆ ಒಟ್ಟು 7,250 ಕ್ವಿಂಟಾಲ್ ಬೇಡಿಕೆ ಇದೆ. ಪ್ರಸ್ತುತ 5409 ಕ್ವಿಂಟಾಲ್ ಭಿತ್ತನೆ ಬೀಜ ಪೂರೈಕೆಯಾಗಿದ್ದು, 1884 ಕ್ವಿಂಟಾಲ್ ವಿತರಣೆ ಮಾಡಲಾಗಿದ್ದು 3525 ಕ್ವಿಂಟಾಲ್ ದಾಸ್ತಾನು ಇದೆ. ಭಿತ್ತನೆ ಬೀಜಗಳ ವಿತರಣೆ ಪ್ರಮಾಣ ಅಧಿಕಗೊಂಡಲ್ಲಿ, ಬಾಕಿ ಅಗತ್ಯವಿರುವ ಇನ್ನೂ ಹೆಚ್ಚಿನ ಭಿತ್ತನೆ ಬೀಜಗಳನ್ನು ಸರಬರಾಜುಗೆ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಬೀಜದ ಬೇಡಿಕೆಯು 6150 ಕ್ವಿಂಟಾಲ್ ಮತ್ತು ಮೆಕ್ಕೆಜೋಳ ಬಿತ್ತನೆ ಬೀಜದ ಬೇಡಿಕೆಯು 1100 ಕ್ವಿಂಟಾಲ್ ಇರುತ್ತದೆ.

ಜಿಲ್ಲೆಯಲ್ಲಿ ಪ್ರಸ್ತುತ 10,596 ಮೆ.ಟನ್ ಯೂರಿಯಾ, 548 ಮೆ.ಟನ್ ಡಿ.ಎ.ಪಿ., 605 ಮೆ.ಟನ್ ಎಮ್.ಓ.ಪಿ, 3016 ಮೆ.ಟನ್ ಎನ್.ಪಿ.ಕೆ.ಕಾಂಪ್ಲೆಕ್ಸ್, 191 ಮೆ.ಟನ್ ರಾಕ್ ಫಾಸ್ಪೇಟ್ ಸೇರಿದಂತೆ ಒಟ್ಟು 14,959 ಮೆ.ಟನ್ ರಸಗೊಬ್ಬರದ ದಾಸ್ತಾನು ಇದ್ದು, ರಸಗೊಬ್ಬರದ ಬೇಡಿಕೆ ಹೆಚ್ಚಾದಲ್ಲಿ ಅಗತ್ಯ ಪ್ರಮಾಣದಲ್ಲಿ ಪೂರೈಕೆಗೆ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ.


Share: