ಸಕಲೇಶಪುರ, ಫೆಬ್ರವರಿ 1:ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿ ಅಲ್-ಅಮೀನ್ ಯೂತ್ ಸಮಿತಿ ಆಶ್ರಯದಲ್ಲಿ ದಾರ್ಮಿಕ ಪ್ರವಚನ ಕಾರ್ಯಕ್ರಮ ಅದ್ದೂರಿಯಾಗಿ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಲಕ್ಷದ್ವೀಪ ಕೂರಿಕುಯಿ ಅಸೈಯ್ಯದ್ ಝಸುದ್ದೀನ್, ಜಗತ್ತಿನ ಸಕಲ ಜೀವಿಗಳಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ,ಮಂಗಳೂರು ಶಾಸಕ ಯು.ಟಿ.ಖಾದರ್,ಕಾಂಗ್ರೇಸ್ ಅಧ್ಯಕ್ಷ ಎಚ್.ಪಿ.ಕಾಂತರಾಜ್,ಅಲ್ ಬುಕಾರಿ,ಛೇಲಕ್ಕಾ ಸೈಯದ್ ಇಬ್‌ನು ಮೌಲಾನ ತಂಙಳ್,ಎ.ಎಚ್.ಅಬುಬಕ್ಕರ್,ಜಿ.ಎಮ್.ಮಹಮ್ಮದ್ ಕಾಮೀಲ್ ಸಕಾಫಿ, ನಾಸೀರ್ ಹುಸೇನ್ ರಝ್ವೀ,ನಝೀಬ್ ಅಕ್ರಂ, ಮಲ್ನಾಡ್ ಮೆಹಬೂಬ್, ಪುರಸಭೆ ಸದಸ್ಯರಾದ ಉಮೇಶ್, ಜೈ ಬೀಮ್ ಮಂಜುನಾಥ್, ಹಸೇನಾರ್ ಆನೇಮಹಲ್ ಮಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪುರಸಭೆಯ ಅದ್ಯಕ್ಷ ಇಬ್ರಾಹಿಂ ಯಾದಗಾರ್ ಅವರನ್ನು ಸನ್ಮಾನಿಸಲಾಯಿತು.