ಮಂಗಳೂರು,ಫೆ.01: ನಗರದ ನಂತೂರು ಪದುವಾದಲ್ಲಿ ರಾ.ಹೆದ್ದಾರಿ 17 ರ ಬಳಿ ಇರುವ ಮಂಗಳೂರು ಕ್ಯಾಥೊಲಿಕ್ ಧರ್ಮ ಪ್ರಾಂತ್ಯದ ಸಮಾಜ ಸೇವಾ ಸಂಸ್ಥೆ ಸಿಒಡಿಸಿ (ಕೆನರಾ ಅರ್ಗನೈಜೇಶನ್ ಫೋರ್ ಡೆವಲಪ್ ಮೆಂಟ್ ಯಂಡ್ ಪೀಸ್) ಕಟ್ಟಡಕ್ಕೆ ಶನಿವಾರ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಕಟ್ಟದ ಮೇರಿ ಮಾತೆಯ ಭಾವಚಿತ್ರಕ್ಕೆ ಅಳವಡಿಸಿದ್ದ ಗಾಜು ಹಾನಿಗೊಳಿಸಿರುವುದನ್ನು ಖಂಡಿಸಿ ಕ್ರೈಸ್ತ ಭಾಂದವರು ನಗರದಲ್ಲಿಂದು ಮೌನ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ನಡೆದ ಈ ಪ್ರತಿಭಟನೆಯ ನೇತ್ರತ್ವ ವಹಿಸಿದ ಕ್ರೈಸ್ತ ಮುಂದಾಳು ರೋಯ್ ಕ್ಯಾಸ್ಟೋಲಿನೋ ಮಾತನಾಡಿ ಶನಿವಾರದ ಘಟನೆಯ ಬಗ್ಗೆ ಖಂಡಿಸಿದರಲ್ಲದೇ ಇದು ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡಿ ಜಾತಿ ಧರ್ಮಗಳ ನಡುವೆ ವೈಷಮ್ಯ ಬೆಳೆಸಲು ಕಿಡಿಗೇಡಿಗಳು ಮಾಡುತ್ತಿರುವ ಸಂಚು, ಇದನ್ನು ಎಲ್ಲರೂ ಖಂಡಿಸಬೇಕು ಹಾಗೂ ಕ್ರತ್ಯ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಎ.ಐ.ಸಿ.ಯು.ಎಫ್, ಐ.ಎಫ್.ಕೆ.ಎಲ್.ಎ, ಕೊಂಕಣಿ ಯುವ ಅವಾಜ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ನೂರಾರು ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ವರದಿ:ಕೆ.ಎಸ್.ಕಾಪಿಕಾಡ್
ಸೌಜನ್ಯ: ಗಲ್ಫ್ ಕನ್ನಡಿಗ